Home Karnataka State Politics Updates Anti-Conversion Law: ಇನ್ಮುಂದೆ ಮಹದೇವಪ್ಪನೂ “CONVERT”, ಕಾಕಪಾಟಿಲನೂ “CONVERT” ; ಮತಾಂತರ ನಿಷೇಧ ಕಾಯ್ದೆ ರದ್ದು...

Anti-Conversion Law: ಇನ್ಮುಂದೆ ಮಹದೇವಪ್ಪನೂ “CONVERT”, ಕಾಕಪಾಟಿಲನೂ “CONVERT” ; ಮತಾಂತರ ನಿಷೇಧ ಕಾಯ್ದೆ ರದ್ದು ಹಿನ್ನೆಲೆ ಸಿದ್ದು ವಿರುದ್ಧ ಕಿಡಿಕಾರಿದ ಯತ್ನಾಳ್ !

Anti-Conversion Law
Image source: Deccan herald

Hindu neighbor gifts plot of land

Hindu neighbour gifts land to Muslim journalist

Anti-conversion Law: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Congress Government) ಈ ಹಿಂದೆ ಬಿಜೆಪಿ ಸರ್ಕಾರದ (BJP Government) ಅವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ವಿರೋಧಿ ಕಾನೂನನ್ನು (Anti-conversion Law) ರದ್ದುಗೊಳಿಸಲು ನಿರ್ಧರಿಸಿದೆ. ಹೌದು, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ನಾಯಕರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal)​ ಅವರು ಟ್ವೀಟ್ ಮಾಡಿದ್ದು, ಇನ್ಮುಂದೆ ಮಹದೇವಪ್ಪನೂ “CONVERT”, ಕಾಕಪಾಟಿಲನೂ “CONVERT”; ಎಂದು ಸಿದ್ಧರಾಮಯ್ಯ (Siddaramaiah) ಸರ್ಕಾರದ ವಿರುದ್ಧ​​ ಕಿಡಿಕಾರಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಹೊರಟಿದ್ದಾರೆ. ಈ ಮೂಲಕ ಹಿಂದೂ ವಿರೋಧಿಗಳು ಎನ್ನುವುದನ್ನು ಮತ್ತೆ ತೋರ್ಪಡಿಸಿದ್ದಾರೆ. ಈ ಕಾಯ್ದೆಯನ್ನು ಹಿಂಪಡೆಯುವುದು “ಹಿಂದೂ” ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ? ಯಾವ “ಮಾಫಿಯಾ” ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. “Conversion Bhagya” ಆಮಿಷದ ಮತಾಂತರಕ್ಕೆ ಬೆಂಬಲ ನೀಡಲು ಸಿದ್ದರಾಮಯ್ಯನವರು ಸಿದ್ಧರಾಗಿದ್ದಾರೆ ಇನ್ನು ಮುಂದೆ ಮಹದೇವಪ್ಪನೂ “CONVERT” ಕಾಕಪಾಟಿಲನೂ “CONVERT” ಎಂದು ಟ್ವೀಟ್ ಮಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

 

ಮಾಜಿ ಸಚಿವ ಅಶ್ವಥ್ ನಾರಾಯಣ್ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.‌ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಮದ ಏರಿದೆ. ಗಲಭೆ ಸೃಷ್ಟಿಸುವ ಉದ್ದೇಶದಿಂದ ಈ ರೀತಿಯ ನಿರ್ಧಾರ ಕೈಗೊಳ್ಳುತ್ತಿದೆ. ನಾವು ಕಾನೂನು ಪ್ರಕಾರವೇ ಮತಾಂತರ ತಡೆ ಮಸೂದೆ ಜಾರಿ ಮಾಡಿದ್ದೇವು. ಕಾಯ್ದೆಯಲ್ಲಿ ಯಾವುದೇ ಲೋಪ ಇರಲಿಲ್ಲ, ಆದರೂ ಈಗ ಮತಾಂತರ ತಡೆ ಕಾಯ್ದೆ ವಾಪಸ್ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದಾರೆ. ಸಚಿವ ಸಂಪುಟ ಸಭೆಯ ನಿರ್ಧಾರ ವನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಇದಿಷ್ಟೇ ಅಲ್ಲದೆ ಮತಾಂತರಕ್ಕೆ ಬಲಿಯಾದವರಿಗೆ 5 ಲಕ್ಷ ರೂ. ವರೆಗೂ ಪರಿಹಾರ ಮತ್ತು ಇದನ್ನು ಪುನರಾವರ್ತಿಸಿದವರಿಗೆ 5 ವರ್ಷ ಜೈಲು 2 ಲಕ್ಷ ರೂ. ದಂಡ ಹಾಕಲಾಗುತ್ತಿತ್ತು. ಆದರೆ, ಇವುಗಳಲ್ಲಿ ಬದಲಾವಣೆ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು ಮುಂಬರುವ ಅಧಿವೇಶನದಲ್ಲಿ ಜಾರಿಗೆ ತರಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: KSRTC Staff Salary Hike: ಸಾರಿಗೆ ನೌಕರರಿಗೆ ಸಿಹಿಸುದ್ದಿ ; ಶೇ.15 ವೇತನ ಹೆಚ್ಚಳ !