Bangalore: ಸಚಿವ ಸಂಪುಟ ಸಭೆ ತೀರ್ಮಾನಗಳ ವಿರುದ್ಧ ಕಿಚ್ಚು : ಬೆಂಗಳೂರಲ್ಲಿ ಹಿಂದೂ ಪರ ಸಂಘಟನೆಗಳಳಿಂದ ಪ್ರತಿಭಟನೆ

Protest by pro-Hindu organizations in Bangalore

Bangalore: ಸಚಿವ ಸಂಪುಟ ಸಭೆ ತೀರ್ಮಾನಗಳ ವಿರುದ್ಧ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ

 

ಬೆಂಗಳೂರು : (Bangalore) ಜೂ.15 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಕಾಂಗ್ರೆಸ್‌ ಸರ್ಕಾರ ಕರ್ನಾಟಕ ವಿಧಾನ ಚುನಾವಣಾ ಪ್ರಚಾರದ ವೇಳೆ ಐದು ಗ್ಯಾರಂಟಿ ಘೋಷಣಿಗಳನ್ನು ಜಾರಿಗೆ ಮಾಡುವ ಭರದಲ್ಲಿ ಬಿಜೆಪಿ ಜಾರಿಗೆ ತಂದ ಅನೇಕ ಯೋಜನೆಗಳಿಗೆ ಬ್ರೇಕ್‌ ಹಾಕೋದಕ್ಕೆ ಮುಂದಾಗಿದೆ. ಅಲ್ಲದೇ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಹೊಸ ನಿರ್ಧಾರಗಳನ್ನುಕೈಗೊಂಡಿದ್ದಾರೆ.

ಈ ವಿಚಾರದ ವಿರುದ್ಧಇಂದು ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್‌ ವಿರುದ್ಧ‘ಸಿದ್ದರಾಮಯ್ಯ ಸಿದ್ರಾಮುಲ್ಲಾ ಖಾನ್, ಡಿ.ಕೆ.ಶಿವಕುಮಾರ್ ಏಸು ಕುಮಾರ್​’ ಡಿಸಿಎಂ ಡಿ.ಕೆ.ಶಿವಕುಮಾರ್​ ಸೋನಿಯಾ ಗಾಂಧಿ ಮಾನಸ ಪುತ್ರನಿದ್ದಂತೆ ಟೀಕಿಸಿದ್ದಾರೆ. ಅಲ್ಲದೇ ಇವೆಲ್ಲರೂ ಸೇರಿ ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್​ಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ದೇಶವನ್ನು ಸರ್ವ ನಾಶ ಮಾಡೋದಕ್ಕೆ ಹೊರಟಿದ್ದಾರೆ. ಈ ಯೋಚನೆಗಳನ್ನು ಹಿಂದಕ್ಕೆ ಪಡೆಯಲಿ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಇದನ್ನು ಓದಿ:  News of death: ಆಂಧ್ರದಲ್ಲಿ ಘನ ಘೋರ ಕೃತ್ಯ..! ಪೆಟ್ರೋಲ್ ಸುರಿದು ವಿದ್ಯಾರ್ಥಿ ಸಜೀವ ದಹನ..!

Leave A Reply

Your email address will not be published.