Nalin Kumar kateel: ಕೇಂದ್ರಕ್ಕೆ ಕರ್ನಾಟಕ ಒಂದೇ ಮುಖ್ಯವಲ್ಲ, ಕಾಂಗ್ರೆಸಿನವ್ರು ಮೋದಿ ಕೇಳಿ ಅನ್ನ ಭಾಗ್ಯ ಘೋಷಿಸಿಲ್ಲ – ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ!!

Nalin Kumar kateel :ರಾಜ್ಯದಲ್ಲಿ ಅನ್ನಭಾಗ್ಯ(Anna bhagya)ದ ಅಕ್ಕಿ ವಿಚಾರವಾಗಿ ರಾಜ್ಯ ಸರ್ಕಾರ(State Government) ಹಾಗೂ ಕೇಂದ್ರ ಸರ್ಕಾರದ(Central Government) ನಡುವೆಯೂ ಅಕ್ಕಿ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಒಂದೆಡೆ ಸರ್ಕಾರಕ್ಕೆ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಲಾಗುತ್ತಿಲ್ಲವಲ್ಲಾ ಎಂಬ ಕೊರಗಾದರೆ ಇನ್ನೊಂದೆಡೆ ಪ್ರತಿಪಕ್ಷ ಬಿಜೆಪಿ(Opposition party BJP)ನಾಯಕರೂ ವ್ಯಂಗ್ಯವಾಡಿ ಮಾತಿನಲ್ಲೇ ಸರ್ಕಾರಕ್ಕೆ ತಿವಿಯುತ್ತಿದ್ದಾರೆ. ಅಂತೆಯೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar kateel) ಅವರು ಸರ್ಕಾರಕ್ಕೆ ಅಕ್ಕಿ ವಿಚಾರವಾಗಿ ಚಾಟಿಬೀಸಿದ್ದಾರೆ.

 

ಹೌದು, ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರ ಅಕ್ಕಿಯನ್ನ ಜನರ‌ ಮನೆಗೆ ತಲುಪಿಸಿದೆ. ಕಾಂಗ್ರೆಸ್(Congress) ನವರು ಚುನಾವಣೆಗೂ ಮುಂಚೆ ತಮ್ಮ ಪ್ರಣಾಳಿಕೆಯಲ್ಲಿ ಹತ್ತು ಕೆ ಜಿ ಅಕ್ಕಿ ಕೊಡ್ತೆವೆ ಅಂತಾ ಹಾಕಿರೋದು. ಕೇಂದ್ರ ಸರ್ಕಾರದಿಂದ, ಮೋದಿಯಿಂದ ತಂದು ಕೊಡ್ತೇವೆ ಅಂತಾ ಎಲ್ಲೂ ಹಾಕಿಲ್ಲ. ಈಗೇಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ನಳಿನ್ ಕುಮಾರ್ ಕಟೀಲ್ ಪ್ರಶ್ನೆ ಮಾಡಿದ್ದಾರೆ.

ಕಲಬುರಗಿಯಲ್ಲಿ((Kalaburgi) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು ಸಿದ್ದರಾಮಯ್ಯ ಹಾಗೂ ಸರ್ಕಾರದ ಕುರಿತು ವಾಗ್ದಾಳಿ ನಡೆಸಿದರು. ಆಗ ಸಿದ್ದರಾಮಯ್ಯ(Siddaramaiah) ಮೂರು ರೂಪಾಯಿ ಅಕ್ಕಿ ಕೊಟ್ಟು ಅದರ ಮೇಲೆ ಸ್ಟಿಕರ್ ಹಾಕಿ ರಾಜಕಾರಣ ಮಾಡಿದ್ರು. ಎರಡು ವರ್ಷಗಳ ಕಾಲ ಕೇಂದ್ರ ಸರ್ಕಾರ ಅಕ್ಕಿಯನ್ನ ಜನರ‌ ಮನೆಗೆ ತಲುಪಿಸಿದೆ. ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನವರು ಹತ್ತು ಕೆ ಜಿ ಅಕ್ಕಿ ಕೊಡ್ತೆವೆ ಅಂತಾ ಹಾಕಿರೋದು. ಕೇಂದ್ರ ಸರ್ಕಾರದಿಂದ ಮೋದಿಯಿಂದ(Modi) ತಂದು ಕೊಡ್ತೇವೆ ಅಂತಾ ಹಾಕಿಲ್ಲ. ನೀವು ಹತ್ತು ಕೆ ಜಿ ಕೊಡ್ತೇನೆ ಅಂತಾ ಹೇಳಿದ್ದಿರಿ. ಕೇಂದ್ರದ ಐದು ಕೆ‌ಜಿ ಬಿಟ್ಟು ನಿಮ್ಮ ಹತ್ತು ಕೆ ಜಿ ಅಕ್ಕಿ ಕೊಡಿ ಅಂತಾ ಒತ್ತಾಯ ಮಾಡ್ತೇನೆ ಎಂದು ಹೇಳಿದರು.

ಅಲ್ಲದೆ ಕಾಂಗ್ರೆಸ್ ಸರ್ಕಾರ ಪ್ರತಿ ಬಡ ಕುಟುಂಬಗಳಿಗೆ 10 ಕೆ.ಜಿ. ಉಚಿತ ಅಕ್ಕಿ ನೀಡುವ ಮುನ್ನ ಪ್ರಧಾನಿ ಅಥವಾ ಕೇಂದ್ರ ಆಹಾರ ಸಚಿವರೊಂದಿಗೆ ಚರ್ಚಿಸಿಲ್ಲ. ಹೀಗಾಗಿ ಅಕ್ಕಿ ಕೊಡುವ ಯೋಜನೆಗೆ ಬೇಕಾದ ಅಕ್ಕಿಯನ್ನು ತಾನೇ ಹೊಂದಿಸಿಕೊಳ್ಳಬೇಕು. ಭಾರತೀಯ ಆಹಾರ ನಿಗಮವು ರಾಜ್ಯಕ್ಕೆ ಅಗತ್ಯವಾದ ಅಕ್ಕಿ ಪೂರೈಕೆ ನಿರಾಕರಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರಕ್ಕೆ ಕರ್ನಾಟಕವೊಂದೇ ಮುಖ್ಯವಲ್ಲ. ಇತರೆ ರಾಜ್ಯಗಳಿಗೆ ಅಕ್ಕಿ ಪೂರೈಸುವ ಜವಾಬ್ದಾರಿ ಇದೆ ಎಂದು ಸ್ಪಷ್ಟಪಡಿಸಿದರು.

ಬಳಿಕ ಮಾತನಾಡಿದ ಅವರು ಕೇಂದ್ರ ಸರ್ಕಾರ ರಾಜ್ಯದೊಂದಿಗೆ ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರೇ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಪಠ್ಯಪುಸ್ತಕ ಪರಿಷ್ಕರಣೆಯನ್ನು ವಾಪಸ್ ಪಡೆದಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ : ನಟಿ ರಶ್ಮಿಕಾ ಮಂದಣ್ಣ ದುಡಿದ 80 ಲಕ್ಷ ರೂ. ಕಬಳಿಸಿದ ಮ್ಯಾನೇಜರ್ !ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ ಏನಂದ್ರು ?!

Leave A Reply

Your email address will not be published.