Adipurush: ‘ಆದಿಪುರುಷ್’ ರಾಮನ ಪಾತ್ರಕ್ಕೆ ಪ್ರಭಾಸ್‌ ಮೊದಲ ಆಯ್ಕೆ ಅಲ್ಲ !! ಸಂಚಲನ ಮೂಡಿದ ಸಿನಿಮಾ ವಿಮರ್ಶಕ !!

Prabhas was not the first choice for the role of Rama in 'Adipurush' film

Adipurush: ದೇಶಾದ್ಯಂತ ವಿವಾದಗಳಿಂದ ಸದ್ಧು ಮಾಡುತ್ತಿರೋ ಆದಿಪುರುಷ್(Adipurush) ಸಿನಿಮಾ ಬಗ್ಗೆ ಬಾಲಿವುಡ್‌ನ(Bollywood) ವಿವಾದಾತ್ಮಕ ವಿಮರ್ಶಕ ಕೆಆರ್‌ಕೆ ಸಂಚಲನ ಸೃಷ್ಟಿಸುವಂತಹ ಹೇಳಿಕೆ ಕೊಟ್ಟಿದ್ದಾರೆ. ‘ಆದಿಪುರುಷ್’ ಸಿನಿಮಾಗೆ ಪ್ರಭಾಸ್(Prabhas) ಮೊದಲ ಆಯ್ಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಮೊದಲ ಆಯ್ಕೆ ಯಾರಾಗಿತ್ತು?

 

ದೇಶಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ಯಾನ್ ಇಂಡಿಯಾ(Pan India movie) ಮೂವಿಯಾಗಿದ್ದ ಆದಿಪುರುಷ್ ಸಿನಿಮಾ ಬಗ್ಗೆ ನೆಗೆಟಿವ್ ಕಮೆಂಟ್‌ಗಳೇ ಹೆಚ್ಚಾಗಿದೆ. ನಿರ್ದೇಶಕ ಓಂ ರಾವುತ್(Om Raout) ಇತಿಹಾಸವನ್ನು ತಿರುಚಿ ಸಿನಿಮಾ ಮಾಡಿರೋ ಆರೋಪವನ್ನು ಎದುರಿಸುತ್ತಿದ್ದಾರೆ. ಕೆಲವರು ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಕೋರ್ಟ್ ವರೆಗೂ ಹೋಗಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ವಿವಾದಗಳನ್ನೂ ಚಿತ್ರತಂಡ ಮೈಮೇಲೆ ಎಳೆದುಕೊಳ್ಳುತ್ತಿದೆ. ಆದರೆ ಈ ನಡುವೆ ಬಾಲಿವುಡ್‌ನ ವಿವಾದಾತ್ಮಕ ವಿಮರ್ಶಕ ಕೆಆರ್‌ಕೆ ಸಂಚಲನ ಸೃಷ್ಟಿಸುವಂತಹ ಹೇಳಿಕೆ ಕೊಟ್ಟಿದ್ದು, ‘ಆದಿಪುರುಷ್’ ಸಿನಿಮಾಗೆ ಪ್ರಭಾಸ್ ಮೊದಲ ಆಯ್ಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಮೊದಲ ಆಯ್ಕೆ ಯಾರು ಗೊತ್ತಾ?

ಹೌದು, ಕೆಆರ್‌ಕೆ(KRK) ಮಾಡಿರೋ ಟ್ವೀಟ್ ಸಿನಿಪ್ರಿಯರಲ್ಲಿ ಸಂಚಲನ ಸೃಷ್ಟಿಸಿದೆ. ಈ ಸಿನಿಮಾದ ರಾಮನ ಪಾತ್ರಕ್ಕೆ ನಿರ್ದೇಶಕ ಓಂ ರಾವುತ್ ಬಾಲಿವುಡ್‌ನನ್ನು ಆಯ್ಕೆ ಮಾಡಿದ್ದರು. ಅವರು ಮತ್ಯಾರೂ ಅಲ್ಲ ಕಾರ್ತಿಕ್ ಆರ್ಯನ್. ಕಾರ್ತಿಕ್ ಆರ್ಯನ್ ಈ ಸಿನಿಮಾವನ್ನು ತಿರಸ್ಕರಿಸಿದ್ದರು. ಹೀಗಾಗಿ ಅದು ಪ್ರಭಾಸ್ ಪಾಲಾಯ್ತು ಎಂದು ಕೆಆರ್‌ಕೆ ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಕಮಾಲ್ ಆರ್.ಖಾನ್(Kamal R Khan) ಅವರು ತನ್ನ ಇತ್ತೀಚಿನ ಟ್ವೀಟ್‌ನಲ್ಲಿ, ಆದಿಪುರುಷ ಮಾಡದಿದ್ದಕ್ಕಾಗಿ ಸತ್ಯ ಪ್ರೇಮ್ ಕಿ ಕಥಾ ನಟನನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ. ತನ್ಹಾಜಿ ಚಿತ್ರದ ನನ್ನ ವಿಮರ್ಶೆಯಲ್ಲಿ ನಾನು ಓಂ ರಾವುತ್‌ಗೆ ನಿರ್ದೇಶನ ತಿಳಿದಿಲ್ಲ ಎಂದು ಹೇಳಿದ್ದೇನೆ. ನಾನು 100% ಸರಿ ಎಂದು ಆದಿಪುರುಷನೊಂದಿಗೆ ಸಾಬೀತಾಗಿದೆ. ನಾನು ಯಾವುದೇ ಚಲನಚಿತ್ರ ಅಥವಾ ಯಾವುದೇ ನಿರ್ದೇಶಕ ಅಥವಾ ನಟನಿಗೆ ಎಂದಿಗೂ ಸುಳ್ಳು ಹೇಳುವುದಿಲ್ಲ. ಕಾರ್ತಿಕ್‌ ಆರ್ಯನ್(Karthik aryan) ಅವರು ಅದೃಷ್ಟವಂತರು‌ ಆದಿಪುರುಷ ಮಾಡಲಿಲ್ಲ!” ಎಂದು ಬರೆದಿದ್ದಾರೆ.

ಪ್ರಭಾಸ್ ಅಭಿಮಾನಿಗಳು ಓಂ ರಾವತ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜಮೌಳಿಯವರ(Rajamouli) ಬಾಹುಬಲಿ ನಂತರ ಯಶಸ್ಸನ್ನು ಪಡೆಯಲು ನಟ ಪ್ರಭಾಸ್‌ ಸಿಕ್ಕಾಪಟ್ಟೆ ಶ್ರಮಿಸುತ್ತಿದ್ದಾರೆ. ಈಗ ಎಲ್ಲಾ ಭರವಸೆಗಳು ಸಲಾರ್ ಮತ್ತು ಪ್ರಾಜೆಕ್ಟ್ ಕೆ ಮೇಲಿವೆ. ನೆಟಿಜನ್‌ಗಳು ಆದಿಪುರುಷ ಮೇಲಿಟ್ಟಿದ್ದ ಎಲ್ಲ ನಿರೀಕ್ಷೆಗಳು ಹುಸಿಯಾದಂತಿವೆ.

ಇನ್ನು ಪ್ರಭಾಸ್ ಅಭಿಮಾನಿಗಳು ಈಗ ಪ್ರಶಾಂತ್ ನೀಲ್(Prashanth neel) ನಿರ್ದೇಶನದ ‘ಸಲಾರ್’ ಹಾಗೂ ನಾಗ ಅಶ್ವಿನ್ ನಿರ್ದೇಶಿಸುತ್ತಿರುವ ‘ಪ್ರಾಜೆಕ್ಟ್ ಕೆ’ ಸಿನಿಮಾ ಮೇಲೆ ಹೋಪ್ ಇಟ್ಟುಕೊಂಡಿದ್ದಾರೆ. ಈ ಎರಡು ಸಿನಿಮಾಗಳು ಈಗ ಗೆಲ್ಲಲೇ ಬೇಕಿದೆ.

 

Leave A Reply

Your email address will not be published.