Natural drinks: ನಿಮ್ಮ ತ್ವಚೆ ಬಂಗಾರದಂತೆ ಫಳಫಳ ಹೊಳೆಯಲು ಈ ಮೂರು ಪದಾರ್ಥ ಬೆಸ್ಟ್!
Natural drinks for good health and glowing skin
Natural drinks: ಇಡೀ ದಿನ ನಮ್ಮ ದೇಹವು ಆರೋಗ್ಯಕರ ಹಾಗೂ ಉತ್ಸಾಹದಿಂದ ಕೂಡಿರಲು ನಾವು ಬೆಳಗ್ಗಿನ ವೇಳೆಯಲ್ಲಿ ಆರೋಗ್ಯಕರವಾದುದನ್ನೇ ಸೇವಿಸಬೇಕು. ಹೆಚ್ಚಿನ ಜನರು ಚಹಾ ಅಥವಾ ಕಾಫಿಯೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅದಕ್ಕಿಂತಲೂ ನೈಸರ್ಗಿಕವಾದ ಪಾನೀಯ (Natural drinks)ಗಳನ್ನು ಸೇವಿಸುವುದು ಉತ್ತಮ. ಇದರಿಂದ ನಮ್ಮ ದೇಹ ಶಕ್ತಿಯುತ ಹಾಗೂ ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ. ಹಾಗಾಗಿ ಸೌತೆಕಾಯಿ, ಪುದೀನಾ ಸೊಪ್ಪು ಮತ್ತು ನಿಂಬೆ ರಸ ಈ ಮೂರು ಪದಾರ್ಥಗಳ ನೈಸರ್ಗಿಕ ಪಾನೀಯಗಳ ಸೇವನೆಯು ನಮ್ಮ ದೇಹದ ಆರೋಗ್ಯಕ್ಕೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಇದರ ಆರೋಗ್ಯ ಪ್ರಯೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಸೌತೆಕಾಯಿ ಚೂರುಗಳು, ಅರ್ಧ ನಿಂಬೆ ಮತ್ತು ಸ್ವಲ್ಪ ಪುದೀನ ಎಲೆಗಳನ್ನು ಸೇರಿಸಿ. ಇದನ್ನು ಒಂದು ರಾತ್ರಿ ನೆನೆಸಿಡಿ. ಮರುದಿನ ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸಿರಿ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಆರೋಗ್ಯ ಮಟ್ಟವು ಹೆಚ್ಚುತ್ತದೆ.
ನಿಂಬೆ, ಪುದೀನ ಮತ್ತು ಸೌತೆಕಾಯಿಯಿಂದ ತಯಾರಿಸಲಾದ ಈ ವಿಶೇಷ ಪಾನೀಯವು ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆಮ್ಲೀಯ ಗುಣಗಳಿಂದ ಕೂಡಿರುವ ನಿಂಬೆ ರಸವು ನಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ದೇಹವನ್ನು ತಂಪಾಗಿಡುತ್ತದೆ. ಪ್ರತಿದಿನ ಬೆಳಗ್ಗೆ ಇದರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚುವಂತೆ ಮಾಡುತ್ತದೆ.
ರಾತ್ರಿಯಿಡೀ ನೆನೆಸಿದ ಈ ನೀರು ದೇಹವನ್ನ ಯಾವಾಗಲೂ ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ನಾವು ದೇಹವನ್ನು ಒಣಗಿಸದೆ ಮತ್ತು ತೇವಾಂಶದಿಂದ ಇರಿಸಿದರೆ, ಚರ್ಮವು ಹೊಳೆಯುತ್ತದೆ. ಪ್ರತಿದಿನ ಬೆಳಗ್ಗೆ ಈ ಮೂರು ಪದಾರ್ಥಗಳಿಂದ ಕೂಡಿದ ನೀರನ್ನು ಕುಡಿಯುವುದರಿಂದ, ನಮ್ಮ ದೇಹದಲ್ಲಿರುವ ಕಲ್ಮಶವನ್ನು ಮೂತ್ರದ ಮೂಲಕ ಹೊರಹಾಕುತ್ತದೆ.
ಅಲ್ಲದೆ ನಿಂಬೆ, ಪುದೀನಾ, ಸೌತೆಕಾಯಿಯನ್ನು ನೆನೆಸಿ ತಯಾರಿಸಿದ ಪಾನಿಯಾವನ್ನು ಪ್ರತಿನಿತ್ಯ ಕುಡಿದರೆ ಮೊಡವೆ, ಕಪ್ಪು ಕಲೆ ಮಾಯವಾಗಿ ಮುಖವು ಕಾಂತಿಯುತವಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಈ ಪಾನಿಯಾದ ಪ್ರಯೋಜನವನ್ನು ಪಡೆಯಬಹುದು.