R Ashok-karataka congress: ಬಸ್​​ಗಳಲ್ಲಿ ನೂಕುನುಗ್ಗಲಾಗಿ ಕೊಂಚ ಹೆಚ್ಚು ಕಮ್ಮಿ ಆದ್ರೂ ಆರ್​.ಅಶೋಕ್ ಕಾರಣ! ಬಿಜೆಪಿ ನಾಯಕನ ವ್ಯಂಗ್ಯಕ್ಕೆ ಕಾಂಗ್ರೆಸ್ ಕೊಡ್ತು ಕೌಂಟ್ರು!!

R Ashok-karataka congress R Ashok will be held responsible if any mishap occurs due to stampede in the buses

R Ashok-karataka congress: ಬಸ್​​ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತ ಸಂಭವಿಸಿದರೆ ಅದಕ್ಕೆ ಬಿಜೆಪಿ ನಾಯಕ, ಮಾಜಿ ಸಚಿವ ಆರ್​.ಅಶೋಕ್(R Ashok) ಅವರೇ ನೇರ ಹೊಣೆ. ಇಂತಹ ಘಟನೆಗಳೇನಾದರೂ ಸಂಭವಿಸಿದರೆ ಅದಕ್ಕೆ ಅವರೇ ಕಾರಣ ಎಂದು ಅಶೋಕ್ ಹೇಳಿಕೆಗೆ ಕಾಂಗ್ರೆಸ್(R Ashok-karataka congress) ತಿರುಗೇಟು ನೀಡಿದೆ.

 

ಹೌದು, ಕಾಂಗ್ರೆಸ್ ಸರ್ಕಾರದ(Congress Government) ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಶಕ್ತಿ ಮೀರಿ ಬಳಸಿಕೊಳ್ಳುತ್ತಿದ್ದು, ಈಗಾಗಲೇ ಕೆಲವೆಡೆ ಅವಾಂತರಗಳು ಆಗಿಹೋಗಿವೆ. ಅಲ್ಲದೆ ದಿನದಿಂದ ದಿನಕ್ಕೆ ಇದರಿಂದ ಸರ್ಕಾರಕ್ಕೆ ಕೋಟಿ, ಕೋಟಿ ಹೊರೆ ಬೀಳುತ್ತಿದೆ. ಇವೆಲ್ಲದರ ನಡುವೆಯೇ ನಿನ್ನೆ ‘ಉಚಿತ ಪ್ರಯಾಣ(Free travel) ಅವಕಾಶ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಟೂರ್(Toor) ಹೋಗಬೇಕೋ ಬೇಗ ಹೋಗಿ ಬನ್ನಿ’ ಎಂದು ಬಿಜೆಪಿ ನಾಯಕ ಆರ್ ಅಶೋಕ್ ಹೇಳಿಕೆಯೊಂದನ್ನು ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಕಾಂಗ್ರೆಸ್ ಇದ್ದಕ್ಕೆ ಸರಿಯಾಗಿ ಕೌಂಟ್ರು ಕೊಟ್ಟಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಶಕ್ತಿ ಯೋಜನೆ(Shakti yojane) ಹೆಚ್ಚು ದಿನ ಇರುವುದಿಲ್ಲ, ಈಗಲೇ ಎಲ್ಲಾ ಕಡೆಯೂ ತಿರುಗಾಡಿ’ ಎಂದು ಕರೆ ಕೊಟ್ಟಿರುವ ಆರ್​​.ಅಶೋಕ್ ಸಮಾಜಘಾತುಕ ಕೆಲಸ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ‘ಬಸ್​ಗಳಲ್ಲಿ ನೂಕುನುಗ್ಗಲಾಗಿ ಅನಾಹುತ ಸಂಭವಿಸಿದರೆ ಅಶೋಕ್ ಅವರೇ ಹೊಣೆಯಾಗುತ್ತಾರೆ’ ಎಂದು ತಿಳಿಸಿದೆ.

ಅಲ್ಲದೆ ಶಕ್ತಿ ಯೋಜನೆ ಹೆಚ್ಚು ದಿನ ಇರುವುದಿಲ್ಲ, ಈಗಲೇ ಎಲ್ಲಾ ಕಡೆಯೂ ತಿರುಗಾಡಿ’ ಎಂಬಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ಜನತೆ ಗಂಭೀರವಾಗಿ ಪರಿಗಣಿಸಬಾರದು. ಇದು ಕಾಂಗ್ರೆಸ್ ಸರ್ಕಾರ ಇರುವವೆಗೂ ಜಾರಿಯಲ್ಲಿರುತ್ತದೆ. ದಯವಿಟ್ಟು ನೂಕುನುಗ್ಗಲಾಗದಂತೆ ಜಾಗರೂಕತೆ ವಹಿಸುತ್ತಾ ಯೋಜನೆಯ ಲಾಭ ಪಡೆಯಬೇಕು ಎಂದು ಕಾಂಗ್ರೆಸ್ ಕರೆಕೊಟ್ಟಿದೆ.

 

 

ಇದನ್ನು ಓದಿ: Shakti Free Bus: ಒಂದು ವಾರದಲ್ಲಿ 3,00,00,000 ಗೂ ಅಧಿಕ ಮಹಿಳೆಯರಿಂದ ಬಸ್ ಯಾತ್ರೆ, ಟಿಕೆಟ್ ವೆಚ್ಚ ಎಷ್ಟಾಗಿರಬಹುದು ? 

 

 

Leave A Reply

Your email address will not be published.