Gruha Jyothi scheme : ಉಚಿತ ವಿದ್ಯುತ್ ನಮಗೆ ಬೇಡ, ಅಂದವರೇ ಈಗ ಗೃಹ ಜ್ಯೋತಿ ಯೋಜನೆಗೆ ಅರ್ಜಿ, ಅದಕ್ಕೆ ಕಾರಣ ಆಗಿದೆ ಸರ್ಕಾರದ ಅದೊಂದು ನೀತಿ !

Karnataka latest news Congress Five guarantees Gruha Jyothi scheme in Karnataka people decided for free electricity registration

Gruha Jyothi scheme : ಗೃಹ ಜ್ಯೋತಿ ಯೋಜನೆಯು(Gruha Jyothi scheme) ಆಗಸ್ಟ್ 1ರಿಂದ ಜಾರಿಗೆ ಬರಲಿದ್ದು, 200 ಯುನಿಟ್​ ವಿದ್ಯುತ್ ಅಥವಾ ಅದಕ್ಕಿಂತ ಕಡಿಮೆ ಯುನಿಟ್ ಬಳಸಿದವರು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ತಿಂಗಳ ಬಳಕೆ ಗರಿಷ್ಠ 200 ಯುನಿಟ್‌ವರೆಗೆ, ಕಳೆದ ಹಣಕಾಸು ವರ್ಷದಲ್ಲಿ ಪ್ರತಿ ಗ್ರಾಹಕ ತಿಂಗಳ ಸರಾಸರಿ ಬಳಕೆ ಮೇಲೆ ಮತ್ತು ಅವರ ಸರಾಸರಿ ಉಪಯೋಗದ ಮೇಲೆ ಶೇ.10ರಷ್ಟು ಹೆಚ್ಚುವರಿ ಉಚಿತ ವಿದ್ಯುತ್​ ಬಳಕೆಗೆ​ ಅರ್ಹರಾಗುತ್ತಾರೆ.

 

ಈಗಾಗಲೇ ರಾಜ್ಯ ಕಾಂಗ್ರೆಸ್ ಸರ್ಕಾರ (Congress Govt) ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ (Five Guarantees) ಪೈಕಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವ ‘ಗೃಹ ಜ್ಯೋತಿ’ (Gruha Jyothi Scheme) ಯೋಜನೆ ಕೂಡಾ ಒಂದು. ಈ ಯೋಜನೆಯ ಪ್ರಯೋಜನೆ ಪಡೆಯಲು ಈಗಾಗಲೇ ಜೂನ್ 18ರ ಭಾನುವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

 

ಆರಂಭದಲ್ಲಿ ಯೋಜನೆಯನ್ನು ಘೋಷಿಸಿದಾಗ, ಗೃಹ ಜ್ಯೋತಿ ಯೋಜನೆಯು ನಮಗೆ ಬೇಡ ಎಂದು ಹಲವರು ಹೇಳಿಕೊಂಡಿದ್ದರು. ಆದರೆ, ದುಪ್ಪಟ್ಟು ವಿದ್ಯುತ್‌ ಬಿಲ್‌ ಬರುತ್ತಿರುವ ಹಿನ್ನೆಲೆಯಲ್ಲಿ‌, ಹೆಚ್ಚುವರಿ ಹೊರೆ ಭರಿಸಲು ಸಾಧ್ಯವಿಲ್ಲ ಎಂದು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರು ಮುಂದಾಗಿದ್ದಾರೆ.

 

ಗೃಹ ಜ್ಯೋತಿ ಯೋಜನೆ ಘೋಷಿಸಿದ ಬಳಿಕ ವಿದ್ಯುತ್‌ ಬಿಲ್‌ ಹೆಚ್ಚಿಗೆ ಬರುತ್ತಿದೆ ಎನ್ನುವುದು ಹಲವರ ದೂರು. ಬಹುತೇಕ ಹೆಚ್ಚಿನ ಜನರಿಗೆ ದುಪ್ಪಟ್ಟು ಬಿಲ್‌ ಬಂದಿವೆ. ಸರ್ಕಾರದ ಉಚಿತ ಗ್ಯಾರಂಟಿ ಯೋಜನೆ ಬೇಡವೆಂದವರು, ಈಗ ಹೆಚ್ಚಿಗೆ ಬಿಲ್‌ ಪಾವತಿಸಲು ಸಿದ್ಧರಿಲ್ಲ. ಇದಕ್ಕೆ ಕಾರಣ, ಈ ಹಿಂದೆ ಬರುತ್ತಿದ್ದ ಅಂದಾಜು ಸರಾಸರಿ ಬಿಲ್‌ ಮೊತ್ತಕ್ಕಿಂದ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಯಾರೂ ಸಿದ್ಧರಿಲ್ಲ.  ಹೀಗಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ, 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಪಡೆಯಲು ಜನರು ಮುಂದಾಗುತ್ತಿದ್ದಾರೆ.

 

ಈ ಬಗ್ಗೆ ಪತ್ರಕರ್ತ ರಾಜೀವ್‌ ಹೆಗಡೆ ಟ್ವೀಟ್‌ ಮಾಡಿದ್ದು, ಉಚಿತ ವಿದ್ಯುತ್‌ ಯೋಜನೆಗೆ ಅರ್ಜಿ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಹಿಂದೆ ನಮಗೆ ಹೊರೆಯಾಗುವಷ್ಟು ಬರೆ ಹಾಕಬೇಡಿ ಎಂದು ಉಚಿತ ವಿದ್ಯುತ್‌ ಯೋಜನೆಯಿಂದ ಹಿಂದೆ ಸರಿಯುವುದಾಗಿ ಹೇಳಿಕೊಂಡಿದ್ದ ಅವರು, ಈಗ ಮತ್ತೊಂದು ಪೋಸ್ಟ್‌ ಹಾಕಿದ್ದಾರೆ.

 

ಕಾಂಗ್ರೆಸ್‌ ಅಥವಾ ಬಿಜೆಪಿ ಅಥವಾ ಯಾವುದೇ ಪಕ್ಷ ಬರಲಿ ನಮ್ಮಿಂದ ಲೂಟಿ ಮಾಡುವುದು ಕಾಯಂ. ನನ್ನ ಹೊರೆ ಏರಿಸಿ ತೆರಿಗೆ ಪಾವತಿಸುವ ಪ್ರಾಮಾಣಿಕ ನಾಗರಿಕನಿಗೆ ಸ್ಪಂದಿಸದವರಿಗೆ, ನಾನೇಕೆ ಸ್ಪಂದಿಸಲಿ. ನಾನು ಕೂಡ ಉಚಿತ ವಿದ್ಯುತ್‌ ಲಾಭ ಪಡೆಯುತ್ತೇನೆ” ಎಂದು ಹೇಳಿದ್ದಾರೆ.

https://twitter.com/CMofKarnataka?ref_src=twsrc%5Etfw

ಆರಂಭದಲ್ಲಿ ಉಚಿತ ವಿದ್ಯುತ್‌ ಬೇಡ ಎಂಬ ಆಲೋಚನೆ ಇತ್ತು. ಆದರೆ 0-50 ಮತ್ತು 51-100ರ ಸ್ಲಾಬ್ ತೆಗೆದಿರುವುದಲ್ಲದೆ,ಪರಿಮಾಣ ಶುಲ್ಕ 2.55 ಹಾಕಲಾಗಿದೆ. ಉಚಿತ ವಿದ್ಯುತ್‌ ಬೇಡ, ನಾವು ಬಿಲ್ ಪಾವತಿಸುತ್ತೇವೆ ಎನ್ನುವವರು ಮೂರ್ಖರಾಗುತ್ತಾರೆ. ಹೀಗಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಉತ್ತಮ ಎಂದು  ಹೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಈ ರೀತಿ ನಿಮ್ಮ ಸಿಲ್ಕ್ ಸೀರೆ ಒಗೆದರೆ ವರ್ಷಾನುಗಟ್ಟಲೆ ಸೀರೆ ಹಾಳಾಗುವುದಿಲ್ಲ!

Leave A Reply

Your email address will not be published.