Vijayendra prasad: ‘ರಾಜಮೌಳಿ ಮಹಾಭಾರತ ಸಿನಿಮಾ ಮಾಡೇ ಮಾಡ್ತಾರೆ, ಸ್ಕ್ರಿಪ್ಟ್ ರೆಡಿ ಇದೆ’..!! ‘ಆದಿಪುರುಷ್’ ಸೋಲಿನ ಬೆನ್ನಲ್ಲೇ ಗುಡ್ ನ್ಯೂಸ್ ನೀಡಿದ ವಿಜಯೇಂದ್ರ ಪ್ರಸಾದ್!!

Vijayendra Prasad gave good news after 'Aadipurush' defeat

Vijayendra prasad: ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ಯಾನ್ ಇಂಡಿಯಾ(Pan India movie) ಮೂವಿಯಾಗಿದ್ದ ಆದಿಪುರುಷ್ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್‌ಗಳೇ ಹೆಚ್ಚಾಗಿದೆ. ನಿರ್ದೇಶಕ ಓಂ ರಾವುತ್(Om Raout) ಇತಿಹಾಸವನ್ನು ತಿರುಚಿ ಸಿನಿಮಾ ಮಾಡಿರೋ ಆರೋಪವನ್ನು ಎದುರಿಸುತ್ತಿದ್ದಾರೆ. ಕೆಲವರು ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಕೋರ್ಟ್ ವರೆಗೂ ಹೋಗಿದ್ದಾರೆ. ಆದರೆ ಈ ಬೆನ್ನಲ್ಲೇ ಬಾಹುಬಲಿ(Bahubali), ಆರ್‌ಆರ್‌ಆರ್(RRR) ಖ್ಯಾತಿಯ ರಾಜಮೌಳಿ ಮಹಾಭಾರತವನ್ನ ಸಿನಿಮಾ ಮಾಡುವುದಾಗಿ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಸಿಹಿಸುದ್ದಿ ನೀಡಿದ್ದಾರೆ.

 

ಹೌದು, ಐತಿಹಾಸಿಕ ಸಿನಿಮಾವಿರಲಿ.. ಪೌರಾಣಿಕ ಸಿನಿಮಾವಿರಲಿ.. ಅಂತಹ ಸಿನಿಮಾಗಳನ್ನು ಮಾಡುವುದರಲ್ಲಿ ರಾಜಮೌಳಿ(Rajamouli) ಎತ್ತಿದ ಕೈ. ಈಗಾಗಲೇ ‘ಬಾಹುಬಲಿ’ ಸೀರಿಸ್ ಹಾಗೂ RRR ಸಿನಿಮಾ ಮೂಲಕ ಅದು ಸಾಬೀತು ಕೂಡ ಆಗಿದೆ. ಈ ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳ ಪವರ್ ಏನು ಅನ್ನೋದನ್ನು ತೋರಿಸಿವೆ. ಈ ಹಿನ್ನೆಲೆಯಲ್ಲಿ ಈ ಮಧ್ಯೆ ರಾಜಮೌಳಿ ‘ಮಹಾಭಾರತ'(Mahabharata) ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ. ಸಂದರ್ಶನವೊಂದರಲ್ಲಿ ಸ್ವತಃ ರಾಜಮೌಳಿ ಅವರ ತಂದೆಯೇ ಈ ಕುರಿತು ಮಾತನಾಡಿದ್ದಾರೆ. ಹಾಗಾದರೆ ಸಂದರ್ಶನದಲ್ಲಿ ವಿಜಯೇಂದ್ರ ಪ್ರಸಾದ್  ‘ಮಹಾಭಾರತ’ದ ಬಗ್ಗೆ ಹೇಳಿದ್ದೇನು?

ಸಂದರ್ಶನದಲ್ಲಿ ಅವರು ಮಾತನಾಡುವಾಗ ‘ಬಾಹುಬಲಿ’ಯ ಕಥೆ ಹೇಗೆ ರಚನೆ ಮಾಡಿದ್ರು? ಪಾತ್ರಗಳ ಆಯ್ಕೆ ಮಾಡಿದ್ದು ಹೇಗೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. “ಎಲ್ಲೆಂದರಲ್ಲಿ ಕಥೆಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ನಮ್ಮ ಪುರಾಣಗಳಲ್ಲೇ ಸಾಕಷ್ಟು ಕಥೆಗಳು ಸಿಗುತ್ತವೆ.” ಎಂದು ವಿಜಯೇಂದ್ರ ಪ್ರಸಾದ್(Vijayendra prasad) ಹೇಳಿದ್ದರು ಅಲ್ಲದೆ ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಕಂಡರೆ ಹೆಚ್ಚು ಇಷ್ಟ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆ” ಎಂದಿದ್ದಾರೆ.

ಇನ್ನು ಇದೇ ವೇಳೆ ನಾನು ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ನನ್ನ ಬಳಿ ಬಂದು ‘ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ?’ ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು ಹಾಗೆಯೇ ಅದ್ದೂರಿತನ ಎಲ್ಲವೂ ಇದೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳುವ ಸಲುವಾಗಿ ಮಾಡುತ್ತಿದ್ದೇನೆ’ ಎಂದು ಹೇಳಿದ್ದ ಎಂಬುದಾಗಿ ನೆನಪಿಸಿಕೊಂಡಿದ್ದಾರೆ.

ಅಂದರೆ ” ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ಎಂದಿದ್ದರು” ಆ ಸಿನಿಮಾ ಗೆದ್ದು ಭೀಗಿತು. ಸೋ ಹೀಗಾಗಿ ರಾಜಮೌಳಿ ಬಯಸಿದಂತೆ ಮಹಾಭಾರತ (Mahabharatha) ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ. ಇನ್ನು
ದೇವರ ದಯೆಯಿಂದ ಅದು ಸಿನಿಮಾ ಆಗುತ್ತೆ. ರಾಜಮೌಳಿ ಸಿನಿಮಾ ಮಾಡುತ್ತಾರೆ” ಎಂದು ರಾಜಮೌಳಿ ತಂದೆ ಸ್ಪಷ್ಟಪಡಿಸಿದ್ದಾರೆ.

ಅಂದಹಾಗೆ ಬಾಹುಬಲಿ, ಬಾಹುಬಲಿ 2, ಆರ್‌ಆರ್‌ಆರ್(RRR) ಸಿನಿಮಾಗಳನ್ನ ಕೊಟ್ಟಿರೋ ರಾಜಮೌಳಿ ಅವರ ಮಹಾಭಾರತ ಮಾಡುವ ಬಗ್ಗೆ ಸಿಹಿಸುದ್ದಿ ನೀಡಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾಗೆ 3-4 ವರ್ಷ ಸಮಯ ಮೀಸಲಿಡುವ ರಾಜಮೌಳಿ ಅವರ ಸಿನಿಮಾ ಮೇಲಿನ ಪ್ರೀತಿ ಅಭಿಮಾನಿಗಳಿಗೆ ತಿಳಿದಿದೆ ಹಾಗಾಗಿ ‘ಮಹಾಭಾರತ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

ಇನ್ನು ಸದ್ಯ ಮಹೇಶ್ ಬಾಬು(Mahesh babu) ಜೊತೆ ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮಹೇಶ್ ಬಾಬು ಪಾತ್ರ ಕೂಡ ಹನುಮಂತನ ಪಾತ್ರದಿಂದಲೇ ಪ್ರೇರಣೆ ಪಡೆದಿದೆ ಎಂದು ಹೇಳಲಾಗಿತ್ತು. ಆದರೆ, ಸ್ವತ: ವಿಜಯೇಂದ್ರ ಪ್ರಸಾದ್ “ಮಹೇಶ್ ಬಾಬು ಪಾತ್ರಕ್ಕೂ ಹನುಮಂತನ ಪಾತ್ರಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

 

ಇದನ್ನು ಓದಿ: Bangalore: ಬಿಜೆಪಿ ರಾಜ್ಯಾಧ್ಯಕ್ಷತೆಗೆ ಪ್ರತಾಪ್ ಸಿಂಹ ,ವಿಪಕ್ಷ ನಾಯಕ ಬಸವನ ಗೌಡ ಪಾಟೀಲ್ ಯತ್ನಾಳ್ ,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ? 

Leave A Reply

Your email address will not be published.