R Ashok-Muniyappa: ನಮ್ಮನ್ನು ಯಾಕೆ ಕೇಳ್ತೀರಾ, ಅಕ್ಕಿ ಕೊಡುವುದು ನಿಮ್ಮ ಹಣೆಬರಹ: ಮುನಿಯಪ್ಪ ಹೇಳಿಕೆಗೆ ಆರ್ ಅಶೋಕ್ ತಿರುಗೇಟು
latest news politics anna bhagy scheme R Ashok replied to Muniyappa's statement
R Ashok-Muniyappa: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಕ್ಕಿ ವಿಚಾರದ ಕುರಿತು ಇದೀಗ ಮಾಜಿ ಸಚಿವ ಆರ್. ಅಶೋಕ್(R Ashok) ಆಹಾರ ಸಚಿವ ಕೆ.ಎಚ್. ಮುನಿಯಪ್ಪ(KH Muniyappa) ವಿರುದ್ಧ(R Ashok-Muniyappa) ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಅಶೋಕ್,” ಕೇಂದ್ರ ಸಚಿವ ಪಿಯೂಷ್ ಗೋಯಾಲ್ ಅಕ್ಕಿ ಕೊಡಲು ನಿರಾಕರಿಸಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ(KH Muniyappa) ಮಾಡಿದ ಆರೋಪ ಸರಿಯಿಲ್ಲ. ಈಗಾಗಲೇ ಪಿಯೂಷ್ ಗೋಯಲ್ ಅವರು ಮೂರು ದಿನಗಳ ಹಿಂದೆಯೇ ಪ್ರೆಸ್ ಮೀಟ್ ಮಾಡಿದ್ದು, ಕೇಂದ್ರದ ಬಳಿ ಇರುವ ಅಕ್ಕಿಯನ್ನು ಯಾವೆಲ್ಲಾ ರಾಜ್ಯಕ್ಕೆ ಕೊಡಬೇಕು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ”.
“ಮುಂಗಾರು ಮಳೆ ವಿಳಂಬವಾಗುತ್ತಿದ್ದು, ಪ್ರವಾಹ, ಬರ ಬಂದಂತಹ ಸಂದರ್ಭದಲ್ಲಿ ಅಕ್ಕಿಯನ್ನು ಪೂರೈಕೆ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಿದ್ದೀರಾ. ಬೇರೆ ಯಾವ ರಾಜ್ಯಕ್ಕಾದರೂ ಹೆಚ್ಚುವರಿ ಅಕ್ಕಿ ಕೊಟ್ಟಿದ್ದಾರಾ? ಯಾಕೆ ನೀವೇನು ಸ್ಪೆಷಲಾ?”. ಎಂದು ರಾಜ್ಯ ಸರ್ಕಾರದ(State Government) ವಿರುದ್ಧ ಗುಡುಗಿದ್ದಾರೆ.
“ಬಡಜನರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದು ಕಾಂಗ್ರೆಸ್ನವರು ಬಿಜೆಪಿಯಲ್ಲ! ನಮ್ಮನ್ನು ನೀವು ಯಾಕೆ ಪ್ರಶ್ನಿಸುತ್ತೀರಾ? ಅಕ್ಕಿ ಕೊಡುವುದು ನಿಮ್ಮ ಹಣೆಬರಹ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದು ನೀವು. ನೀವೇ ಈಗ 10 ಕೆಜಿ ಅಕ್ಕಿ ಕೊಡಬೇಕು. ಅದು ನಿಮ್ಮ ಕರ್ತವ್ಯ, ನಿಮ್ಮ ಧರ್ಮ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಂದೆಡೆ ಕೇಂದ್ರ ಸರ್ಕಾರ(Central Government) ಕೊಡುತ್ತಿಲ್ಲ ಎಂದ ಹೇಳುತ್ತಾರೆ. ಮತ್ತೊಂದೆಡೆ ಯಾರು ಕೊಡದಿದ್ದರೂ ಪೂರೈಕೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. ಹಾಗಾದ್ರೆ ಕೊಡಿ ಯಾಕೆ ಕೇಂದ್ರ ಸರ್ಕಾರಕ್ಕೆ ಕೇಳುತ್ತೀರಾ? ಹಣವಿದ್ದರೆ ಅಕ್ಕಿ ಖರೀದಿ ಮಾಡಿ ಕೊಡಿ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಆರ್.ಅಶೋಕ್ ನೇರ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: Nalin Kumar Kateel : ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಪ್ರಹಸನ- ‘ಇಲ್ಲ’ ಎಂದು ರಾಜ್ಯ ಬಿಜೆಪಿ ಸ್ಪಷ್ಟನೆ!