Malayalam Film Industry: ಮಲಯಾಳಂ ಸಿನಿರಂಗದ ನಿಷೇಧದಿಂದ ನಟನಿಗೆ ರಿಲೀಫ್ ; ಮತ್ತೋರ್ವನ ನಿಷೇಧ ತೆರವಿಗೆ ಚರ್ಚೆ !
latest news cini news Relief for actor from Malayalam Film Industry ban
Malayalam Film Industry: ಈ ಹಿಂದೆ ಮಲಯಾಳಂ (Malayalam Film Industry) ಸಿನಿಮಾದ ಇಬ್ಬರು ಯುವ ನಟರಾದ ಶ್ರೀನಾಥ್ ಬಾಸಿ (Sreenath Bhasi) ಮತ್ತು ಶೇನ್ ನಿಗಮ್ (Shane Nigam) ಅವರನ್ನು ಬ್ಯಾನ್ ಮಾಡಲಾಗಿತ್ತು. ಸೆಟ್ ನಲ್ಲಿ ಈ ನಟರಿಬ್ಬರು ಮಾದಕ ವ್ಯಸನದ ಗುಂಗಿನಲ್ಲಿರುತ್ತಿದ್ದರು. ಇದರಿಂದ ಚಿತ್ರತಂಡಕ್ಕೆ ಇತರರಿಗೆ ತೊಂದರೆಯಾಗುತ್ತಿತ್ತು ಎಂಬ ಕಾರಣಕ್ಕೆ ಈ ಯುವನಟರನ್ನು ಬ್ಯಾನ್ ಮಾಡಲಾಗಿತ್ತು.
ಇದೀಗ ನಟ ಶೇನ್ ನಿಗಮ್ ಮೇಲೆ ಹೇರಿದ್ದ ನಿಷೇಧವನ್ನು ಮಲಯಾಳಂ ಚಿತ್ರರಂಗ ಹಿಂಪಡೆದಿದೆ. ಆದರೆ ನಟ ಶ್ರೀನಾಥ್ ಬಾಸಿ ಮೇಲಿನ ನಿಷೇಧ ಇನ್ನೂ ತೆರವಾಗಿಲ್ಲ. ಈತನ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ.
ಶೇನ್ ನಿಗಮ್ ಹಾಗೂ ಶ್ರೀನಾಥ್ ಬಾಸಿ ಇಬ್ಬರೂ ನಿಷೇಧ ತೆರವು ಮಾಡುವಂತೆ ಮನವಿ ಮಾಡಿದ್ದು, ಈ ಹಿನ್ನೆಲೆ ಚರ್ಚೆ ಮಾಡಿ ಶೇನ್ ನಿಗಮ್ ಮೇಲಿನ ನಿಷೇಧ ತೆರವು ಮಾಡಲಾಗಿದೆ. ಆದರೆ ಶ್ರೀನಾಥ್ ಮೇಲೆ ಹೇರಿರುವ ನಿಷೇಧ ತೆರವು ಮಾಡುವ ಕುರಿತಾಗಿ ಚರ್ಚೆ ನಡೆಯುತ್ತಿದೆ. ಶ್ರೀನಾಥ್ ಬಗ್ಗೆ ಶನಿವಾರ ತೆರವು ತೀರ್ಮಾನ ಪ್ರಕಟಿಸಲಾಗುತ್ತದೆ.
ನಿರ್ಮಾಪಕರ ಸಂಘ ಇವರಿಬ್ಬರಿಗೆ ನಿಷೇಧ ಹೇರಿದ್ದು, ಇದಕ್ಕೆ ಕಾರಣ, ಚಿತ್ರೀಕರಣದ ಸೆಟ್ ನಲ್ಲಿ ಇವರ ವರ್ತನೆ. ಸೆಟ್ ನಲ್ಲಿ ಈ ನಟರಿಬ್ಬರು ಮಾದಕ ವ್ಯಸನದ ಗುಂಗಿನಲ್ಲಿರುತ್ತಿದ್ದರು. ಇದರಿಂದ ಚಿತ್ರತಂಡಕ್ಕೆ ಇತರರಿಗೆ ತೊಂದರೆಯಾಗುತ್ತಿತ್ತು.
ತಮ್ಮ ವರ್ತನೆ ಸರಿ ಇಲ್ಲ ಎಂದು ಎಷ್ಟೇ ಹೇಳಿದರೂ ಸರಿಪಡಿಸಿಕೊಳ್ಳದೇ ಇದ್ದಾಗ, ಸಂಘ ಎಚ್ಚರಿಕೆ ನೀಡಿದ್ದು, ಆದರೂ ಇವರಿಬ್ಬರು ಯಾವುದನ್ನೂ ಲೆಕ್ಕಕ್ಕಿಟ್ಟಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಇವರಿಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡಬಾರದು ಎಂದು ನಿರ್ಮಾಪಕರ ಸಂಘ ಮತ್ತು ಫಿಲಂ ಎಂಪ್ಲಾಯಿ ಅಸೋಸಿಯೇಷನ್ ಆಫ್ ಕೇರಳ ಜಂಟಿಯಾಗಿ ತೀರ್ಮಾನಿಸಿ ಏಪ್ರಿಲ್ ತಿಂಗಳಿನಲ್ಲಿ ಈ ಇಬ್ಬರು ನಟರ ಮೇಲೆ ನಿಷೇಧವನ್ನು ಮಲಯಾಳಂ ಚಿತ್ರತಂಡ ಹೇರಿತ್ತು.
ಅಷ್ಟೇ ಅಲ್ಲ ಶೇನ್ ನಿಗಮ್ ಮೇಲೆಯೂ ಆರೋಪಗಳಿದ್ದವು. ಆರ್ಡಿಎಕ್ಸ್ ಸಿನಿಮಾದ ನಿರ್ದೇಶಕರೊಟ್ಟಿಗೆ ಭಿನ್ನಾಭಿಪ್ರಾಯದಿಂದಾಗಿ ಶೇನ್ ನಿಗಮ್ ಚಿತ್ರೀಕರಣ ಬಿಟ್ಟು ಹೊರಹೋಗಿದ್ದರು. ಇದರಿಂದಾಗಿ ಸಿನಿಮಾದ ಚಿತ್ರೀಕರಣ ನಿಂತು ಹೋಗಿ ನಿರ್ಮಾಪಕರಿಗೆ ಭಾರೀ ನಷ್ಟವಾಗಿತ್ತು. ಆದರೆ ಈಗ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿ ಶೇನ್ ಮೇಲೆ ಹೇರಿದ್ದ ನಿಷೇಧ ಹಿಂಪಡೆಯಲಾಗಿದೆ.
ಇದನ್ನು ಓದಿ: America: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಕಾಲಿಗೆರಗಿ, ಭಾವುಕರಾದ ಅಮೆರಿಕಾದ ಖ್ಯಾತ ಗಾಯಕಿ!!