Cristiano Ronaldo: ಕ್ಯಾಮರಾಮ್ಯಾನ್‌ಗೆ ತುಂಬಾ ಜೂಮ್ ಮಾಡ್ಬೇಡಿ ಎಂದ ಫುಟ್ಬಾಲ್​ ದಿಗ್ಗಜ ರೊನಾಲ್ಡೊ ; ಯಾಕೆ ಗೊತ್ತಾ?

Sports news Football player Cristiano Ronaldo told the cameraman not to zoom too much

Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರು ಪುಟ್​ಬಾಲ್​ ಲೋಕದ ಕಿಂಗ್. ಇಡೀ ವಿಶ್ವದ ಮೂಲೆ ಮೂಲೆಯಲ್ಲೂ ರೊನಾಲ್ಡೊಗೆ ಅಭಿಮಾನಿಗಳ ಬಳಗ ಇದೆ. ಆಟ, ಆದಾಯ ಗಳಿಕೆ ಮತ್ತು ಜನಪ್ರಿಯತೆಯಲ್ಲೂ ಜಗತ್ ಪ್ರಸಿದ್ಧ ಫುಟ್ಬಾಲ್​ ದಿಗ್ಗಜನ ಹೆಸರು ಮುಂಚೂಣಿಗೆ ಬರುತ್ತದೆ.

 

ಫುಟ್​ಬಾಲ್​ ಇತಿಹಾಸದಲ್ಲಿ ರೊನಾಲ್ಡೊ ಇತ್ತೀಚೆಗೆ ಮತ್ತೊಂದು ದಾಖಲೆ ಬರೆದಿದ್ದಾರೆ. ಪೋರ್ಚುಗಲ್ ದೇಶದ 200ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದಿದ್ದರು. 200 ಪಂದ್ಯಗಳಲ್ಲಿ 123 ಗೋಲು ದಾಖಲಿಸಿ, ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಅಧಿಕ ಗೋಲು ಬಾರಿಸಿ ತಮ್ಮ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಇವರು ಫುಟ್​ಬಾಲ್​ ಲೋಕದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ.

ಯುರೋ ಕಪ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜೂನ್ 20ರಂದು ಐಸ್‌ಲೆಂಡ್ ವಿರುದ್ಧದ ಆಡುವ ಮೂಲಕ 200ನೇ ಪಂದ್ಯವನ್ನಾಡಿದ ರೊನಾಲ್ಡೋ ತಮ್ಮ ತಂಡವನ್ನು 1-0 ಅಂತರದಿಂದ ಗೆಲ್ಲಿಸಿದ್ದಾರೆ.
ಪಂದ್ಯದ ನಂತರದ ಮಾಧ್ಯಮ ಸಂವಾದದ ಸಮಯದಲ್ಲಿ ಭಾಗಿಯಾದ ರೊನಾಲ್ಡೊ, ‘ಕ್ಯಾಮರಾಮ್ಯಾನ್‌ಗೆ ಜಾಸ್ತಿ ಜೂಮ್ ಮಾಡ್ಬೇಡಿ ಎಂದು ಹೇಳಿದ್ದು’, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಕ್ಯಾಮರಾಮ್ಯಾನ್ ರೊನಾಲ್ಡೊ ಅವರ ಮುಖವನ್ನು ಝೂಮ್ ಮಾಡುತ್ತಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೊನಾಲ್ಡೊ “ತುಂಬಾ ಜೂಮ್‌ ಮಾಡಬೇಡಿ, ಮುಖದ ತುಂಬಾ ಸುಕ್ಕುಗಳಿವೆ,” ಎಂದರು. ಸದ್ಯ ಈ ವಿಡಿಯೋ ಭಾರಿ ವೈರಲ್‌ ಆಗಿದೆ. ನೆಟ್ಟಿಗರು ಭರ್ಜರಿ ಕಾಮೆಂಟ್ ಮಾಡುತ್ತಿದ್ದಾರೆ.

ಪಂದ್ಯದ ನಂತರ 200 ಪಂದ್ಯಗಳಲ್ಲಿ ಆಡಿದ ಕುರಿತು ಮಾತನಾಡಿದ ರೊನಾಲ್ಡೊ, “ತುಂಬಾ ಸಂತೋಷವಾಗಿದೆ. ಇದು ನಿರೀಕ್ಷೆಗೂ ಮೀರಿದ ಕ್ಷಣ. 200 ಪಂದ್ಯಗಳಲ್ಲಿ ಆಡಿರುವುದು ನನ್ನಿಂದ ನಂಬಲಾಗದ ಸಾಧನೆಯಾಗಿದೆ. ಅದರಲ್ಲೂ ಗೆಲುವಿನ ಗೋಲು ಗಳಿಸಿರುವುದು ಇನ್ನೂ ವಿಶೇಷ,” ಎಂದು ಅವರು ಹೇಳಿದ್ದಾರೆ.
ಪಂದ್ಯ ಆರಂಭಕ್ಕೂ ಮುನ್ನ, ಪೋರ್ಚುಗಲ್‌ಗಾಗಿ 200 ಪಂದ್ಯಗಳನ್ನು ಆಡುತ್ತಿರುವ ರೊನಾಲ್ಡೊಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ ಗೌರವ ದೊರೆಯಿತು.

 

Leave A Reply

Your email address will not be published.