7th Pay Commission: ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳ, ವೇತನದಲ್ಲೂ ಭಾರೀ ಏರಿಕೆ ಮಾಡಿದ ಇಲ್ಲಿನ ಸರಕಾರ! ಸರಕಾರಿ ನೌಕರರಿಗೆ ಖುಷಿಯೋ ಖುಷಿ
Latest national news 7th pay commission good news for Government employees 4 percent da hike
7th Pay Commission: ಸರ್ಕಾರಿ ನೌಕರರು ತುಟ್ಟಿಭತ್ಯೆಯ ಹೆಚ್ಚಳಕ್ಕಾಗಿ ಈಗಾಗಲೇ ಹಾತೋರೆಯುತ್ತಿದ್ದು, ಈಗಾಗಲೇ ವರ್ಷದ ಮೊದಲಾರ್ಧದಲ್ಲಿ ಡಿಎ ಮತ್ತು ಡಿಆರ್ ಹೆಚ್ಚಿಸುವ ಪ್ರಕ್ರಿಯೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಮುಂದುವರಿದಿದೆ. ಅಂತೆಯೇ ಇದೀಗ ಒಡಿಶಾ ಸರ್ಕಾರವು ತನ್ನ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ.
ಹೌದು, ಒಡಿಶಾ ರಾಜ್ಯದ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ (7th Pay Commission) ಈ ಹಿಂದೆ ಶೇ.39ರಷ್ಟಿದ್ದ ಭತ್ಯೆ ಶೇ.42ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದ ನಂತರ ರಾಜ್ಯದ ಸುಮಾರು 7.5 ಲಕ್ಷ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಇದೀಗ ಹರಿಯಾಣ ಸರ್ಕಾರ ಮತ್ತು ತಮಿಳುನಾಡು ಸರ್ಕಾರವೂ ಘೋಷಿಸಿವೆ. ಈ ರಾಜ್ಯ ಸರ್ಕಾರಗಳ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಿಸಲಾಗಿದೆ. ಹರಿಯಾಣ ಮತ್ತು ತಮಿಳುನಾಡು ಸರ್ಕಾರಗಳು ಜನವರಿ 1, 2023 ರಿಂದ ಅನ್ವಯವಾಗುವಂತೆ ಮೂಲ ವೇತನದ 38 ಪ್ರತಿಶತದಿಂದ 42 ಪ್ರತಿಶತಕ್ಕೆ ಡಿಎಯಲ್ಲಿ 4 ಪ್ರತಿಶತ ಹೆಚ್ಚಳವನ್ನು ಘೋಷಿಸಿವೆ.
ಇನ್ನು ಕೇಂದ್ರ ನೌಕರರು ಜುಲೈ ಅರ್ಧ ವರ್ಷದ ತುಟ್ಟಿಭತ್ಯೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. 3ರಿಂದ 4ರಷ್ಟು ಡಿಎ ಹೆಚ್ಚಳ ಆಗಬಹುದು ಎಂದು ಊಹಿಸಲಾಗುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.42ರಷ್ಟಿದೆ. ಒಟ್ಟಿನಲ್ಲಿ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಡಿಎ ಮತ್ತು ಡಿಆರ್ ನಿಂದ ಪ್ರಯೋಜನ ಪಡೆಯಲಿದ್ದಾರೆ.
ಇದನ್ನೂ ಓದಿ: 1 ರೂ. ಬಿರಿಯಾನಿಗೆ ಮುಗಿಬಿದ್ದ ಜನ, ಬಿರಿಯಾನಿ ಹೊಡೆದು ವಾಪಸ್ಸಾಗುವಾಗ ಸರ್ಕಾರಕ್ಕೆ ಕಕ್ಕಿದ್ರು 250 ರೂ.