Home Karnataka State Politics Updates Yashpal Suvarna: ಯಶ್‌ಪಾಲ್ ಸುವರ್ಣರಿಗೆ ಜೀವ ಬೆದರಿಕೆ : ಆರೋಪಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

Yashpal Suvarna: ಯಶ್‌ಪಾಲ್ ಸುವರ್ಣರಿಗೆ ಜೀವ ಬೆದರಿಕೆ : ಆರೋಪಿ ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

Yashpal Suvarna

Hindu neighbor gifts plot of land

Hindu neighbour gifts land to Muslim journalist

Yashpal Suvarna: ಉಡುಪಿ : ಕಳೆದ ವರ್ಷದ ಜೂನ್ ತಿಂಗಳಲ್ಲಿ , ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ , ಶಾಸಕ ಯಶಪಾಲ್ ಸುವರ್ಣ ಅವರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ಆರೋಪಿಯನ್ನು ಕಾಪು ಪೊಲೀಸರು ಜೂ. 22ರಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಮಂಗಳೂರು ಬಜಪೆ ನಿವಾಸಿ ಮಹಮ್ಮದ್ ಆಸಿಫ್ (32) ಬಂಧಿತ ಆರೋಪಿ.

ಕಳೆದ ಜೂನ್ ತಿಂಗಳಿನಲ್ಲಿ ಕರಾವಳಿಯಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದ ಸಂದರ್ಭ ಯಶಪಾಲ್ ಸುವರ್ಣ (Yashpal Suvarna) ಅವರಿಗೆ ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಆರೋಪಿಗಳನ್ನು ಬಂಧಿಸುವಂತೆ ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಕಾಪು ಠಾಣೆಗೆ ದೂರು ನೀಡಿದ್ದರು.

ಪ್ರಮುಖ ಆರೋಪಿ ಬಜಪೆ ಸಮೀಪದ ಕೆಂಜಾರು ನಿವಾಸಿ ಮಹಮ್ಮದ್ ಶಾಫಿ (26)ಯನ್ನು ಕಾಪು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.ಇನ್ನೋರ್ವ ಆರೋಪಿ ಆಸಿಫ್ ತಲೆಮರೆಸಿಕೊಂಡಿದ್ದ.

ಆತ ವಿದೇಶದಿಂದ ಬಂದು ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 

ಇದನ್ನು ಓದಿ: Matte maduve: ‘ಮತ್ತೆ ಮದುವೆ’ಗೆ ಮತ್ತೊಂದು ಸಂಕಷ್ಟ ; ಅಮೆಜಾನ್ ಪ್ರೈಮ್ ಸ್ಟ್ರೀಮಿಂಗ್ ಸ್ಥಗಿತ ! ಕಾರಣ ಏನು ಗೊತ್ತಾ ?!