Minimum balance: ಮಿನಿಮಮ್ ಬ್ಯಾಲೆನ್ಸ್ ಅಂದ್ರೆ ಏನು? ಬ್ಯಾಂಕ್ ಇದನ್ನು ಹೇಗೆ ಲೆಕ್ಕ ಹಾಕುತ್ತದೆ ?
Minimum balance :ಪ್ರತಿಯೊಂದು ಖಾತೆಗೆ ಕನಿಷ್ಠ ಈ ಮೊತ್ತವನ್ನು ಇಟ್ಟುಕೊಳ್ಳುವ ಅವಶ್ಯಕತೆಯನ್ನು ಪ್ರತಿ ಬ್ಯಾಂಕ್ ಹೊಂದಿದೆ. ಅದಕ್ಕಿಂತ ಕಡಿಮೆ ಇದ್ದರೆ, ಆಗ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ (Minimum balance)ಇಡದ ಕಾರಣ ದಂಡವನ್ನು ಹಾಕಲಾಗುತ್ತದೆ. ಅಲ್ಲಿ ಲಭ್ಯವಿರುವ ಹಣದಿಂದ ಬ್ಯಾಂಕ್ ಸ್ವಚಾಲಿತವಾಗಿ ದಂಡವನ್ನು ಕಡಿತಗೊಳಿಸುತ್ತಾರೆ. ಹಾಗಾದರೆ, ಕನಿಷ್ಠ ಸಮತೋಲನ ನಿರ್ವಹಣೆ ಎಂದರೇನು? ಇದನ್ನು ಹೇಗೆ ಲೆಕ್ಕ ಹಾಕುತ್ತಾರೆ? ಅದರ ಬಗ್ಗೆ ಇಲ್ಲಿ ತಿಳಿಯೋಣ.
ಉದಾಹರಣೆಗೆ ನಿಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ 1,000 ರೂಪಾಯಿ ಎಂದು ಹೇಳೋಣ. ಅಂದರೆ ಪ್ರತಿದಿನ, ದಿನದ ಕೊನೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಒಂದು ಸಾವಿರ ರೂಪಾಯಿ ಇರಬೇಕು.
ಈ ರೀತಿಯಾಗಿ, ಇಡೀ ತಿಂಗಳು ನಿಮ್ಮ ಬಳಿ ಪ್ರತಿ ದಿನ ಒಂದು ಸಾವಿರ ರೂಪಾಯಿ ಇರಬೇಕು. ಒಟ್ಟು ಲೆಕ್ಕ ಹಾಕಿದರೆ 30 ದಿನಗಳಲ್ಲಿ ಒಂದು ತಿಂಗಳಿಗೆ ದಿನಕ್ಕೆ ಒಂದು ಸಾವಿರ ರೂಪಾಯಿ ಇದ್ದರೆ, ಆ ತಿಂಗಳಲ್ಲಿ 30 ಸಾವಿರ ರೂಪಾಯಿ ಆಗುತ್ತದೆ. 30,000 / 30 =1,000 ರೂಪಾಯಿ ಆಯಿತು. ಈ ಉದಾಹರಣೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ 1,000 ರೂಪಾಯಿ ಸರಿಯಾಗಿ ನಿರ್ವಹಣೆ ಆಗಿದೆ. ಇಲ್ಲದಿದ್ದರೆ, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ಬ್ಯಾಂಕ್ ನಿಮಗೆ ಶುಲ್ಕ ವಿಧಿಸುತ್ತಾರೆ.
ಉದಾಹರಣೆ 2: ಒಂದು ವೇಳೆ ನಿಮಗೆ 30,000 ರೂಪಾಯಿ ಸಂಬಳ ಬಂದರೆ ಒಂದು ದಿನವೂ ತೆಗೆಯದೆ ಬ್ಯಾಂಕ್ ಖಾತೆಯಲ್ಲೆ ಇದ್ದರೆ, ಆಗ ಮೇಲೆ ಲೆಕ್ಕ ಮಾಡಿದ ರೀತಿಯಲ್ಲಿ 30 ದಿನಕ್ಕೆ 30 ಸಾವಿರ ರೂ. ಕನಿಷ್ಠ ಬ್ಯಾಲೆನ್ಸ್ ಆಗುತ್ತದೆ.
ಉದಾಹರಣೆ 3: ಒಂದು ವೇಳೆ ಮೊದಲನೆಯ ಉದಾಹರಣೆಯ ರೀತಿಯೇ, ಅಕೌಂಟಿನಲ್ಲಿ ದುಡ್ಡೇ ಇಲ್ಲದೆ, ಕೇವಲ ಒಂದು ದಿನ ಪೂರ್ತಿ 30,000 ಇಟ್ಟು ಆ ನಂತರ ಪೂರ್ತಿ ತೆಗೆದರೂ, ಲೆಕ್ಕಾಚಾರದ ಪ್ರಕಾರ ಮಿನಿಮಮ್ ಬ್ಯಾಲೆನ್ಸ್ 30,000 / 30 =1,000 ರೂಪಾಯಿ ಆಗುತ್ತದೆ. ಹಾಗಾಗಿ 1,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಅಕೌಂಟ್ ನಲ್ಲಿ ದಿನವೂ 1,000 ರೂಪಾಯಿ ಕಡ್ಡಾಯವಾಗಿ ಇರಲೇಬೇಕಿಲ್ಲ. ತಿಂಗಳ ಸರಾಸರಿ ಲೆಕ್ಕದ ಪ್ರಕಾರ 1,000 ರೂಪಾಯಿ ಬಂದರೆ ಮುಗಿಯಿತು, ಮಿನಿಮಮ್ ಬ್ಯಾಲೆನ್ಸ್ ಇಟ್ಟ ಹಾಗೆಯೇ.
ಈ ಕನಿಷ್ಟ ಬ್ಯಾಲೆನ್ಸ್ , ಒಂದೊಂದು ಬ್ಯಾಂಕುಗಳು ಒಂದೊಂದು ಖಾತೆಗೆ ನೀಡುವ ಸೌಲಭ್ಯಗಳಾಗಿರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಸ್ಯಾಲರಿ ಅಕೌಂಟ್ ಅಂದರೆ ಸಂಬಳದ ಖಾತೆ ಜೀರೋ ಬ್ಯಾಲೆನ್ಸ್ ಅಕೌಂಟ್ ಆಗಿರುತ್ತದೆ. ಜೀರೋ ಬ್ಯಾಲೆನ್ಸ್ ಅಕೌಂಟ್ ಇದ್ದಲ್ಲಿ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಕಾಪಿಡುವ ಅಗತ್ಯವಿರುವುದಿಲ್ಲ. ಈ ಸೌಲಭ್ಯವು ವೈಯಕ್ತಿಕ ಖಾತೆಗೆ ಮತ್ತು ಬ್ಯಾಂಕ್ನಿಂದ ಬ್ಯಾಂಕ್ಗೆ ಬದಲಾಗುತ್ತದೆ. ಆದ್ದರಿಂದ ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಖಾತೆಯ ವಿವರಗಳನ್ನು ಸ್ಪಷ್ಟಪಡಿಸಿಕೊಳ್ಳಿ, ಬ್ಯಾಂಕಿನ ಅಕೌಂಟು ಓಪನ್ ಮಾಡುವಾಗ ಮಿನಿಮಮ್ ಜೀರೋ ಬ್ಯಾಲೆನ್ಸ್ ಅಕೌಂಟ್ ಅನ್ನು ಚೌಕಾಸಿ ಮಾಡಿ ಕೇಳಿ ಪಡೆದುಕೊಳ್ಳಿ. ಬ್ಯಾಂಕ್ ಅಕೌಂಟ್ ಜೀರೋ ಬ್ಯಾಲೆನ್ಸ್ ಅಕೌಂಟ್ ಆಗಿರಲಿ, ಆದರೆ ನಿಮ್ಮ ಖಾತೆಗಳಲ್ಲಿ ಸದಾ ಹಣ ಇದ್ದೇ ಇರಲಿ .ಅದು ಯಾವತ್ತಿಗೂ ಕಷ್ಟದ ದಿನಗಳಿಗೆ ನಾವು ಮಾಡುವ ಮುಂಜಾಗ್ರತಾ ಪ್ಲಾನ್ ಆಗಿರುತ್ತದೆ. ಹ್ಯಾಪಿ ಸೇವಿಂಗ್.
ಇದನ್ನೂ ಓದಿ : ಬಿಪಿಎಲ್ ಪಡಿತರ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಶಾಕಿಂಗ್ ನ್ಯೂಸ್ ವಿತ್ ರೂಲ್ಸ್