Delhi: ಕೋಚಿಂಗ್‌ ಸೆಂಟರ್‌ನಲ್ಲಿ ಹಠಾತ್‌ ಕಾಣಿಸಿಕೊಂಡ ಬೆಂಕಿ, ಜೀವ ಉಳಿಸಿಕೊಳ್ಳಲು ಕಿಟಕಿಯಿಂದ ಹಾರಿದ ವಿದ್ಯಾರ್ಥಿಗಳು!

Latest national news Fire accident in Delhi sudden Fire breaks out at a coaching center in Delhi

Delhi Fire accident : ಕೋಚಿಂಗ್‌ ಸೆಂಟರ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ವಿದ್ಯಾರ್ಥಿಗಳು ದಿಕ್ಕು ತೋಚದೆ ಕಿಟಕಿ ಮೂಲಕ ಹೊರ ಬಂದು ಜೀವ ಉಳಿಸಿಕೊಂಡಿರುವ ಘಟನೆಯೊಂದು ದೆಹಲಿಯಲ್ಲಿ (Delhi Fire accident) ನಡೆದಿದೆ. ದೆಹಲಿಯ ಮುಖರ್ಜಿ ನಗರದಲ್ಲಿ ಈ ಘಟನೆ ಸಂಭವಿಸಿದೆ.

ಕೋಚಿಂಗ್‌ ಸೆಂಟರ್‌ನಲ್ಲಿದ್ದ ವಿದ್ಯಾರ್ಥಿಗಳು ಹಗ್ಗದ ಸಹಾಯದಿಂದ ಕೆಳಗೆ ಇಳಿದಿದ್ದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಘಟನೆಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕೋಚಿಂಗ್‌ ಸೆಂಟರ್‌ನಲ್ಲಿ ಬೆಂಕಿ ಹೊತ್ತಿಕೊಂಡ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು, ಕೂಡಲೇ 11ವಾಹನ ಸ್ಥಳಕ್ಕಾಗಮಿಸಿತ್ತು. ಮೂರನೇ ಮಹಡಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು ವಿದ್ಯಾರ್ಥಿಗಳು ಪಾರಾಗಿದ್ದು, ನಾಲ್ವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Shivamogga: BSY ಪುತ್ರ ಬಿ ವೈ ರಾಘವೇಂದ್ರ ಪೊಲೀಸ್‌ ವಶಕ್ಕೆ!

Leave A Reply

Your email address will not be published.