Uttar khand: 8 ಕೋಟಿ ರೂ. ದೋಚಿದ್ದ ಕತರ್ನಾಕ್ ದಂಪತಿ ಕೇವಲ 10 ರೂ. ಜ್ಯೂಸ್ ಗೆ ಆಸೆಪಟ್ಟು ತಗಲಾಕೊಂಡ್ರು!!

Latest India robbery news Ludhiana CMS securities robbery case those who stole 8 crores from finance were caught while drinking 10 rupees juice

Ludhiana robbery case : ಇಲ್ಲೊಂದು ಕತರ್ನಾಕ್ ದಂಪತಿಯ ಕಥೆಯನ್ನು ಕೇಳಿದ್ರೆ ನೀವೇ ವ್ಯಥೆಪಡುತ್ತೀರ. ಫೈನಾನ್ಸ್‌ ಕಂಪ​ನಿ​ಯೊಂದಲ್ಲಿ ಸುಮಾರು 8 ಕೋಟಿ ರೂ.ಗೂ ಅಧಿಕ ಹಣವನ್ನು ದರೋಡೆ ಮಾಡಿ (Ludhiana robbery case), ಪರಾರಿಯಾಗಿ ಮುಸುಕು ಹಾಕಿ ಓಡಾಡುತ್ತಿದ್ದ ಚಾಲಾಕಿ ದಂಪತಿ 10 ರೂಪಾಯಿಯ ಜ್ಯೂಸ್‌(Juice) ಕುಡಿಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಸಂಗತಿ ಉತ್ತರಾಖಾಂಡ್‌(Uttar khand)ನಲ್ಲಿ ನಡೆದಿದೆ.

ಹೌದು, ಲೂಧಿಯಾನದಲ್ಲಿ(Ludhiyana) ಜೂನ್ 10 ರಂದು ನಡೆದ 8 ಕೋಟಿ 49 ಲಕ್ಷ ರೂಪಾಯಿ ದರೋಡೆಗೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪಂಜಾಬ್(Panjab) ಪೊಲೀಸರು ಬಂಧಿಸಿದ್ದಾರೆ. ಕೋಟ್ಯಾಂತರ ರೂಪಾಯಿ ದರೋಡೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದ ‘ಡಾಕು ಹಸೀನಾ'(Daku haseena) ಎಂದು ಕರೆಯಲ್ಪಡುವ ಮಂದೀಪ್ ಕೌರ್ – ಜಸ್ವಿಂದರ್ ಸಿಂಗ್ ದಂಪತಿ ಅರ್ಧ ದಾರಿಯಲ್ಲಿ 10 ರೂ ಜ್ಯೂಸ್‌ ಕುಡಿಯುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಬಂಧನಕ್ಕೊಳಗಾಗಿದ್ದಾರೆ. ಇದೀಗ ಪಂಜಾಬ್​ನ ಲೂಧಿಯಾನದಲ್ಲಿ ಜೂನ್ 10ರಂದು 8 ಕೋಟಿ ರೂ. ದೋಚಿದ್ದ ಆರೋಪಿಗಳು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಏನಿದು ಪ್ರಕರಣ?
ಪಂಜಾಬ್​ನ ಲೂಧಿಯಾನದಲ್ಲಿ ಜೂನ್ 10ರಂದು ಬ್ಯಾಂಕ್‌ಗಳಿಗೆ ಹಣ ಸರಬರಾಜು ಮಾಡುವ ಸಂಸ್ಥೆ(ಸಿಎಂಎಸ್‌)ಯಲ್ಲಿ ಸಿಬ್ಬಂದಿಯನ್ನು ಕಟ್ಟಿ ಹಾಕಿ 8 ಕೋಟಿ ರೂ. ದರೋಡೆ ಮಾಡಿಕೊಂಡು ದಂಪತಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಸಿಸಿಟಿವಿ(CCTV) ದೃಶ್ಯವಾವಳಿ ಸೇರಿದಂತೆ, ಕೆಲ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಉತ್ತರಾಖಂಡದ ಚಮೋಲಿಯ ಸಿಖ್ ತೀರ್ಥಕ್ಷೇತ್ರ (Sikh shrine in Chamoli) ಹೇಮಕುಂಡ್‌ (Hemkunda) ಸಾಹೀಬ್‌ನಲ್ಲಿ ದಂಪತಿ ಇದ್ದಾರೆ. ಆದ​ರೆ ಮುಸುಕು ಹಾಕಿಕೊಂಡು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀ​ಸ​ರಿಗೆ ಲಭಿ​ಸಿತ್ತು. ಆದರೆ ಮುಸುಕು ತೆಗೆ​ಸು​ವುದು ಸವಾ​ಲಾ​ಗಿ​ತ್ತು. ಈ ನಡುವೆ, ಹೇಮ​ಕುಂಡ​ದಲ್ಲಿ ಭಕ್ತಾದಿಗಳಿಗೆ ಉಚಿತವಾಗಿ 10 ರು. ಪ್ಯಾಕೆಟ್‌ ಜ್ಯೂಸ್‌ (Juice packets) ನೀಡಲಾಗುತ್ತದೆ. ಹೀಗಾ​ಗಿ ಅಲ್ಲಿಗೆ ಬಂದ ದಂಪತಿ ಜ್ಯೂಸ್‌ ಕುಡಿಯಲು ತಮ್ಮ ಮುಸುಕು ಬಿಚ್ಚಿದ್ದಾರೆ. ಈ ವೇಳೆ ಪೊಲಿಸರಿಗೆ ಚಾಲಾಕಿ ದಂಪತಿ ಕಾಣಿ​ಸಿ​ದ್ದಾರೆ.

ಆದರೆ ತಕ್ಷಣವೇ ಅವರನ್ನು ಬಂಧಿಸದೇ ಅವರು ಸಿಖ್‌ ಮಂದಿರದಲ್ಲಿ ದರ್ಶನ ಪಡೆದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈಗಾಗಲೇ ಪ್ರಕರಣದ 9 ಆರೋಪಿಗಳನ್ನು ಬಂಧಿಸಲಾಗಿದೆ. ಕೇದಾರನಾಥ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಿದ ಬಳಿಕ ನೇಪಾಳಕ್ಕೆ ಹೋಗಿ ನೆಲೆಸುವ ಯೋಜನೆ ದಂಪತಿಯದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ದಂಪತಿ ಬಳಿಯಿಂದ 21 ಲಕ್ಷ ರೂ.ಗಳನ್ನು ಸ್ಥಳದಲ್ಲಿ ವಶಪಡಿಸಿಕೊಂಡ ಪೊಲೀಸರು, ನಂತರ ಲೂಧಿಯಾನಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ. ಈವರೆಗೂ ಲೂಟಿ ಮಾಡಲಾಗಿದ್ದ 6 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ. ಘಟನೆ ನಡೆದ ಐದು ದಿನದಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಲೂಧಿಯಾನ ಪೊಲೀಸ್‌ ಆಯುಕ್ತ ಸಿಧು ತಿಳಿಸಿದ್ದಾರೆ.

Submarine missing: ಟೈಟಾನಿಕ್ ಅವಶೇಷ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ!!

Leave A Reply

Your email address will not be published.