Husband – Wife: ಭಾರತಕ್ಕಿಂತ, ಅಮೇರಿಕ ಬೆಸ್ಟ್ ಎಂದು ರಾತ್ರೋ ರಾತ್ರಿ ವಿದೇಶ ಹಾರಿದ ದಂಪತಿಗಳು, ಆದರೆ ಮುಂದೆ ನಡೆದಿದ್ದೇ ಬೇರೆ !

Husband - Wife couple who went abroad overnight said America is better than India

Husband – Wife: ಜೀವನದಲ್ಲಿ ದುಡ್ಡು ಮತ್ತು ಸ್ಥಳವನ್ನು ಆಧಾರಿಸಿ ಸುಖವಾಗಿ ಇರಬಹುದು ಎಂದು ಬಹುತೇಕರ ಅಭಿಪ್ರಾಯ. ಅಂತೆಯೇ ಅಮೆರಿಕದಲ್ಲಿ ಸಂತೋಷವಾಗಿ ಬಾಳಬಹುದು ಅಂತ ಭಾರತ ತೊರೆದು ಅನಧಿಕೃತವಾಗಿ ಅಮೆರಿಕ ಪ್ರವೇಶಿಸಲು ಪ್ಲಾನ್​ ಮಾಡಿಕೊಂಡಿದ್ದ ಗುಜರಾತ್​ ಮೂಲದ ಯುವದಂಪತಿ ಇದೀಗ ಭಾರೀ ಅಪಾಯದಲ್ಲಿ ಸಿಲುಕಿದ್ದಾರೆ.

 

ದೂರದ ಬೆಟ್ಟ ಕಣ್ಣಿಗೆ ಸುಂದರವಾಗಿ ಕಾಣುತ್ತದೆ ಎಂದು ಬೆಟ್ಟ ಹತ್ತಲು ಹೋದರೆ ಅಲ್ಲಿನ ಪರಿಸ್ಥಿತಿ ಭಯಾನಕವಾಗಿರುತ್ತದೆ . ಎಷ್ಟೇ ಆದರೂ ವಿದೇಶ ವಿದೇಶವೇ, ಹೌದು, ಪಾಕಿಸ್ತಾನ ಏಜೆಂಟ್​ ಕೈಯಲ್ಲಿ ದಂಪತಿ (Husband – Wife) ಸಿಕ್ಕಿಬಿದ್ದಿದ್ದು, ಅವರನ್ನು ಇರಾನ್​ನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ.

ಮೂಲತ ಗುಜರಾತಿನ ಅಹಮದಾಬಾದ್​ ನಗರದ ನರೋದಾ ಏರಿಯಾದ ದಂಪತಿ ಇರಾನ್​ನಲ್ಲಿ ಪಾಕ್​ ಏಜೆಂಟ್​ ಕೈಯಲ್ಲಿ ಸಿಲುಕಿದ್ದು, ಈ ಪ್ರಕರಣ ಸಂಬಂಧ ನರೋದಾ ಏರಿಯಾದ ಕೃಷ್ಣನಗರ ಪೊಲೀಸ್​ ಠಾಣೆ ಮತ್ತು ಅಹಮದಾಬಾದ್​ ನಗರದ ಅಪರಾಧ ವಿಭಾಗದಲ್ಲಿ ಎಫ್​ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ ಎಂದು ಡೆಪ್ಯುಟಿ ಕಮಿಷನರ್​ ಆಫ್​ ಪೊಲೀಸ್​ ಚೈತನ್ಯ ಮಂಡಲಿಕ್​ ಅವರು ತಿಳಿಸಿದ್ದಾರೆ. ​

ಸಿಕ್ಕಿಬಿದ್ದಿರುವ ದಂಪತಿಯನ್ನು ಪಂಕಜ್​ ಪಟೇಲ್​ ಮತ್ತು ಪತ್ನಿ ನಿಶಾ ಪಟೇಲ್​ ಎಂದು ಗುರುತಿಸಲಾಗಿದೆ. ಅಮೆರಿಕದಲ್ಲಿ ಸಂತೋಷವಾಗಿ ಬದುಕುಬಹುದು ಅಂತ ಅಕ್ರಮವಾಗಿ ಅಮೆರಿಕ ಪ್ರವೇಶ ಮಾಡಲು ದಂಪತಿ ಬಯಸಿದ್ದರು. ಬಳಿಕ ಹೈದರಾಬಾದ್​ ಮೂಲದ ಏಜೆಂಟ್​ ಅನ್ನು ಸಂಪರ್ಕಿಸಿದ್ದರು. ಆತ ಇಬ್ಬರಿಗೂ ವಿಮಾನ ಟಿಕೆಟ್​ ವ್ಯವಸ್ಥೆ ಮಾಡಿಕೊಟ್ಟಿದ್ದನು.

ಏಜೆಂಟ್​ ಯೋಜನೆಯ ಪ್ರಕಾರ, ದಂಪತಿ ಇರಾನ್‌ನ ಟೆಹ್ರಾನ್‌ಗೆ ಬಂದಿಳಿಯಬೇಕಿತ್ತು. ನಂತರ ಆತನ ಸೂಚನೆಗಳ ಪ್ರಕಾರ ಮುಂದುವರಿಯಬೇಕಿತ್ತು. ಆದಾಗ್ಯೂ ಕೆಲವು ದಿನಗಳ ಹಿಂದೆ ತೆಹ್ರಾನ್​ನಲ್ಲಿ ಲ್ಯಾಂಡ್​ ಆದ ಬಳಿಕ, ಓರ್ವ ಪಾಕಿಸ್ತಾನಿ ಏಜೆಂಟ್​ ಬಂದು ಅವರಿಬ್ಬರನ್ನು ಹೋಟೆಲ್​ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ಮೊತ್ತದ ಹಣ
ಪಾಕಿಸ್ತಾನಿ ಏಜೆಂಟ್ ಮತ್ತು ಅವನ ಸಹಚರರು ಪಂಕಜ್ ಪಟೇಲ್ ಅವರನ್ನು ಥಳಿಸಿದ್ದಾರೆ ಮತ್ತು ಅವರ ಸಂಬಂಧಿಕರಿಗೆ ವೀಡಿಯೊವನ್ನು ಕಳುಹಿಸಿದ್ದಾರೆ. ದಂಪತಿಯನ್ನು ಬಿಡುಗಡೆ ಮಾಡಲು ಅವರು ದೊಡ್ಡ ಮೊತ್ತದ ಹಣವನ್ನೇ ಕೇಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸದ್ಯ ಈ ಘಟನೆ ದೇಶದಿಂದ ಹೊರಗಡೆ ನಡೆದಿರುವುದರಿಂದ ಅಪರಾಧ ವಿಭಾಗ ಇರಾನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪೂಣ ಮಾಹಿತಿಯೊಂದಿಗೆ ಸಂಪರ್ಕಿಸಲಿದೆ. ಆದಷ್ಟು ಬೇಗ ದಂಪತಿಯ ಬಿಡುಗಡೆಗೆ ಪ್ರಯತ್ನಿಸುತ್ತೇವೆ ಎಂದು ಚೈತನ್ಯ ಮಂಡಲಿಕ್​ ಹೇಳಿದರು.

 

ಇದನ್ನು ಓದಿ: Sreeleela: ಪ್ಯಾಂಟ್ ಹಾಕದೆ, ಕಾಲ ಸಂದಿನಲ್ಲಿ ಕ್ಯಾಮೆರಾ ಹಿಡಿದು ಪೋಟೋ ಕ್ಲಿಕ್ಕಿಸಿದ ಕಿಸ್ ಬೆಡಗಿ !?

Leave A Reply

Your email address will not be published.