Karnataka congress: ಕರ್ನಾಟಕ ಸರ್ಕಾರದ ಸಭೆಗಳನ್ನು ನಡೆಸುತ್ತಿರೋ ಸುರ್ಜೇವಾಲ! ಬಿಜೆಪಿ- ಜೆಡಿಎಸ್ ನಿಂದ ಸರ್ಕಾರಕ್ಕೆ ಛೀಮಾರಿ- ಫೋಟೋ ಶೇರ್ ಮಾಡಿದ ಜಮೀರ್ ಗೆ ಹೈಕಮಾಂಡ್ ಕ್ಲಾಸ್!!

Karnataka Politics news Randeep Singh surjewala in BBMP meeting bjp and JDS HD KUMARASWAMY lashesh out at Congress

Randeep Surjewala: ಕರ್ನಾಟಕ ಸರ್ಕಾರದ ಸಭೆಗಳನ್ನು ಕಾಂಗ್ರೆಸ್​(Congress) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಅವರು ನಡೆಸಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಈ ವಿಚಾರವಾಗಿ ವಿರೋಧ ಪಕ್ಷಗಳಾದ ಬಿಜೆಪಿ(BJP) ಹಾಗೂ ಜೆಡಿಎಸ್(JDS) ಕಾಂಗ್ರೆಸ್ ಸರ್ಕಾರದ ವಿರುದ್ಧತೀವ್ರ ವಾಗ್ದಾಳಿ ನಡೆಸಿವೆ.

ಹೌದು, ನಗರದ ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವರಾದ ಕೆಜೆ ಜಾರ್ಜ್ (K J George), ಜಮೀರ್ ಅಹ್ಮದ್ ಖಾನ್ (Zameer Ahmed Khan) ಸಭೆ ನಡೆಸಿದ್ರು. ಆದರೆ ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಂಡಿರೋದು ನಾನಾ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯಂತೂ ಈ ಸಭೆಯ ಫೋಟೋ ಮುಂದಿಟ್ಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಎಟಿಎಂ ಸರ್ಕಾರದ ನಡೆಸಿರುವ ಈ ಸಭೆಯ ರಹಸ್ಯವೇನು? ರಾಜ್ಯ ಸರ್ಕಾರದೊಟ್ಟಿಗಿರಲಿ. ಬಿಬಿಎಂಪಿ(BBMP) ಜೊತೆಯಾಗಲಿ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಸಂಬಂಧ ಹೊಂದಿಲ್ಲದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಈ ಸಭೆಯಲ್ಲಿ ಏನು ಕೆಲಸ..? ಇದು 85 ಪರ್ಸೆಂಟ್ ಡೀಲ್ ಫಿಕ್ಸಿಂಗ್ ಸಭೆಯೇ? ಸಿಎಂ, ಡಿಸಿಎಂ ಉತ್ತರಿಸಬೇಕು ಎಂದು ಬಿಜೆಪಿ ಸವಾಲ್ ಹಾಕಿದೆ

ಬಿಜೆಪಿ ನಂತರ ಇದೀಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಟೀಕಿಸಿದ್ದು, ಕರ್ನಾಟಕ ಸರ್ಕಾರವನ್ನು ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರ ಅಂತಾ ಜರಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಕುಮಾರಸ್ವಾಮಿ, “ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ನೇತೃತ್ವದ ಸರಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ? ಅಥವಾ ಕೈಗೊಂಬೆ ಸರಕಾರಕ್ಕಾ? ಪಾಪ.. ಜನರ ವೋಟು ಹಂಗಿನ ಸರಕಾರದ ಪಾಲಾಗಿದೆ. ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ. ಸರಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು. ಸುರ್ಜೆವಾಲಾ ಅವರಿಗೆ ಸರಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು?” ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್(D K Shivkumar), ನಾನು ಸುರ್ಜೇವಾಲ ಭೇಟಿಗೆ ಹೋಗಿದ್ದೆ. ನನ್ನನ್ನು ಬಿಡಿಎಗೆ ಕರೆದೊಯ್ಯಲು ಅಧಿಕಾರಿಗಳು ಬಂದಿದ್ರು ಅಷ್ಟೇ. ಯಾವ ಸಭೆಯೂ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಇನ್ನು ಸಭೆಯ ಫೋಟೋಗಳು ವೈರಲ್ ಆಗಲು ಕಾಂಗ್ರೆಸ್ ಸರ್ಕಾರದ ಸಚಿವರಾದ ಜಮೀರ್ ಅಹಮದ್(jameer ahamad) ಅವರೇ ಕಾರಣೀಕರ್ತರಾಗಿದ್ದಾರೆ. ಯಾಕೆಂದರೆ ಸಭೆಯ ಫೋಟೋವನ್ನು ಜಮೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ಸಭೆಯಲ್ಲಿ ಸುರ್ಜೇವಾಲ ಇರುವುದನ್ನು ಕೂಡ ಉಲ್ಲೇಖಿಸಿದ್ದರು. ವಿವಾದ ಆಗಬಹುದು ಎಂಬ ಕಾರಣಕ್ಕೆ ಗೌಪ್ಯತೆ ಕಾಪಾಡಿಕೊಂಡಿದ್ದ ಸಭೆಯ ಫೋಟೋ ಲೀಕ್ ಮಾಡಿದ್ದ ಜಮೀರ್ ವಿರುದ್ಧ ಸುರ್ಜೇವಾಲ ಆಕ್ರೋಶ ಹೊರಹಕಿದ್ದಾರೆ ಎನ್ನಲಾಗಿದ್ದು, ಸುರ್ಜೇವಾಲ ಕ್ಲಾಸ್‌ ಬೆನ್ನಲ್ಲೇ ಜಮೀರ್‌ ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ.

 

ಇದನ್ನೂ ಓದಿ: BJP-Congress: ನಮ್ಮನ್ನು ನೋಡಿ ಸದಾ ಉರಿಯೋ ಬಿಜೆಪಿಯ ಉರಿ ಶಮನಕ್ಕೆ “ಬರ್ನಲ್ ಭಾಗ್ಯ” ಕರುಣಿಸುತ್ತೇವೆ- ಕಾಂಗ್ರೆಸ್ ಲೇವಡಿ!!

Leave A Reply

Your email address will not be published.