Home National Manipur Violence: ಮಹಿಳೆಯರ ಒತ್ತಾಯಕ್ಕೆ ಮಣಿದ ಸೇನೆ; 12 ಉಗ್ರರ ಬಿಡುಗಡೆ

Manipur Violence: ಮಹಿಳೆಯರ ಒತ್ತಾಯಕ್ಕೆ ಮಣಿದ ಸೇನೆ; 12 ಉಗ್ರರ ಬಿಡುಗಡೆ

Manipur violence
Image source: India today

Hindu neighbor gifts plot of land

Hindu neighbour gifts land to Muslim journalist

Manipur Violence: ಮಣಿಪುರದಲ್ಲಿ ಹಿಂಸಾಚಾರ(Manipur Violence)  ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ಈ ಗಲಭೆ ಭುಗಿಲೆದ್ದಿದ್ದು, ಇದನ್ನು ನಿಲ್ಲಿಸಲು ನಾನಾ ಪ್ರಯತ್ನಗಳನ್ನು ಮಾಡಲಾಗಿದೆಯಾದರೂ ಇನ್ನೂ ಗಲಭೆ ನಿಂತಿಲ್ಲ. ಜೊತೆಗೆ ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಕೂಡಾ ಹೇರಲಾಗಿದೆ. ಇದಲ್ಲದೆ ಮಹಿಳಾ ಗುಂಪಿನ ಒತ್ತಾಯದ ಕಾರಣದಿಂದ 12 ಉಗ್ರರನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿ ಕೂಡಾ ಬಂದಿದೆ. ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಹಿಳೆಯರು ಉಗ್ರರನ್ನು ರಕ್ಷಿಸಿದ ಘಟನೆ ಇದೊಂದೇ ಅಲ್ಲ. ಈ ಮೊದಲು ಕೂಡಾ ಇಂತಹ ಘಟನೆ ನಡೆದಿದೆ ಎಂದು ವರದಿಯಾಗಿದೆ. ಸುಮಾರು 1500 ಮಹಿಳೆಯರ ನೇತೃತ್ವದ ಗುಂಪೊಂದು ಶೋಧ ಕಾರ್ಯಾಚರಣೆಯನ್ನು ವಿಫಲಗೊಳಿಸಿ, ನಂತರ 12 ಉಗ್ರರನ್ನು ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಿದೆ.

ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಸೇರಿ, ಏಕಾಏಕಿ ಉಗ್ರರನ್ನು ಪಡೆದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ಮಹಿಳೆಯರ ಒತ್ತಡಕ್ಕೆ ಮಣಿದ ಸೇನೆ ಉಗ್ರರನ್ನು ಬಿಡುಗಡೆ ಮಾಡಿದೆ. ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ಮಣಿಪುರದಲ್ಲಿ ಆದಿವಾಸಿ ಪಂಗಡಗಳ ಆಕ್ರೋಶ ತೀವ್ರಗೊಂಡಿದ್ದು, ಹಲವಾರು ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಹಿಳೆಯರೇ ಎಚ್ಚರ! ಸ್ನಾನದ ವೀಡಿಯೋ ಮಾಡುತ್ತಿದ್ದ ಕಾಮುಕ ಅರೆಸ್ಟ್‌!