Mangalore: ಸುಣ್ಣದ ಡಬ್ಬ ನುಂಗಿ ನರಳಾಡಿದ ನಾಗರ ಹಾವು!! ಶಸ್ತ್ರಚಿಕಿತ್ಸೆ ನಡೆಸಿ ಡಬ್ಬ ಹೊರತೆಗೆದ ಯುವ ವೈದ್ಯೆ ‘ಡಾ. ಯಶಸ್ವಿ’
Mangalore Dr. Yashaswi rescued a cobra that had swallowed a box of lime
Mangalore: ನಾಗರಹಾವಿನ(Cobra snake) ಹೊಟ್ಟೆಗೆ ಹೋಗಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವೊಂದನ್ನು ಯುವ ವೈದ್ಯರೊಬ್ಬರು(Young doctor) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.
ಹೌದು, ಸುಣ್ಣದ ಪ್ಲಾಸ್ಟಿಕ್ ಡಬ್ಬವೊಂದು(Plastic box) ನಾಗರಹಾವಿನ ಹೊಟ್ಟೆ ಸೇರಿ, ಉರಗವು ಸಂಕಷ್ಟದಲ್ಲಿದ್ದ ವೇಳೆ, ಉರಗ ತಜ್ಞರ ಮೂಲಕ ಹಾವನ್ನು ಮಂಗಳೂರಿನ(Mangalore) ಯುವ ವೈದ್ಯರೊಬ್ಬರ ಬಳಿಗೆ ಸಾಗಿಸಲಾಗಿತ್ತು. ಸದ್ಯ ಇದೀಗ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಸುಣ್ಣದ ಡಬ್ಬವನ್ನು ಹೊರತೆಗೆದಿದ್ದಾರೆ.
15 ದಿನಗಳ ಹಿಂದೆ ಸ್ನೇಕ್ ಕಿರಣ್(Snake kiran) ಅವರು ಗಾಯಗೊಂಡ ನಾಗರ ಹಾವನ್ನು ತಂದು ಚಿಕಿತ್ಸೆಗೆ ನೀಡಿದ್ದರು. ಅದರ ಗಾಯಕ್ಕೆ ಚಿಕಿತ್ಸೆ ನೀಡುವ ವೇಳೆ ಅದರ ಉದರ ಉಬ್ಬಿರುವುದು ಕಂಡುಬಂದಿದೆ. ಅದನ್ನು ಎಕ್ಸ್ ರೇ ಮಾಡಿ ನೋಡಿದಾಗ ಅದು ಪ್ಲಾಸ್ಟಿಕ್ ನ್ನು ನುಂಗಿರುವುದು ತಿಳಿದುಬಂದಿದೆ. ಗಾಯಕ್ಕೆ ಸರ್ಜರಿ(Surgery) ಮಾಡುವಾಗ ಅದು ನುಂಗಿದ ಸುಣ್ಣದ ಪ್ಲಾಸ್ಟಿಕ್ ಡಬ್ಬಿ ಯನ್ನು ಸರ್ಜರಿ ಮಾಡಿ ತೆಗೆಯಲಾಗಿದೆ. ಅದು ಮೊಟ್ಟೆ ನುಂಗುವ ವೇಳೆ ಈ ಪ್ಲಾಸ್ಟಿಕ್ ಡಬ್ಬವನ್ನು ನುಂಗಿರುವ ಸಾಧ್ಯತೆ ಇದೆ.ಅದರ ಶಸ್ತ್ರ ಚಿಕಿತ್ಸೆ ಬಳಿಕ ಅದಕ್ಕೆ ಆ್ಯಂಟಿ ಬಯೋಟಿಕ್(Anty biotic) ನೀಡಿ, ಆ್ಯಂಟಿ ಸೆಪ್ಟಿಕ್ ಹಾಕಿ ಚಿಕಿತ್ಸೆ ನೀಡಲಾಗಿದೆ. ಗುಣಮುಖವಾದ ನಾಗರ ಹಾವನ್ನು ಸ್ನೇಕ್ ಕಿರಣ್ ಅವರು ಹಾವು ಸಿಕ್ಕಿದ ಜಾಗದಲ್ಲಿ ಬಿಟ್ಟಿದ್ದಾರೆ. ಹಾವು ಸಂಪೂರ್ಣ ಗುಣಮುಖ ಆಗಿದೆ ಎಂಬುದನ್ನು ಪರಿಶೀಲನೆ ಮಾಡಿದ ಬಳಿಕ ಈ ಪ್ರಕ್ರಿಯೆ ಮಾಡಲಾಗಿದೆ ಎಂದು ಡಾ. ನಾರಾವಿ ತಿಳಿಸಿದರು
ಅಂದಹಾಗೆ ಇತ್ತೀಚೆಗೆ ಬಂಟ್ವಾಳದ(Bantwal) ಸಮೀಪವಿರುವ ಸಾಲುಮರ ತಿಮ್ಮಕ್ಕ ಉದ್ಯಾನವನದ(Salumarada timmakka park) ಬಳಿಯಿದ್ದ ಬಿಲವೊಂದರಲ್ಲಿ ಸಿಲುಕಿ ಈ ನಾಗರಹಾವು ಹೊರಬರಲಾಗದೇ ಒದ್ದಾಡುತಿತ್ತು. ಮೂರು ದಿನಗಳಿಂದ ಅದನ್ನು ಗಮನಿಸುತ್ತಿದ್ದ ಮನೆಯವರು ಜೂನ್ 6ರಂದು ಸ್ನೇಕ್ ಕಿರಣ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕಿರಣ್ ಅವರು ಹಾವನ್ನು ಬಿಲದಿಂದ ಹೊರ ತೆಗೆದು ರಕ್ಷಿಸಿದ್ದಾರೆ. ಈ ವೇಳೆ ಅದರ ತಲೆಯ ಕೆಳಭಾಗದಲ್ಲಿ ಗಾಯಗಳಾಗಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಕಿರಣ್ ಗಾಯಗೊಂಡ ಹಾವನ್ನು ಚಿಕಿತ್ಸೆಗಾಗಿ ಮಂಗಳೂರಿನ ಪಶುವೈದ್ಯ ಡಾ. ಯಶಸ್ವಿ ನಾರಾವಿ ಅವರ ಬಳಿ ತಂದಿದ್ದರು.
ಗಾಯಕ್ಕೆ ಚಿಕಿತ್ಸೆ ಒದಗಿಸಿದ ವೈದ್ಯರು ಹಾವಿನ ಹೊಟ್ಟೆ ಉಬ್ಬೇರಿದ್ದನ್ನು ಗಮನಿಸಿ ಎಕ್ಸ್ ರೇ ಮಾಡಿದ್ದಾರೆ. ಆಗ ಅದರ ಉದರದೊಳಗೆ ಪ್ಲಾಸ್ಟಿಕ್ ವಸ್ತುವಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿ ಅದರ ಉದರದೊಳಗಿದ್ದ ಸುಣ್ಣದ ಪ್ಲಾಸ್ಟಿಕ್ ಡಬ್ಬವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಡಾ. ಯಶಸ್ವಿ(Dr Yashaswi) ಅವರ ಪ್ರಕಾರ ‘ಸುಮಾರು ಐದು ಅಡಿ ಉದ್ದದ ನಾಗರಹಾವು ಇದಾಗಿತ್ತು. 10ವರ್ಷ ಪ್ರಾಯವಾಗಿರಬಹುದು. ಹಾವು ಮೊಟ್ಟೆ ನುಂಗುವ ವೇಳೆ ಸುಣ್ಣದ ಡಬ್ಬವನ್ನು ಒಟ್ಟಿಗೆ ನುಂಗಿದ್ದಿರಬಹುದು’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಡಾ. ಯಶಸ್ವಿ ನಾರಾವಿ, 15 ದಿನಗಳ ಹಿಂದೆ ಸ್ನೇಕ್ ಕಿರಣ್ ಅವರು ಗಾಯಗೊಂಡ ನಾಗರ ಹಾವನ್ನು ತಂದು ಚಿಕಿತ್ಸೆಗೆ ನೀಡಿದ್ದರು. ಅದರ ಗಾಯಕ್ಕೆ ಚಿಕಿತ್ಸೆ ನೀಡುವ ವೇಳೆ ಅದರ ಉದರ ಉಬ್ಬಿರುವುದು ಕಂಡುಬಂದಿದೆ. ಅದನ್ನು ಎಕ್ಸ್ ರೇ ಮಾಡಿ ನೋಡಿದಾಗ ಪ್ಲಾಸ್ಟಿಕ್ ನುಂಗಿರುವುದು ತಿಳಿದುಬಂದಿದೆ. ಗಾಯಕ್ಕೆ ಸರ್ಜರಿ ಮಾಡುವಾಗ ಅದು ನುಂಗಿದ ಸುಣ್ಣದ ಪ್ಲಾಸ್ಟಿಕ್ ಡಬ್ಬಿಯನ್ನು ಸರ್ಜರಿ ಮಾಡಿ ತೆಗೆಯಲಾಗಿದೆ. ಅದು ಮೊಟ್ಟೆ ನುಂಗುವ ವೇಳೆ ಈ ಪ್ಲಾಸ್ಟಿಕ್ ಡಬ್ಬವನ್ನು ನುಂಗಿರುವ ಸಾಧ್ಯತೆ ಇದೆ. ಅದರ ಶಸ್ತ್ರ ಚಿಕಿತ್ಸೆ ಬಳಿಕ ಅದಕ್ಕೆ ಆ್ಯಂಟಿ ಬಯೋಟಿಕ್ ನೀಡಿ, ಆ್ಯಂಟಿ ಸೆಪ್ಟಿಕ್ ಹಾಕಿ ಚಿಕಿತ್ಸೆ ನೀಡಲಾಗಿದೆ. ಗುಣಮುಖವಾದ ನಾಗರ ಹಾವನ್ನು ಸ್ನೇಕ್ ಕಿರಣ್ ಅವರು ಹಾವು ಸಿಕ್ಕಿದ ಜಾಗದಲ್ಲಿ ಬಿಟ್ಟಿದ್ದಾರೆ. ಹಾವು ಸಂಪೂರ್ಣ ಗುಣಮುಖ ಆಗಿದೆ ಎಂಬುದನ್ನು ಪರಿಶೀಲನೆ ಮಾಡಿದ ಬಳಿಕ ಈ ಪ್ರಕ್ರಿಯೆ ಮಾಡಲಾಗಿದೆ ಎಂದಿದ್ದಾರೆ.