Highest Paid Director: ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರು ಇವರೇ ನೋಡಿ!

Latest news cinima news Highest Paid Director He is the highest paid director in India

Highest Paid Director: ಒಂದು ಸಿನಿಮಾ ಅದ್ಭುತವಾಗಿ ಮೂಡಿ ಬರಬೇಕಾದರೆ ಅದರ ಹಿಂದೆ ನಟ, ನಟಿಯರು, ನಿರ್ಮಾಪಕರು ಇವರೆಲ್ಲಾ ಪರಿಶ್ರಮ ಮುಖ್ಯ. ಇದರ ಜೊತೆಗೆ ಇವರನ್ನು ಒಂದೇ ಚೌಕಟ್ಟಿನಲ್ಲಿ ಬರುವಂತೆ ಮಾಡುವ ಮುಖ್ಯ ಜವಾಬ್ದಾರಿ ನಿರ್ದೇಶಕರದ್ದಾಗಿರುತ್ತದೆ. ಹಾಗಾಗಿ ನಿರ್ದೇಶಕರ ಪಾತ್ರ ಬಹಳ ಅಗಾಧವಾದದ್ದು. ಈಗ ನಮ್ಮ ಭಾರತದಲ್ಲಿ ಅನೇಕ ಭಾಷೆಗಳ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಅನೇಕ ನಿರ್ದೇಶಕರು ಇರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಈಗಿನ ದಿನಗಳಲ್ಲಿ ಈ ಚಿತ್ರ ನಿರ್ದೇಶಕರ (Director) ಸಂಭಾವನೆಯನ್ನು ನೀವು ಕೇಳಿದರೆ, ಆಶ್ಚರ್ಯ ಪಡುವುದು ಖಂಡಿತ.

ಬಾಲಿವುಡ್ ನಲ್ಲಿ ರಾಜ್‌ಕುಮಾರ್ ಹಿರಾನಿ, ಇಮ್ತಿಯಾಜ್ ಅಲಿ, ರೋಹಿತ್ ಶೆಟ್ಟಿ, ಅವರಂತಹ ಅನೇಕ ಜನಪ್ರಿಯ ನಿರ್ದೇಶಕರಿದ್ದಾರೆ. ಇನ್ನು, ತೆಲುಗು ಚಿತ್ರೋದ್ಯಮದಲ್ಲಿ ರಾಜಮೌಳಿ ಮತ್ತು ಕನ್ನಡ ಚಿತ್ರೋದ್ಯಮಕ್ಕೆ ಬಂದರೆ ಪ್ರಶಾಂತ್ ನೀಲ್ ಅವರು, ಹೀಗೆ ತುಂಬಾನೇ ದೊಡ್ಡ ಮಟ್ಟದಲ್ಲಿ ಗಲ್ಲಾ ಪೆಟ್ಟಿಗೆಯಿಂದ ಹಣವನ್ನು ಬಾಚಿದ, ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರು ಇದ್ದಾರೆ. ಈ ಎಲ್ಲಾ ನಿರ್ದೇಶಕರ ಪೈಕಿ ನಮ್ಮ ಭಾರತ ದೇಶದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ( Highest Paid Director) ಯಾರು ಗೊತ್ತೇ? ಕೇವಲ 44 ನೇ ವಯಸ್ಸಿನಲ್ಲಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿರ್ದೇಶಕ ಅಂತ ಹೇಳಿದರೆ ತಪ್ಪಾಗಲಾರದು.

ಹೌದು, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎನಿಸಿಕೊಂಡವರು ಬೇರೆ ಯಾರೂ ಅಲ್ಲ, ಬಾಲಿವುಡ್ ನಟ ಶಾರುಖ್ ಖಾನ್ ಅವರ ಅಭಿನಯದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ‘ಪಠಾಣ್’ ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರಾಗಿದ್ದಾರಂತೆ. ಈ ಚಿತ್ರವೊಂದೇ 500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಗಳಿಸಿದೆ.

ಬಾಲಿವುಡ್ ಹಂಗಾಮಾದ ವರದಿಯ ಪ್ರಕಾರ, ‘ಟೈಗರ್ ವರ್ಸಸ್ ಪಠಾಣ್’ ಚಿತ್ರಕ್ಕಾಗಿ ಸಿದ್ಧಾರ್ಥ್ ಆನಂದ್ ಗೆ ನಿರ್ಮಾಪಕರು 40 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ. ಇದು ಈವರೆಗೆ ಯಾವುದೇ ನಿರ್ದೇಶಕರು ಪಡೆದಿರುವ ಅತ್ಯಧಿಕ ಶುಲ್ಕ ಎನ್ನಲಾಗಿದೆ. ಈ ಶುಲ್ಕವು ಎಷ್ಟು ಹೆಚ್ಚಾಗಿದೆ ಎಂದರೆ, ಅವರು ಭಾರತದಲ್ಲಿ ಅತೀ ಹೆಚ್ಚು ಗಳಿಕೆಯ ನಿರ್ದೇಶಕರಾಗಿದ್ದಾರೆ.

ವರದಿಗಳ ಪ್ರಕಾರ, ಸಿದ್ಧಾರ್ಥ್ ಆನಂದ್ ಅವರ ಶುಲ್ಕವು ಬಾಹುಬಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಮತ್ತು ಪಿಎಸ್ 1,2 ನಿರ್ದೇಶಕ ಮಣಿರತ್ನಂ ಅವರಿಗಿಂತ ಹೆಚ್ಚಾಗಿದೆ. ಸಿದ್ಧಾರ್ಥ್ ಆನಂದ್ ಅವರು ಬಾಲಿವುಡ್ ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕರ ಪಟ್ಟಿಯಲ್ಲಿ ಅಯಾನ್ ಮುಖರ್ಜಿ ಅವರನ್ನು ಹಿಂದಿಕ್ಕಿದ್ದಾರೆ ಎಂದು ಹೇಳಲಾಗಿದೆ.

‘ಸಲಾಮ್ ನಮಸ್ತೆ’, ‘ತಾರಾ ರಂ ಪಮ್’, ‘ಬಚ್ನಾ ಇ ಹಸಿನೋ’, ‘ಅಂಜನಾ ಅಂಜನಿ’, ‘ಬ್ಯಾಂಗ್ ಬ್ಯಾಂಗ್’, ‘ವಾರ್’ ಮತ್ತು ‘ಪಠಾನ್’ ಸೇರಿದಂತೆ ಇದುವರೆಗೆ 7 ಚಿತ್ರಗಳು ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ.

Leave A Reply

Your email address will not be published.