ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್..! ಬಸ್ಸಿಗಾಗಿ ನೂಕುನುಗ್ಗಲು
Shakti Scheme:ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ʻಶಕ್ತಿ ಯೋಜನೆʼ(Shakti Scheme)ಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಚಾಲನೆಗೊಂಡು ಇಂದಿಗೆ ಮೂರು ದಿನ ಕಳೆದಿದ್ದು, ರಾಜ್ಯಾದ್ಯಂತ ಜನ ಭರ್ಜರಿ ರೆಸ್ಪಾನ್ ನೀಡಿದ್ದಾರೆ.
ಸೋಮವಾರ ಒಂದೇ ದಿನ ರಾಜ್ಯಾದ್ಯಂತ 41 ಲಕ್ಷದ 34 ಸಾವಿರದ 726 ಮಹಿಳೆಯರು ಸಂಚಾರ ಮಾಡಿದ್ದಾರೆ. ಇದರ ಮೌಲ್ಯ ಒಟ್ಟು 8 ಕೋಟಿ 83 ಲಕ್ಷ 53 ಸಾವಿರದ 434 ರೂಪಾಯಿ, ಮೊನ್ನೆ 5 ಲಕ್ಷದ 71 ಸಾವಿರ 23 ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ರು. ಇದರ ಮೌಲ್ಯ 1 ಕೋಟಿ 40 ಲಕ್ಷದ 22 ಸಾವಿರದ 878 ರೂಪಾಯಿ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಕೆಎಸ್‍ಆರ್ ಟಿಸಿ- 11,40,057, ಬಿಎಂಟಿಸಿ- 17,57,887 , ವಾಯುವ್ಯ ಸಾರಿಗೆ- 8,31,840, ಕಲ್ಯಾಣ ಕರ್ನಾಟಕ ಸಾರಿಗೆ-4,04,942, ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ-41,34,726 ಸಂಚಾರ ಮಾಡಿದ್ದಾರೆ ಎಂದು ಸಂಕ್ಷಿಪ್ತವಾಗಿ ಮಾಹಿತಿ ನೀಡಿದ್ದಾರೆ.
ಉಚಿತ ಬಸ್ ಪ್ರಾರಂಭ ಆದಾಗಿನಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಓಡಾಡುವುದಕ್ಕೆ ಮಹಿಳೆಯರು ಮುಂದಾಗಿದ್ದು, ಎಲ್ಲಾ ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾಗಿದಲ್ಲದೇ ಬುಕ್ಕಿಂಗ್ ಸಂಖ್ಯೆಯೂ ಕಡಿಮೆಯಾಗಿದೆ.
ಅಷ್ಟೇ ಅಲ್ಲದೇ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಸೇರಿದಂತೆ ತೆರಳುವವರ ಸಂಖ್ಯೆಯೂ ಬಹುತೇಕ ಹೆಚ್ಚಾಗಿದೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಉಚಿತ ಬಸ್ ಸಂಚಾರದಿಂದ ಓಲಾ, ಉಬರ್, ಆಟೋ ಚಾಲಕರಿಗೆ ಭಾರೀ ಹೊಡೆತ ತಟ್ಟಿದಂತಾಗಿದಂತೂ ನಿಜವಾಗಿದೆ.
ಇದನ್ನೂ ಓದಿ :ಸಿಎಂ ಭೇಟಿ ಬಳಿಕ ಗರಂ ಆಗಿಯೇ ಹೊರನಡೆದ ಶಿವರಾಜ್ ಕುಮಾರ್