Electricity Price Hike: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಇಂದು ಕರ್ನಾಟಕ ಬಂದ್! ಯಾವುದಿರುತ್ತೆ? ಯಾವುದಿರಲ್ಲ?
Latest Karnataka news Karnataka closed today to oppose the electricity rate hike which one is open which one is closed
Electricity Price Hike: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಂದು ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆ (Electricity Price Hike) ವಿರೋಧಿಸಿ ಇಂದು (ಜೂ.22) ಮುಷ್ಕರ ಮಾಡುವುದಾಗಿ ಘೋಷಣೆ ಮಾಡಿತ್ತು. ಹಾಗಾಗಿ ಜನಸಾಮಾನ್ಯರಿಗೆ ಇಂದು ತೊಂದರೆಯಾಗುವ ಸಂಭವವಿದೆ.
ಹಾಗಾಗಿ ಗುರುವಾರ ಅಂದರೆ ಇಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ.
ಅಗತ್ಯ ಸೇವೆ, ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಒಂದು ದಿನ ವ್ಯಾಪಾರ ಸಂಸ್ಥೆಗಳು ನಷ್ಟ ಅನಭವಿಸುತ್ತದೆ. ಆದರೆ ಮುಖ್ಯವಾದ ವಿಷಯವೇನೆಂದರೆ ವಿದ್ಯುತ್ ದರ ಹೆಚ್ಚಳದಿಂದ ಮುಂದೆ ಕೈಗಾರಿಕೆಗಳು ಉಳಿಯುವುದಿಲ್ಲ ಎಂಬುದಾಗಿ ಕೆಸಿಸಿಐ ಅಧ್ಯಕ್ಷ ವಿನಯ್ ಜವಳಿ ಹೇಳಿದ್ದಾರೆ.
ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಗದಗ, ಬಿಜಾಪುರ, ರಾಣೆಬೆನ್ನೂರು, ರಾಯಚೂರು, ಚಿತ್ರದುರ್ಗ, ಕಲ್ಯಾಣ್ ಕಾಮತಕ, ಹಾವೇರಿ, ಕಾಮತಕ ಜಿಲ್ಲಾ ಚೇಂಬರ್‌ಗಳು, ಧಾರವಾಡ, ಶಿರಸಿ, ಕಾರವಾರ, ಬೀದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಂಗಳೂರು, ಯಾದಗಿರಿ, ಇತರೆ ಉದ್ಯಮ ಸಂಘಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ.