Optical illusion: ಓದುಗರೇ ನಿಮಗೊಂದು ಸವಾಲ್: ಈ ಫೋಟೋದಲ್ಲಿರುವ ಬೃಹತ್ ಗಾತ್ರದ ಹೆಬ್ಬಾವನ್ನು ಹುಡುಕಬಲ್ಲಿರಾ?

intelligence game A challenge for you Optical illusion game

Share the Article

Optical illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಕಾಣ ಸಿಗುತ್ತವೆ. ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ (Optical illusion) ಚಾಲೆಂಜ್ ಗಳನ್ನು ನೀವು ನೋಡಿರಬಹುದು. ಇದೀಗ ನಿಮ್ಮ ಚಾಣಾಕ್ಷತನವನ್ನು ಪರೀಕ್ಷಿಸುವ ಆಪ್ಟಿಕಲ್ ಇಲ್ಯೂಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆಪ್ಟಿಕಲ್ ಇಲ್ಯೂಷನ್ ಚಿತ್ರಣಗಳು ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ ವೈರಲ್ ಆಗಿರುವ ಫೋಟೋ (photo) ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಲಿದೆ. ಹಾಗಿದ್ರೆ ಇನ್ನೇಕೆ ತಡ, ಈ ಟ್ರಿಕಿ ಪರೀಕ್ಷೆಯನ್ನು ಪರಿಹರಿಸಿ!.

ಮೇಲಿನ ಫೋಟೋದಲ್ಲಿ ಮನೆಯ ಮುಂಭಾಗದ ಹೊರಾಂಗಣ ಚಿತ್ರಣವನ್ನು ಕಾಣಬಹುದು. ಹಸಿರಿನಿಂದ ಕೂಡಿದ ನೆಲದ ಹಾಸನ್ನು ಹಾಗೂ ಮರದ ತುಂಡುಗಳಿಂದ ಮಾಡಲ್ಪಟ್ಟಿರುವ ಕಾಂಪೌಂಡ್ ಗೋಡೆಯನ್ನು ಕಾಣಬಹುದು. ಫೋಟೋದ ಒಂದು ಭಾಗದಲ್ಲಿ ಭಾರೀ ಗಾತ್ರ ಹೆಬ್ಬಾವು ಇದೆ. ಅದು ಎಲ್ಲಿದೆ ಎಂಬುವುದನ್ನು ಪತ್ತೆಹಚ್ಚಬೇಕು.

ಆದರೆ, ಪತ್ತೆಹಚ್ಚುವುದು ಸುಲಭವಲ್ಲ.ಚಿತ್ರದಲ್ಲಿ ಹಾವು ನಿಮ್ಮ ಕಣ್ಣ ಮುಂದೆಯೇ ಇದೆ, ಆದರೆ ನೀವು ಅದನ್ನು ಸುಲಭವಾಗಿ ಕಾಣಲು ಆಗುವುದಿಲ್ಲ. ಫೋಟೋದಲ್ಲಿ ಹಾವನ್ನು ಹುಡುಕುವುದು ಕಷ್ಟವೇ. ಆದರೂ ನೀವು ಈ ಸವಾಲು ಸ್ವೀಕರಿಸಿ ಹಾವನ್ನು ಪತ್ತೆ ಹಚ್ಚುವಿರಿ ಎಂದಾದರೆ ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ನಿಮ್ಮ ಸಮಯ‌ ಈಗ ಶುರು!.

ಹತ್ತು ಸೆಕೆಂಡ್ ಸಮಯದ ಬಳಿಕವೂ ನಿಮಗೆ ಹಾವನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಫೋಟೋದಲ್ಲಿ ಉತ್ತರವಿದೆ. ಒಂದು ವೇಳೆ ನೀವು ಮೊದಲೇ ಫೋಟೋದಲ್ಲಿರುವ ಹಾವನ್ನು ಗುರುತಿಸಿದ್ದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ.

Leave A Reply