H D Kumaraswamy: ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರಿಗೂ ಟಿಕೆಟ್ ಇಲ್ಲ !! ಸಂಚಲನ ಮೂಡಿಸಿದ ಎಚ್ಡಿಕೆ ಹೇಳಿಕೆ !!

karnataka news political H D Kumaraswamy said that there is no ticket for HD Deve Gowda family

H D Kumaraswamy: ಮುಂಬರುವ ಲೋಕಸಭಾ ಚುನಾವಣೆಯಲ್ಲಿ(Parliament election) ಬಿಜೆಪಿ-ಜೆಡಿಎಸ್(BJP-JDS) ಮೈತ್ರಿ ಮಾಡಿಕೊಳ್ಳುವ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿರುವಾಗಲೇ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ(H D Kumaraswamy) ಅವರು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಹೌದು, ಲೋಕಸಭಾ ಚುನಾವಣೆಗಾಗಿ(Parliament election) ಎಲ್ಲ ಪಕ್ಷಗಳೂ ತಯಾರಿ ಶುರು ಮಾಡಿದ್ದು, ಜೆಡಿಎಸ್‌ನಲ್ಲಿಯೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(H D Kumaraswamy) ಅವರು ಬರುವ ಲೋಕಸಭಾ ಚುನಾವಣೆಯಲ್ಲಿ, ನಮ್ಮ ಕುಟಂಬದ ಯಾರಿಗೂ ಟಿಕೆಟ್ ನೀಡೋಲ್ಲ, ಕುಟುಂಬದಿಂದ ಯಾರೂ ಸ್ಪರ್ಧಿಸುವುದೂ ಇಲ್ಲ ಎಂದು ಅಚ್ಚರಿಯ ಹೇಳಿಕೆಯೊಂದನ್ನು ಹರಿಬಿಟ್ಟಿದ್ದು, ಸಂಚಲನ ಮೂಡಿಸಿದೆ.

ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಹೊಸ ಸೂತ್ರ ರೂಪಿಸುತ್ತಿದ್ದು, ಎಚ್ಡಿಕೆ ನಿರ್ಧಾರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H D Dyevegowda) ಕುಟುಂಬದಲ್ಲಿಯೂ ಸಂಚಲನ ಸೃಷ್ಟಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಚ್.ಡಿ.ರೇವಣ್ಣ(H D Revanna) ಅವರ ಮಗ ಪ್ರಜ್ವಲ್(Prajwal revanna) ಅವರಿಗೂ ಟಿಕೆಟ್ ತಪ್ಪುವ ಸುಳಿವು ನೀಡಿದ್ದು, ಕುಮಾರಸ್ವಾಮಿ…ರೇವಣ್ಣ ಕುಟುಂಬದಲ್ಲಿ ಮತ್ತೆ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ.

ಅಂದಹಾಗೆ ಲೋಕಸಭಾ ಚುನಾವಣೆ ಹಿನ್ನೆಲೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ. ಕುಟುಂಬ ರಾಜಕಾರಣ ಎಂಬ ಕಳಂಕದಿಂದ ಮುಕ್ತರಾಗಲು ಹೆಚ್‌ಡಿಕೆ ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್‌.ಡಿ. ರೇವಣ್ಣ, ಭವಾನಿ ರೇವಣ್ಣ(bhavani revanna), ನಿಖಿಲ್‌(Nikhil) ಯಾರಿಗೂ ಟಿಕೆಟ್‌ ನೀಡದಿರಲು ನಿರ್ಧರಿಸಿದ್ದಾರಂತೆ. ದೂರದೃಷ್ಟಿಯ ಕಾರಣಕ್ಕೆ ಈ ನಿರ್ಧಾರ ಮಾಡುತ್ತಿದ್ದೇನೆ ಎಂದು ಹೇಳಿದ್ದಾರಂತೆ. ಆದ್ರೆ ಈ ನಿರ್ಧಾರಕ್ಕೆ ರೇವಣ್ಣ ಕುಟುಂಬ ಒಪ್ಪಿಕೊಳ್ಳುತ್ತಾ ಎಂಬುದೆ ದೊಡ್ಡ ಪ್ರಶ್ನೆಯಾಗಿದೆ. ಹಾಗಾದ್ರೆ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸುತ್ತಾರಾ ಹೆಚ್‌ಡಿಕೆ ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಮೂಡಿದೆ.

ಇನ್ನು ವಿಧಾನಸಭಾ ಚುನಾವಣೆ(Assembly election) ವೇಳೆ ಹಾಸನ ಟಿಕೆಟ್ ವಿಚಾರದಲ್ಲಿ ಗೊಂದಲ ಉಂಟಾಗಿತ್ತು ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದರು, ಆದರೆ ಕುಮಾರಸ್ವಾಮಿ ಸ್ವರೂಪ್ ಪರ ನಿಂತಿದ್ದರಿಂದ , ಸತತ ಎರಡು ತಿಂಗಳ ಕಾಲ ಮುಂದುವರೆದಿದ್ದ ಮುಸುಕಿನ ಗುದ್ದಾಟ ನಡೆದಿತ್ತು. ಅಂತಿಮವಾಗಿ ಮೇಲುಗೈ ಸಾಧಿಸಿದ್ದ ಕುಮಾರಸ್ವಾಮಿ ತಮ್ಮ ಹಠದಂತೆ ಸ್ವರೂಪ್‌ಗೆ ಟಿಕೆಟ್ ನೀಡಿದ್ದರು.ಭವಾನಿಗೆ ಮುಂದೆ ಸೂಕ್ತ ಸ್ಥಾನ ನೀಡುವ ಭರವಸೆಯನ್ನೂ ನೀಡಿದ್ದರು. ಪರಿಷತ್, ಅಥವಾ ಲೋಕಸಭೆಗೆ ಭವಾನಿಗೆ ಅವಕಾಶ ನೀಡುವ ಚರ್ಚೆಗಳು ಹುಟ್ಟಿಕೊಂಡಿದ್ದವು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಯಿತು. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಂದುಕೊಂಡಷ್ಟು ಸ್ಥಾನ ಪಡೆಯಲಿಲ್ಲ.ಇದೀಗ ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಹೊಸ ಸೂತ್ರ ಮತ್ತೆ ಸಂಚಲನ ಮೂಡಿಸುವ ಸಾಧ್ಯತೆ ಇದೆ.

 

ಇದನ್ನು ಓದಿ: Leaking Faucet: ಸೋರುತ್ತಿರುವ ನಲ್ಲಿಯಿಂದ ಕಿರಿಕಿರಿಯಾಗುತ್ತಿದೆಯೇ ? ನಲ್ಲಿಯನ್ನು ಸರಿಪಡಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ !

Leave A Reply

Your email address will not be published.