Conjoined Twins Baby Born: ವೈದ್ಯಲೋಕಕ್ಕೆ ಅಚ್ಚರಿ! 4 ಕೈ, 4 ಕಾಲು, 2 ಹೃದಯ, 1 ತಲೆಯಿರುವ ಮಗು ಜನನ !

Latest National news Medical news Bihar news conjoined twins baby born in Bihar

Conjoined Twins Baby Born: ವೈದ್ಯಲೋಕಕ್ಕೆ ಅಚ್ಚರಿ ತರುವಂತೆ, 4 ಕೈ, 4 ಕಾಲು, 2 ಹೃದಯ, 1 ತಲೆಯಿರುವ ಹೆಣ್ಣು ಮಗುವೊಂದು ಬಿಹಾರದ ಛಾಪ್ರಾದಲ್ಲಿ ಜನನವಾಗಿರುವ (Conjoined Twins Baby Born) ವಿಚಿತ್ರ ಘಟನೆ ಒಂದು ಬೆಳಕಿಗೆ ಬಂದಿದೆ. ಸದ್ಯ ಖಾಸಗಿ ನರ್ಸಿಂಗ್ ಹೋಂನಲ್ಲಿ ಈ ಹೆಣ್ಣು ಮಗು ಸಿಸೇರಿಯನ್ ಮೂಲಕ ಜನಿಸಿದ್ದು, ಮಗು ಸ್ವಲ್ಪ ಸಮಯದವರೆಗೆ ಮಾತ್ರ ಬದುಕಿತ್ತು ಎನ್ನಲಾಗಿದೆ.

ಈ ಕುರಿತು ನರ್ಸಿಂಗ್ ಹೋಂ ನಿರ್ದೇಶಕ ಡಾ.ಅನಿಲ್ ಕುಮಾರ್ ಮಾತನಾಡಿ, ವಿಚಿತ್ರ ಹೆಣ್ಣು ಮಗು ಜನಿಸಿದ್ದು, ಈ ಹುಡುಗಿಗೆ ನಾಲ್ಕು ಕೈಗಳು, ನಾಲ್ಕು ಕಾಲುಗಳು, ಎರಡು ಹೃದಯಗಳು ಇದ್ದವು. ಆದರೆ ತಲೆ ಮಾತ್ರ ಒಂದೇ ಒಂದು ಇತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಇಂತಹ ಮಕ್ಕಳನ್ನು ಸಯಾಮಿ ಅವಳಿಗಳು (Conjoined twins) ಎನ್ನುತ್ತಾರೆ ಎಂದಿದ್ದಾರೆ.

ಮಹಿಳೆಯ ಗರ್ಭಾಶಯದಲ್ಲಿ ಒಂದೇ ಮೊಟ್ಟೆಯಿಂದ ಎರಡು ಮಕ್ಕಳು ರೂಪುಗೊಂಡಾಗ ಅವಳಿ ಮಕ್ಕಳು ಹುಟ್ಟು ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಇದು ಸಂಭವಿಸುತ್ತದೆ. ಹಾಗಿರುವಾಗ ಈ ರೀತಿ ಸಯಾಮಿ ಅವಳಿಗಳು ಜನಿಸುವರು. ಇದರೊಂದಿಗೆ ಇಂತಹ ಮಗುವಿಗೆ ಜನ್ಮ ನೀಡುವಾಗ ಗರ್ಭಿಣಿ ತಾಯಿಯೂ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಸದ್ಯ, ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಗೆ ಇದು ಅವರ ಮೊದಲ ಮಗುವಾಗಿತ್ತು. ಅವರ ಆರೋಗ್ಯದ ಬಗ್ಗೆ ಮಾತನಾಡಿದ ವೈದ್ಯರು, ಅವರ ಸ್ಥಿತಿ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಶೀಘ್ರದಲ್ಲೇ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದರು. ಇನ್ನು ಸಿಸೇರಿಯನ್ ಮೂಲಕ ಮಗು ಜನಿಸಿದ್ದು 20 ನಿಮಿಷ ಮಾತ್ರ ಬದುಕಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಉಚಿತ ಪ್ರಯಾಣದ ಆಸೆಗಾಗಿ ಪಶ್ಚಿಮ ಬಂಗಾಳದ ಮಹಿಳೆಯೋರ್ವಳು ಹೀಗಾ ಮಾಡೋದು?

Leave A Reply

Your email address will not be published.