Free bus travel: KSRTC ಬಸ್‌ಗಳಲ್ಲಿ ಪುರುಷರಿಗೂ ಉಚಿತ ಪ್ರಯಾಣ..!! ಈ 5 ದಿನ ಸುತ್ತಾಡಿ, ಮಜಾ ಮಾಡಿ!!
The government has allowed 5 days free travel for men too
Free bus travel: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ(Shakti yojane) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೀಗ ಈ ನಡುವೆ ಪುರುಷರಿಗೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಸರ್ಕಾರವು ಪುರಿಷರಿಗೂ 5 ದಿನ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.
ಹೌದು, ಕರ್ನಾಟಕ ಸರ್ಕಾರದ(karnataka Government) ಶಕ್ತಿ ಯೋಜನೆಯ(Shakthi yojane) ಉಚಿತ ಬಸ್ ಪ್ರಯಾಣಕ್ಕೆ(Free bus travel) ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್(Responce) ವ್ಯಕ್ತವಾಗಿದೆ. ದಿನೇ ದಿನೇ ನಾರಿಮಣಿಯರ ಪ್ರಯಾಣ ಹೆಚ್ಚಾಗುತ್ತಿದೆ. ಬಸ್ ಗಳು ರಶ್ ಆಗಿ ಸಾಗುತ್ತಿವೆ. ಬಸ್ ಗಳು ನಿಲ್ದಾಣಕ್ಕೆ ಬಂದು ನಿಲ್ಲುವುದೆ ತಡ ಕಿಟಕಿ, ಬಾಗಿಲುಗಳಿಂದೆಲ್ಲ ನುಗ್ಗಿ ಬಸ್ ಹತ್ತುತ್ತಿದ್ದಾರೆ. ಇದರಿಂದ ಪುರುಷ ಪ್ರಯಾಣಿಕರು ಬಸ್ ಹತ್ತುವುದುಕ್ಕೂ ಆಗದೆ, ಬಿಡುವುದಕ್ಕೂ ಆಗದೆ ಕಂಗಾಲಾಗಿದ್ದಾರೆ. ಆದರೆ ಈ ನಡುವೆ ಮೈಸೂರು ಜಿಲ್ಲಾಡಳಿತವು ಪುರುಷರಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ಪುರಿಷರಿಗೂ(Gents) 5 ದಿನ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.
ಅಂದಹಾಗೆ ಮಹಿಳೆಯರ ಉಚಿತ ಬಸ್ ಪ್ರಯಾಣ ಜಾರಿಯಾದ ಬಳಿಕ ಮಹಿಳೆಯರಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಹೋಗುವವರೇ ಹೆಚ್ಚು. ಅಂತೆಯೇ ಮೈಸೂರು ಚಾಮುಂಡಿ ಬೆಟ್ಟಕ್ಕೆ(Mysore chamundi hils)ಸಾಗರೋಪಾದಿಯಲ್ಲಿ ಮಹಿಳೆಯರ ದಂಡು ಹರಿದುಬರುತ್ತಿದೆ. ಹೀಗಾಗಿ ದೇವರ ದರ್ಶನಕ್ಕಾಗಿ ಮೈಸೂರಿಗೆ ಬರುವ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ 5 ದಿನಗಳು ಉಚಿತ ಬಸ್ ಪಯಣ ಇದೆ. ಇಂತಹ ಸೌಲಭ್ಯ ನೇರವಾಗಿ ರಾಜ್ಯ ಸರ್ಕಾರ ನೀಡದಿದ್ದರೂ ಮೈಸೂರು ಜಿಲ್ಲಾಡಳಿತ(District administration) ಗಂಡಸರೂ ಸೇರಿದಂತೆ ಎಲ್ಲರಿಗೂ ನೀಡುತ್ತಿದೆ. ಆ ದೇವರು ಯಾವುದು, ಎಷ್ಟು ದೂರ ಪ್ರಯಾಣ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಷಾಢ ಶುಕ್ರವಾರಗಳಂದು ಖಾಸಗಿ ವಾಹನಗಳಿಗೆ(Praivate vehicals) ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬೆಟ್ಟಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಸರ್ಕಾರಿ ಬಸ್‌ಗಳಲ್ಲಿ ಭಕ್ತಾದಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಮಹಿಳಾ ಭಕ್ತರ ಜೊತೆಗೆ ಪುರುಷ ಭಕ್ತಾದಿಗಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ಎಲ್ಲಾ ಭಕ್ತರಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಇನ್ನು ಜೂನ್ 23 ರಿಂದ ಜುಲೈ 14ರ ಆಷಾಢ ಶುಕ್ರವಾರ ದಿನಗಳಂದು ಹಾಗೂ ಜುಲೈ 10 ಚಾಮುಂಡಿ ವರ್ಧಂತಿ ದಿನದಂದು ಹೆಚ್ಚಿನ ಜನ ಬರುವುದರಿಂದ ಸಂಚಾರ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ವಾಹನಗಳನ್ನ ಲಲಿತಮಹಲ್ ಮೈದಾನದಲ್ಲಿ ನಿಲ್ಲಿಸಿ ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬೇಕು.ಭಕ್ತರು ಚಾಮುಂಡಿ ಬೆಟ್ಟಕ್ಕೆ ಹೋಗಲು ಅನುಕೂಲ ಆಗುವಂತೆ ಬೆಳಗಿನ ಜಾವ 3 ರಿಂದಲೇ ಉಚಿತ ಬಸ್ ಸಂಚಾರವನ್ನು ಆರಂಭಿಸಲಾಗುತ್ತದೆ. ಜೊತೆಗೆ, ರಾತ್ರಿ 10 ಗಂಟೆವರೆಗೂ ಬಸ್ ಸೌಲಭ್ಯವನ್ನು ಮುಂದುವರೆಸಲಾಗುತ್ತದೆ. ವಿಶೇಷ ಗಣ್ಯಾತಿ ಗಣ್ಯರನ್ನು ಬಿಟ್ಟರೆ ಬೇರಾವ ಖಾಸಗೀ ವಾಹನಗಳಿಗೆ ಪ್ರವೇಶವಿಲ್ಲ.