Vegetable price hike: ಗ್ರಾಹಕರ ಕೈ ಸುಡುತ್ತಿರುವ ತರಕಾರಿ ಬೆಲೆ! ಕಂಗಾಲಾದ ಜನ
Latest Karnataka news vegetable price hike in Karnataka
Vegetable Price Hike: ಸದ್ಯ ಚಂಡಮಾರುತ ಹಾಗೂ ಮುಂಗಾರು ಮಳೆಯ ಹಿನ್ನೆಲೆ ಹಣ್ಣು ತರಕಾರಿಗಳ ಬೆಲೆಯಲ್ಲಿ ದಿಢೀರ್ ಏರಿಕೆ (Vegetable price hike) ಕಂಡುಬಂದಿದ್ದು, ಗ್ರಾಹಕರು ತಲೆಬಿಸಿ ಮಾಡಿಕೊಳ್ಳುವಂತೆ ಆಗಿದೆ.
ಹೌದು, ಕೇವಲ ಒಂದು ವಾರದ ಅವಧಿಯಲ್ಲಿ ಕೆಲ ತರಕಾರಿಗಳ ಬೆಲೆ 10 ರೂಪಾಯಿಗಳಿಂದ 50 ರೂಪಾಯಿಗಳವರೆಗೆ ಏರಿಕೆಯಾಗುತ್ತಿದೆ, ತರಕಾರಿ ಖರೀದಿಗೆ ಮಾರುಕಟ್ಟೆಗೆ ಹೋಗುವ ಗ್ರಾಹಕರು ನಾನಾ ಬಗೆಯ ತರಕಾರಿ ಕೊದುಕೊಳ್ಳಬೇಕೆಂಬ ಆಸೆಯಿಂದ ಹೋದವರಿಗೆ ತರಕಾರಿ ಬೆಲೆ ದುಬಾರಿ ಆಗಿದ್ದು, ಕೊಂಡುಕೊಳ್ಳಲು ಹಿಂದೆ ಮುಂದೆ ಯೋಚಿಸಬೇಕಾಗಿದೆ.
ಈಗಾಗಲೇ ಕೆಜಿಗೆ 80 ರೂಪಾಯಿಗಳಿದ್ದ ಬೀನ್ಸ್ ದರ ಈಗ 120 ರೂಪಾಯಿ ಗೆ ಬಂದು ನಿಂತಿದೆ, ಇನ್ನು 40 ರೂಪಾಯಿಗಳಿದ್ದ ಕ್ಯಾರೆಟ್ ಈಗ 80 ರೂ. ತಲುಪಿದೆ. ಇನ್ನು 30 ರೂಪಾಯಿ ಇದ್ದ ಟೊಮೊಟೊ 60 ರೂಪಾಯಿ ತಲುಪಿದ್ದು, 50 ರೂಪಾಯಿ ಇದ್ದ ಮೆಣಸಿನ ಕಾಯಿ 80 ರೂಪಾಯಿ ಮುಟ್ಟಿದೆ.
ಅದಲ್ಲದೆ ಹಣ್ಣಿನ ಬೆಲೆಯಲ್ಲೂ ಏರಿಕೆ ಆಗಿದ್ದು, ಕೆಜಿಗೆ 180 ರೂ. ಇದ್ದ ಸೇಬಿನ ದರ ಈಗ 220 ರಿಂದ 260 ರೂ. ತಲುಪಿದೆ. ಒಟ್ಟಿನಲ್ಲಿ ವ್ಯಾಪಾರಿಗಳು ಹೇಳಿದ ಬೆಲೆಯನ್ನು ಕೊಟ್ಟು ಹಣ್ಣು ತರಕಾರಿ ಕೊಂಡು ಕೊಳ್ಳಬೇಕಾಗಿದೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಬಗ್ಗೆ ಬೇಸರದ ಮಾತುಗಳನ್ನಾಡಿದ ಕೆ.ಎನ್.ರಾಜಣ್ಣ! ಕಾರಣವೇನು?