Adipurush : ಅಂದು ಬಾಹುಬಲಿ ತೋರಿಸಿ ಕುರುಕ್ಷೇತ್ರ ಟ್ರೋಲ್ ಮಾಡಿದ್ರು ಪ್ರಭಾಸ್ ಫ್ಯಾನ್ಸ್: ಇಂದು ಕರ್ಮ ರಿಟರ್ನ್ಸ್ ಎಂದ ದರ್ಶನ್ ಫ್ಯಾನ್ಸ್!
Adipurush movie Sandalwood news Darshan fans says Karma returns by recalling kurukshetra movie had compared to Bahubali movie
Adipurush movie: ಭಾರತದಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ್ದ, ಸ್ಟಾರ್ ನಟ ಪ್ರಭಾಸ್(Prabhas) ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ ಕೆಲ ದಿನಗಳ ಹಿಂದಷ್ಟೇ ಅದ್ದೂರಿಯಾಗಿ ತೆರೆಗೆ ಬಂದಿದ್ದು, ಪ್ಯಾನ್ ಇಂಡಿಯಾ(Pan India movie) ಪಟ್ಟದಲ್ಲಿ ರಿಲೀಸ್ ಆಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ. ಸಿನಿಮಾ ನೋಡಿ ಪ್ರೇಕ್ಷಕರು ಚಿತ್ರವನ್ನು ಬ್ಯಾನ್(Ban) ಮಾಡಬೇಕೆಂದೆಲ್ಲ ಆಗ್ರಹಿಸಿದ್ದಾರೆ. ಆದರೆ ಈ ನಡುವೆ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star darshan) ಅಭಿಮಾನಿಗಳು ಟಾಲಿವುಡ್ ಮಂದಿಗೆ ಕರ್ಮ ರಿಟರ್ನ್ಸ್(Karma returns) ಎಂದು ಟಕ್ಕರ್ ಕೊಡುತ್ತಿದ್ದಾರೆ.
ಹೌದು, ಕುರುಕ್ಷೇತ್ರದಲ್ಲಿ(Kurukshetra) ದುರ್ಯೋಧನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ್ದು ಗೊತ್ತೇ ಇದೆ. ಈ ಸಿನಿಮಾ ರಿಲೀಸ್ ಆದ ವೇಳೆ ತೆಲುಗು ಮಂದಿ ಹಿಗ್ಗಾ ಮುಗ್ಗ ಟ್ರೋಲ್ ಮಾಡಿದ್ದರು. ಅಂದಿನ ಸಿಟ್ಟನ್ನು ದರ್ಶನ್ ಅಭಿಮಾನಿಗಳು ‘ಆದಿಪುರುಷ್'(Adipurush movie) ಸಿನಿಮಾ ಬಂದಾಗ ತೀರಿಸಿಕೊಂಡಿದ್ದಾರೆ. ಅಷ್ಟಕ್ಕೂ ‘ಬಾಹುಬಲಿ’, ‘ಕುರುಕ್ಷೇತ್ರ’ ‘ಆದಿಪುರುಷ್’ ಏನಿದು? ಸೇಡು ತೀರಿಸಿಕೊಂಡ ಕಥೆ.
ದರ್ಶನ್ ನಟನೆಯ ‘ಕುರುಕ್ಷೇತ್ರ’ ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ತೆಲುಗು, ಬಾಲಿವುಡ್ ಜನರು ಬಾಹುಬಲಿಗೆ ಹೋಲಿಸಿದ್ದರು. ‘ಬಾಹುಬಲಿ'(Bahubali) ಚಿತ್ರದ ಮುಂದೆ ಕುರುಕ್ಷೇತ್ರ ಏನೂ ಇಲ್ಲವೆಂಬಂತೆ ಅಣಕಿಸಿದ್ದರು. ಆದರೆ ಈಗ ಅದೇ ತೆಲುಗು ನಟ, ಹಿಂದಿ ನಿರ್ದೇಶಕನ ‘ಆದಿಪುರುಷ್’ ಸಿನಿಮಾಗೆ ಇಂಥ ಪರಿಸ್ಥಿತಿ ಬಂದಿದೆ. ಇದನ್ನೇ ಅಲ್ಲವೇ ಕರ್ಮ ರಿಟರ್ನ್ಸ್ ಅನ್ನೋದು ಎಂದು ದರ್ಶನ್ ಅಭಿಮಾನಿಗಳು ತಕ್ಕ ಉತ್ತರ ಕೊಟ್ಟಿದ್ದಾರೆ. ಆದಿಪುರುಷ್ ಚಿತ್ರಕ್ಕಿಂತ ನಮ್ಮ ಕುರುಕ್ಷೇತ್ರ ಸಿನಿಮಾ ನೂರು ಪಾಲು ಉತ್ತಮವಾಗಿದೆ ಎನ್ನುತ್ತಿದ್ದಾರೆ.
ಅಂದಹಾಗೆ ‘ಕುರುಕ್ಷೇತ್ರ’ ಸಿನಿಮಾದ ಕೆಲವು ಪಾತ್ರಗಳನ್ನು ಇಟ್ಟುಕೊಂಡು ಟ್ರೋಲ್(Troll) ಮಾಡಿದ್ದರು. ಕೃಷ್ಣ ಪಾತ್ರದಲ್ಲಿ ನಟಿಸಿದ್ದ ರವಿಚಂದ್ರನ್ ಪಾತ್ರವನ್ನಿಟ್ಟುಕೊಂಡು ಆಡಿಕೊಂಡಿದ್ದರು. ಈಗ ಅದೆಲ್ಲವೂ ‘ಆದಿಪುರುಷ್’ ಸಿನಿಮಾ ಮೇಲೆ ಆಗುತ್ತಿದೆ. ‘ಆದಿಪುರುಷ್’ ಸಿನಿಮಾ ಪಾತ್ರಗಳ ವಿನ್ಯಾಸ ಟ್ರೋಲ್ ಆಗುತ್ತಿದೆ. ಹನುಮಂತ ಹಾಗೂ ರಾವಣನನ್ನು ಚಿತ್ರಿಸಿದ ರೀತಿ ಪ್ರೇಕ್ಷಕರಿಗೆ ಹಿಡಿಸಿಲ್ಲ. ಅಲ್ಲದೆ ಸಿನಿಮಾದಡೈಲಾಗ್ಗಳ ವಿರುದ್ಧವೂ ಸಿನಿಪ್ರಿಯರು ಅಸಮಧಾನ ಹೊರಹಾಕಿದ್ದಾರೆ. ಹೀಗಾಗಿ ಕರ್ಮ ರಿಟರ್ನ್ಸ್ ಅಂತ ದರ್ಶನ್ ಅಭಿಮಾನಿಗಳು ಟೀಸರ್ ರಿಲೀಸ್ ಆದಾಗಲೇ ಟ್ರೋಲ್ ಮಾಡಿದ್ದರು.
ಇನ್ನು ‘ಆದಿಪುರುಷ್’ ಚಿತ್ರವನ್ನು ಬ್ಯಾನ್ ಮಾಡುವಂತೆ ಆಲ್ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್ ಒತ್ತಾಯಿಸಿದೆ. ಈ ಸಂಬಂಧ ಪ್ರಧಾನಿ ಮೋದಿ(PM Modi) ಅವರಿಗೆ ಪತ್ರ ಬರೆದು ಮನವಿ ಮಾಡಿದೆ. ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾದ ಪಾತ್ರಗಳು, ಡೈಲಾಗ್ಗಳು ಶ್ರೀರಾಮ, ಹನುಮಂತ, ಸೀತಾಮಾತೆ ಸೇರಿದಂತೆ ರಾಮಯಣದ ಪಾತ್ರಧಾರಿಗಳ ಇಮೇಜ್ ಹಾಳು ಮಾಡುತ್ತಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬಂದಿದೆ. ಈ ಸಿನಿಮಾ ನೋಡಿದರೆ ಯಾವುದೋ ವಿಡಿಯೋ ಗೇಮ್ ನೋಡಿದಂತೆ ಆಗುತ್ತಿದೆ. ಪ್ರಭಾಸ್ನಂತಹ ಜವಾಬ್ದಾರಿಯುತ ಸ್ಟಾರ್ ನಟ ಈ ಸಿನಿಮಾದ ಭಾಗವಾಗಿರುವುದಕ್ಕೆ ನಮಗೆ ಬೇಸರವಾಗುತ್ತಿದೆ. ಈ ಸಿನಿಮಾ ಪ್ರದರ್ಶನಕ್ಕೆ ಅರ್ಹವಲ್ಲ, ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.