Uttar Pradesh: ಮಗು ಅಳುತ್ತಿದೆ ಎಂದು ನೆಲಕ್ಕೆ ಎಸೆದು ಕೊಂದೇ ಬಿಟ್ಟ ಕುಡುಕ ತಂದೆ!

Latest national crime news Uttar Pradesh Infant Dies After Drunk Father Throws Him On Ground To Stop His Crying

Share the Article

Uttar Pradesh: ಅದು ಇನ್ನೂ ಜಗತ್ತನ್ನೇ ಕಾಣದ ಕೂಸು. ಅದಕ್ಕಿನ್ನೂ ಏನೂ ತಿಳಿದಿಲ್ಲ. ಅಂತಹ ಒಂದು ಪುಟ್ಟ ಕಂದನನ್ನು ಕುಡುಕ ತಂದೆಯೋರ್ವ ನೆಲಕ್ಕೆ ಜೋರಾಗಿ ಬಡಿದು ಸಾಯಿಸಿದ್ದಾನೆ. ಈ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ.

ರವಿ ಮೌರ್ಯ (25) ಎಂಬ ಕಟುಕನು ಕುಡಿದ ಮತ್ತಿನಲ್ಲಿ ತನ್ನ ಒಂದೂವರೆ ತಿಂಗಳ ಮಗುವನ್ನೇ ಸಾಯಿಸಿದ್ದಾನೆ.

ಜೂನ್‌ 15ರಂದು ಈ ಘಟನೆ ನಡೆದಿದ್ದು, ರಾತ್ರಿ ಕಂಠಮಟ್ಟ ಕುಡಿದು ಬಂದ ರವಿ ಮೌರ್ಯನಿಗೆ ತನ್ನ ಮಗು ಅಳುತ್ತಿರುವುದನ್ನು ಕಂಡು ಗದರಿದ್ದಾನೆ. ಇತ್ತ ಕಡೆ ಅಮ್ಮನೂ ಇಲ್ಲದ ಮಗು ಅಪ್ಪನ ಗದರುವಿಕೆಗೆ ಹೆದರಿ ಮತ್ತಷ್ಟು ಜೋರಾಗಿ ಅಳಲಾರಂಭಿಸಿದೆ. ಇದರಿಂದ ಕಿರಿಕಿರಿಗೊಳಗಾದ ಆತ‌ ಮಗುವನ್ನು ನೆಲಕ್ಕೆ‌ ಎಸೆದು ಸಾಯಿಸಿದ್ದಾನೆ ಎಂದು ಪೊಲೀಸ್ ವರದಿ ಹೇಳಿದೆ.

ಒಂದು ವರ್ಷದ ಹಿಂದಷ್ಟೇ ರವಿ ಮೌರ್ಯ ಮದುವೆಯಾಗಿದ್ದು, ಹೆಂಡತಿ ಜತೆ ಜಗಳವಾಡಿದ್ದು, ಈತನ ಕುಡಿತದ ಚಟದಿಂದ ಬೇಸತ್ತ ಹೆಂಡತಿ ಹಸುಗೂಸನ್ನು ಕರೆದುಕೊಂಡು ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಇಷ್ಟಾದರೂ ಸುಮ್ಮನಿರದ ರವಿ ಮೌರ್ಯ, ಹೆಂಡತಿ ಬಳಿ ಹೋಗಿ, ಬಲವಂತವಾಗಿ ಮಗನನ್ನು ಕರೆದುಕೊಂಡು ಬಂದಿದ್ದಾನೆ.

ಆದರೆ ಮಗುವನ್ನು ಸರಿಯಾಗಿ ನೋಡಿಕೊಳ್ಳದ ರವಿ ವರ್ಮಾ ಹೆಂಡತಿ ಮುನಿಸಿಕೊಂಡಳು ಎಂಬ ಸಿಟ್ಟಿನಿಂದ ಮತ್ತಷ್ಟು ಕುಡಿತದ ದಾಸಕ್ಕೊಳಗಾಗಿ, ಮಗುವನ್ನು ಎಸೆದು ಕೊಂದೇ ಬಿಟ್ಟಿದ್ದಾನೆ. ಮಗು ಸತ್ತಿದೆ ಎಂದು ದೃಢಪಟ್ಟ ನಂತರ ಈ ಪಾಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Japan: ಲೈಂಗಿಕ ಸಮ್ಮತಿಯ ವಯಸ್ಸನ್ನು 13 ರಿಂದ 16 ಕ್ಕೆ ಏರಿಸಿತು ಈ ದೇಶ! ಎಲ್ಲಾ ಕಡೆಯಿಂದ ಮೆಚ್ಚುಗೆ!

Leave A Reply