Prathap simha- bommai: ಯಡಿಯೂರಪ್ಪರ ನಂತ್ರ ಅಧಿಕಾರಕ್ಕೆ ಬಂದ ಮಹಾನುಭಾವರು ಮಾಡಿದ್ದೇನು? ಬೊಮ್ಮಾಯಿ ವಿರುದ್ಧ ಮತ್ತೆ ಪ್ರತಾಪ್ ಸಿಂಹ ವಾಗ್ದಾಳಿ!!
Karnataka political news Mysore BJP MP Pratap Simha against farmer CM Basavaraj bommai
Pratap Simha against Bommai : ವಿಧಾನಸಭಾ ಚುನಾವಣೆಯಲ್ಲಿ(Assembly election) ಹೀನಾಯವಾಗಿ ಸೋತಿರೋ ಬಿಜೆಪಿ(BJP)ಯೊಳಗೆಯೇ ಕಿತ್ತಾಟಗಳು, ಆರೋಪಗಳು ಜೋರಾಗಿವೆ. ಕೆಲದಿನಗಳಿಂದ ಹೊಂದಾಣಿಕೆ ರಾಜಕೀಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿರೋ ಸಂಸದ ಪ್ರತಾಪ್ ಸಿಂಹ(Pratap simha) ಮತ್ತೆ ಮಾಜಿ ಸಿ ಎಂ ಬಸವರಾಜ ಬೊಮ್ಮಾಯಿ ವಿರುದ್ಧ (Pratap Simha against Bommai) ಹರಿಹಾಯ್ದಿದ್ದಾರೆ.
ಹೌದು, ಕೆಲವು ದಿನಗಳ ಹಿಂದೆ ಹೊಂದಾಣಿಕೆ ರಾಜಕೀಯದಿಂದ (Adjustment Politics) ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು (BJP Politics) ಎಂದು ನೇರ ಆರೋಪ ಮಾಡಿದ್ದ ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಇದೀಗ ಮತ್ತೊಮ್ಮೆ ತಮ್ಮ ಪ್ರತಾಪ ತೋರಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿ.ಎಸ್.ಯಡಿಯೂರಪ್ಪ ತುಂಬಾ ಪ್ರಯತ್ನ ಮಾಡಿ ಸರ್ಕಾರ ತಂದರು. ಬಿ.ಎಸ್.ಯಡಿಯೂರಪ್ಪ (B S Yadiyurappa) ಸಿಎಂ ಆದ ಕೂಡಲೇ ಪ್ರವಾಹ ಬಂದಿತ್ತು. ಬಿ.ಎಸ್.ಯಡಿಯೂರಪ್ಪ ಒಬ್ಬರೇ ಪ್ರವಾಹ ಪರಿಸ್ಥಿತಿ ನಿಭಾಯಿಸಿದರು. ಕೊವಿಡ್ ವೇಳೆ ಜನರ ಪ್ರಾಣ ಉಳಿಸಲು ಯಡಿಯೂರಪ್ಪ ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯವನ್ನು ಕಾಪಾಡಿದರು. ಆದರೆ ನಂತರ ಬಂದವರು ಏನು ಮಾಡಿದರು? ಹೊಂದಾಣಿಕೆ ರಾಜಕಾರಣ ಮಾಡಿ ಎಲ್ಲವೂ ಹೋಗುವಂತೆ ಮಾಡಿದರು. ಇದು ಅವಶ್ಯಕತೆ ಇರಲಿಲ್ಲ ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಅಂದಹಾಗೆ ಇತ್ತೀಚೆಗೆ ಈ ಅಡ್ಜಸ್ಟ್ ಮೆಂಟ್ ಬಗ್ಗೆ ಪ್ರತಾಪ್ ಸಿಂಹ ಅವರು ಬಿ.ಎಸ್. ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದು ಕೊಂಡರಾ? ಪ್ರವೀಣ್ ನೆಟ್ಟಾರು(Praveen nettaru) ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉತ್ಸಾಹ ಅವರಲ್ಲಿ ಯಾಕೆ ಕಾಣಲಿಲ್ಲ? ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ನಾನು ಧ್ವನಿಯಾಗಿದ್ದೇನೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದರು.
ಅಲ್ಲದೆ ಈ ರೀತಿಯಾಗಿ ಪ್ರತಾಪಸಿಂಹ ನೀಡಿದ್ದ ಹೊಂದಾಣಿಕೆ ರಾಜಕೀಯದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ( C T Ravi) ಅವರು ಕೂಡಾ ಧ್ವನಿಗೂಡಿಸಿದ್ದರು. ಇದಕ್ಕೆ ಕಾಂಗ್ರೆಸ್(Congress) ನಾಯಕರೂ ಪ್ರತಿಕ್ರಿಯೆ ನೀಡಿ, ಇಂಥ ಬೀಸು ಹೇಳಿಕೆಯ ಬದಲು ಧಮ್ಮಿದ್ರೆ ಹೊಂದಾಣಿಕೆ ಮಾಡಿಕೊಂಡವರು ಯಾರು ಎನ್ನುವುದನ್ನು ನೇರವಾಗಿ ಹೇಳಿ, ಹೆಸರು ಹೇಳಿ ಎಂದು ಸವಾಲು ಹಾಕಿದ್ದರು.
ಇತ್ತ ಬಿಜೆಪಿಯಲ್ಲಿನ ಒಳಜಗಳಗಳನ್ನು ಕೂಲಂಕುಷವಾಗಿ ಗಮನಿಸುತ್ತಿರೋ ಕಾಂಗ್ರೆಸ್ ಅವರ ಎಲ್ಲಾ ಬೆಳವಣಿಗೆಗಳನ್ನು ತನಗೆ ಬೇಕಾದಂತೆ ಬಳಸಿಕೊಂಡು ಬಿಜೆಪಿ ಕುರಿತು ವ್ಯಂಗ್ಯವಾಡಿದೆ. ಇದೀಗ ಪ್ರತಾಪ್ ಸಿಂಹರ ಹೇಳಿಕೆಯನ್ನು ಚೆನ್ನಾಗಿಯೇ ಗ್ರಹಿಸಿದ ಕಾಂಗ್ರೆಸ್ ಕೂಡಾ ʻʻಜೋಶಿ, ಸಂತೋಷ್ ಅವರು ಪ್ರತಾಪ್ ಸಿಂಹ ಹೆಗಲ ಮೇಲೆ ಗನ್ನಿಟ್ಟು ಬೊಮ್ಮಾಯಿ ಎದೆಗೇ ಗುಂಡಿಟ್ಟಿದ್ದಾರೆʼʼ ಎಂದು ವ್ಯಾಖ್ಯಾನಿಸಿದೆ.