Dr. Pramod Sawant: ರಾಜ್ಯದ ಈ ಎಲ್ಲಾ ಶಾಲೆಗಳಲ್ಲಿ ಇಂಟರ್ನೆಟ್ ಸೇವೆ ಪ್ರಾರಂಭ!

Internet service started in all these schools of the state

Dr. Pramod Sawant: ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ (Dr. Pramod Sawant) ಅವರು ಸಚಿವ ಸಂಪುಟ ಸಭೆಯ ಬಳಿಕ ಹಲವಾರು ಬೆಳವಣಿಗೆಯ ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಸುದ್ದಿಗಾರರ ಜೊತೆ ಹಂಚಿಕೊಂಡಿದ್ದಾರೆ.

 

ಮುಖ್ಯವಾಗಿ ರಾಜ್ಯದ ಎಲ್ಲ ಶಾಲೆಗಳಿಗೆ ಇಂಟರ್ ನೆಟ್ ಸೇವೆಯನ್ನು ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಜೊತೆಗೆ ತುರ್ತು ಸಿಬಂದಿ ಮತ್ತು ಪೊಲೀಸರ ವೇತನವನ್ನು ಒಂದೇ ಮಟ್ಟಕ್ಕೆ ತರಲಾಗಿದೆ ಎಂದು ತಿಳಿಸಿದರು. ಶಾಖಳಿಯ ಬಸ್ ನಿಲ್ದಾಣವನ್ನು ಕದಂಬ ನಿಗಮಕ್ಕೆ ಹಸ್ತಾಂತರಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಇನ್ನು ಕೇಂದ್ರ ಕಾರಾಗೃಹದಲ್ಲಿ ಐದು ವೈದ್ಯಕೀಯ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ನೀಡಲಾಗಿದೆ. ಗೋವಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಆಕ್ಯುಪೇಷನಲ್ ಥೆರಪಿಸ್ಟ್, ಕೆಮಿಸ್ಟ್ ಮತ್ತು ಇತರರ ಹುದ್ದೆಗಳನ್ನು ಸಹ ಮಂಜೂರು ಮಾಡಲಾಗಿದೆ.

ಇನ್ನು ಸಾಮಾಜಿಕ ಭದ್ರತಾ ಯೋಜನೆ ಹಾಗೂ ಇತರೆ ಕಲ್ಯಾಣ ಯೋಜನೆಗಳ ಹಣ ಪ್ರತಿ ತಿಂಗಳು ಫಲಾನುಭವಿಗಳಿಗೆ ಲಭಿಸದಿದ್ದಾಗ, ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ತೊಂದರೆಯುಂಟಾಗುತ್ತದೆ. ಇದರಿಂದಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳ 10 ರಂದು ಫಲಾನುಭವಿಗಳ ಖಾತೆಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಖ್ಯವಾಗಿ ಜುಲೈನಿಂದ ನಡೆಯಲಿರುವ ವಿಧಾನಸಭೆ ಅಧಿವೇಶನಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಅಧಿವೇಶನದಲ್ಲಿ ವಿವಿಧ ವಿಷಯಗಳ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

 

ಇದನ್ನು ಓದಿ: Udupi: ಉಡುಪಿಯ ಮಲ್ಪೆ ಕಡಲ ತೀರದುದ್ದಕ್ಕೂ ಗಂಗೆಯ ಕೂದಲು ; ವಿಜ್ಞಾನಿಗಳ ಭೇಟಿ- ರಹಸ್ಯ ಬಯಲು !

Leave A Reply

Your email address will not be published.