Haveri lokasabha Constituency: ಹಾವೇರಿ ಲೋಕಸಭಾ ಕ್ಷೇತ್ರದಿಂದ ಈಶ್ವರಪ್ಪ ಪುತ್ರ ಕಣಕ್ಕೆ..!? ಹಾಗಿದ್ರೆ ಹಾಲಿ ಸಂಸದರ ಕಥೆಯೇನು?

Latest Karnataka election haveli Loksabha constituency son aspirant for Haveri parliament ticket says KS Eshwarappa

Haveri loksabha Constituency: 2024ರಲ್ಲಿ ಬರುವ ಲೋಕಸಭಾ ಚುನಾವಣೆಗಾಗಿ(Parliament election) ಈಗಾಗಲೇ ಪಕ್ಷಗಳು ತಯಾರಿ ಶುರುಹಚ್ಚಿಕೊಂಡಿದ್ದಾರೆ. ಟಿಕೆಟ್ ಹಂಚಿಕೆ ವಿಚಾರ, ಟಿಕೆಟ್ ಆಕಾಂಕ್ಷಿಗಳ ವಿಷಯಗಳು ಕೂಡ ಆಗಾಗ ಹೊರಬರುತ್ತಿವೆ. ಅಂತೆಯೇ ಇದೀಗ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರ ಮುನ್ನಲೆಗೆ ಬಂದಿದ್ದು, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ(K S Eshwarappa) ಅವರ ಮಗ ಕಾಂತೇಶ್ ಈಶ್ವರಪ್ಪ ಅವರು ಬಿಜೆಪಿಯಿಂದ ಕಣಕ್ಕಿಳಿಯುವ ಬಗ್ಗೆ ಚರ್ಚೆಯಾಗುತ್ತಿದೆ.

ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ(karnataka Assembly election) ಶಿವಮೊಗ್ಗ ಕ್ಷೇತ್ರದ ನಿಕಟಪೂರ್ವ ಶಾಸಕರಾಗಿದ್ದ ಕೆ ಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ನಿರಾಕರಿಸಿ ಚೆನ್ನಬಸಪ್ಪ(Chennabasappa) ಎಂಬುವವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಈ ವೇಳೆ ಈಶ್ವರಪ್ಪ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಗುಸು ಗುಸು ಶುರವಾಗಿತ್ತು. ಆದರದು ಕೈ ತಪ್ಪಿತ್ತು. ಸದ್ಯ ಇದೀಗ ಕಾಂತೇಶ್(Kantesh) ಅವರು ಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ( Haveri loksabha Constituency) ಟಿಕೆಟ್ ಆಕಾಂಕ್ಷಿ ಆಗಿದ್ದಾರಂತೆ. ಈ ಕುರಿತು ಸ್ವತಃ ಈಶ್ವರಪ್ಪನವರೇ ಬಹಿಂಗಪಡಿಸಿದ್ದಾರೆ.

ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂತೇಶ್, ಹಾವೇರಿ ಕ್ಷೇತ್ರದಿಂದ ಸ್ಪರ್ಧಿಸುವ ಅಪೇಕ್ಷೆ ಹೊಂದಿದ್ದಾರೆ. ಟಿಕೆಟ್‌ ನೀಡುವಾಗ ಪಕ್ಷದ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕಿದೆ. ಹಾಲಿ ಸಂಸದ ಶಿವಕುಮಾರ ಉದಾಸಿ(Shivkumar udasi) ಅವರು ವೈಯಕ್ತಿಕ ಕಾರಣಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಕಾಂತೇಶ ಇಲ್ಲಿಂದ ಸ್ಪರ್ಧಿಸಲು ಇಚ್ಛಿಸಿದ್ದಾರೆ. ಹಲವು ನಾಯಕರು ಹಾಗೂ ಮುಖಂಡರಿಗೂ ಕಾಂತೇಶ ಸ್ಪರ್ಧಿಸಲಿ ಎಂಬ ಬಯಕೆಯಿದೆ ಎಂದು ಹೇಳಿದರು.

ಅಲ್ಲದೆ 1992ರಲ್ಲಿ 116 ಸೀಟು ಕೊಟ್ಟಿದ್ದೇವು. ಆಗ ಟಿಕೆಟ್‌ ಕೇಳುವವರು ಇರಲಿಲ್ಲ. ಈ ಆಕಾಂಕ್ಷಿಗಳು ತುಂಬಾ ಜನರಿದ್ದಾರೆ. ಅಂದರೆ ನಮ್ಮ ಪಕ್ಷದ ಬೆಳವಣಿಗೆ ಅಂತಹದು. 4 ಸೀಟ್‌ನಿಂದ 40 ಸೀಟು ಗೆದ್ದಿದ್ದೇವೆ. ಲೋಕಸಭೆಯಲ್ಲಿ 2 ಸೀಟಿನಿಂದ ಈಗ 300 ದಾಟಿದ್ದೇವೆ. ಕೇಂದ್ರ ಹಾಗೂ ರಾಜ್ಯ ನಾಯಕರನ್ನು ಗೌರವಿಸುವ ಜತೆಗೆ ಅವರ ತೀರ್ಮಾನಕ್ಕೆ ಬದ್ಧರಾಗಿ ಹೋರಾಡಿ ಅಭ್ಯರ್ಥಿ ಗೆಲ್ಲಿಸಬೇಕು. ಮೋದಿ ಸೋತರೆ, ದೇಶವೇ ಸೋತಂತೆ. ಈಗಲೇ ಎಚ್ಚೆತ್ತುಕೊಳ್ಳಿ. ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿರುವ ಪಕ್ಷದ್ರೋಹಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಿ, ಸಂಘಟನೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು

ಅಲ್ಲದೆ ಜನವರಿಯಲ್ಲಿ ಅಯೋಧ್ಯೆ ಮಂದಿರ ಉದ್ಘಾಟನೆಯಾಗಲಿದೆ. ಏಕನಾಗರಿಕ ಕಾಯ್ದೆ ಜಾರಿಗೊಳಿಸಬೇಕಿದೆ. ದೇಶ ಉಳಿಸಲು ಬಿಜೆಪಿಗೆ ಮತ ನೀಡಬೇಕು. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಾಡಬೇಕು ಎಂದು ಹೇಳಿದರು.

ಇದನ್ನೂ ಓದಿ: Coffee Board Recruitment 2023: ಕಾಫಿ ಬೋರ್ಡ್‌ನಲ್ಲಿ ಉದ್ಯೋಗವಕಾಶ, ಮಾಸಿಕ ವೇತನ ರೂ.30ಸಾವಿರ, ಹೆಚ್ಚಿನ ಮಾಹಿತಿ ಇಲ್ಲಿದೆ

Leave A Reply

Your email address will not be published.