ಜೂನ್ 19ಕ್ಕೆ ಫಾಝೀಲ್, ಮಸೂದ್, ಜಲೀಲ್ ,ದೀಪಕ್ ರಾವ್ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಚೆಕ್ – ಕಾಂಗ್ರೆಸ್ ಸರ್ಕಾರ
ದಕ್ಷಿಣಕನ್ನಡ : ಮಂಗಳೂರಿನಲ್ಲಿ ಸರಣಿ ಅನ್ಯಕೋಮಿನ ಯುವಕರ ಹತ್ಯೆಯಾದ ನಾಲ್ವರ ಕುಟುಂಬಕ್ಕೆ ಕಾಂಗ್ರೆಸ್ ಸರ್ಕಾರ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ ಪರಿಹಾರ ಘೋಷಿಸಿ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ.
ಕರಾವಳಿ ಮಂಗಳೂರಿನಲ್ಲಿ ಕೋಮುವಾದವನ್ನು ಪ್ರಚೋದಿಸುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ.ಜುಲೈ 26ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಇದೇ ಸಂದರ್ಭದಲ್ಲಿ ಸಾಲು ಸಾಲು ಕೊಲೆಗಳು ನಡೆದಿದೆ.
ಅದ್ರಲ್ಲಿ ಮುಖ್ಯವಾಗಿ ಜುಲೈ 19ರಂದು ಬೆಳ್ಳಾರೆಯಲ್ಲಿ ಮಸೂದ್, ಜುಲೈ 28ರಂದು ಮಂಗಳಪೇಟೆಯ ಮಹಮ್ಮದ್ ಫಾಝೀದ್, ಕಳೆದ ತಿಂಗಳು ಡಿಸೆಂಬರ್ 24ರಂದು ಕಾಟಿಪಳ್ಳದ ಅಬ್ದುಲ್ ಜಲೀಲ್ ಮತ್ತು 2018ರ ಜನವರಿ 3ರಂದು ಕಾಟಿಪಳ್ಳದ ದೀಪಕ್ ರಾವ್ ಅವರನ್ನು ಕಿಡಿಗೇಡಿಗಳು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಕೊಲೆಯಾದ ಮತೀಯ ಕುಟುಂಬಸ್ಥರಿಗೆ ಸರ್ಕಾರದ ವತಿಯಿಂದ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಧನಸಹಾಯ ಮಂಜೂರಾತಿಗೆ ಒಳಾಡಳಿತ ಇಲಾಖೆಯ ಕೋರಿಕೆ ಮೇರೆಗೆ ಪರಿಹಾರ ಘೋಷಣೆ ಮಾಡಲಾಗಿ ಆ ನಿಟ್ಟಿನಲ್ಲಿ ಜೂನ್ 19ಕ್ಕೆ ಪರಿಹಾರದ ಧನ ಚೆಕ್ ಪಡೆಯುವಂತೆ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯಹಸ್ತ ನೀಡಿದಕ್ಕೆ ಭಾರೀ ವಿರೋಧವೂ ಕೇಳಿ ಬಂದಿತ್ತು. ಅಲ್ಲದೇ ಹತ್ಯೆಗೊಂಡ ಎಲ್ಲರಿಗೂ ಸರ್ಕಾರ ಸಮಾನವಾಗಿ ಧನ ಸಹಾಯ ನೀಡುವಂತೆ ಒತ್ತಾಯ ಮಾಡಲಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಫಾಝೀಲ್ ಮಸೂದ್ ಜಲೀಲ್ ದೀಪಕ್ ರಾವ್ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ನೀಡಲಾಗಿದೆ ಇದರಿಂದ ಕೊಲೆಯಾಗಿ ತನ್ನ ಮಗನನ್ನುಕಳೆದುಕೊಂಡ ಕುಟುಂಬಸ್ಥರ ಕಣ್ಣೀರು ಒರೆಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮುಂದಾಗಿದಂತಾಗಿದೆ.