VIRAL VIDEO: ನನ್ನ ಪತ್ನಿಯನ್ನು ಅರೆಬೆತ್ತಲೆ ಮಾಡಿ,100 ಕ್ಕೂ ಹೆಚ್ಚು ಮಂದಿ ದಾಳಿ – ಭಾರತೀಯ ಯೋಧನ ಅಳಲು !!

Tamil Nadu news latest national news My wife was stripped half naked in Tamil Nadu said soldier video viral

Soldier viral video: ಕಾಶ್ಮೀರ(Khashmir) ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕನೊಬ್ಬ(Soldier) ತನ್ನ ಹೆಂಡತಿಯ ಮೇಲೆ ತಮಿಳುನಾಡಿನಲ್ಲಿ 100 ಕ್ಕೂ ಹೆಚ್ಚು ಜನರು ಸೇರಿ ಹಲ್ಲೆ ನಡೆಸಿದ್ದಾರೆಂದು ಗಂಭೀರವಾಗಿ ಆರೋಪ ಮಾಡಿ, ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು, ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸೇನೆಯ (Indian Army) ಯೋಧನೊಬ್ಬನ ಆಘಾತಕಾರಿ ವಿಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್(Soldier viral video) ಆಗುತ್ತಿದೆ. ತಮಿಳುನಾಡಿನ(Tamilunadu) ತಿರುವಣ್ಣಾ ಮಲೈನಲ್ಲಿರುವ(Tiruvannamalai) ತನ್ನ ಪತ್ನಿಯ ಮೇಲೆ 100 ಕ್ಕೂ ಹೆಚ್ಚು ಜನರು ಸೇರಿ ಹಲ್ಲೆ ನಡೆಸಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ದಯಮಾಡಿ ಕಾಪಾಡಿ ಎಂದು ಹೇಳಿಕೊಂಡಿದ್ದಾರೆ.
ಯೋಧನ ಕುಟುಂಬವನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಡಿಎಂಕೆ (DMK) ಸರ್ಕಾರವನ್ನು ಬಿಜೆಪಿ ಟಾರ್ಗೆಟ್ ಮಾಡಿದೆ.

ಅಂದಹಾಗೆ ವೈರಲ್ ಆಗುತ್ತಿರುವ ವೀಡಿಯೊದ ದಿನಾಂಕ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಹೀಗಾಗಿ ಅದರ ಸತ್ಯಾಸತ್ಯತೆಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ತನ್ನನ್ನು ತಾನು ಹವಲ್ದಾರ್ ಪ್ರಭಾಕರ್ ಎಂದು ಗುರುತಿಸಸಿಕೊಂಡ ಸೈನಿಕ, ‘ತನ್ನ ಹೆಂಡತಿಯನ್ನು ಅರೆಬೆತ್ತಲೆಗೊಳಿಸಿ ತುಂಬಾ ಕೆಟ್ಟದಾಗಿ ಥಳಿಸಲಾಗಿದೆ’ ಎಂದು ಹೇಳಿಕೊಂಡಿದ್ದಾನೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ತಿರುವಣ್ಣಾಮಲೈನ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕೇಯನ್(Karthikeyan) ಸ್ಪಷ್ಟೀಕರಣ ನೀಡಿದ್ದಾರೆ. ಯೋಧನ ಪತ್ನಿಯ ಮೇಲೆ ಹಲ್ಲೆ ನಡೆದಿರುವುದನ್ನು ನಿರಾಕರಿಸಿದ ಅವರು, ಭೂಮಿಗೆ ಸಂಬಂಧಿಸಿದಂತೆ ವೈಯಕ್ತಿಕ ವಿವಾದವಿದೆ ಎಂದು ಹೇಳಿದರು. ‘ಸೈನಿಕನಿಗೆ ತಪ್ಪಾಗಿ ಮಾಹಿತಿ ನೀಡಲಾಗಿದ್ದು ನಾವು ಮಹಿಳೆಗೆ ರಕ್ಷಣೆ ನೀಡುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು.

ಇನ್ನು ಯೋಧನ ಮನವಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರನ್ನು ಭೇಟಿ ಮಾಡಿ ಅವರ ಪತ್ನಿಗೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ ಅವರು ತಿರುವಣ್ಣಾಮಲೈ ಮೂಲದ ಹವಾಲ್ದಾರ್ ಮತ್ತು ಅವರ ಪತ್ನಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅವರ ಕಥೆಯನ್ನು ಕೇಳಿ ನಿಜವಾಗಿಯೂ ಧೈರ್ಯ ಎನಿಸಿತು ಮತ್ತು ಈ ಘಟನೆ ಸಂಭವಿಸಿರುವುದಕ್ಕೆ ನಾಚಿಕೆ ಪಡುತ್ತೇನೆ. ನಮ್ಮ ತಮಿಳು ನೆಲವೇ!, ನಮ್ಮ ಪಕ್ಷದ ಜನರು ವೆಲ್ಲೂರಿನ ಆಸ್ಪತ್ರೆಗೆ ದಾಖಲಾಗಿರುವ ಆಕೆಯನ್ನು ಭೇಟಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಯೋಧನ ವಿಡಿಯೋ ನೋಡಿ ಹಲವು ಜನ ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎನ್ ತ್ಯಾಗರಾಜನ್ (tyagarajan) ಅವರು, ‘ಇದು ಯಾವ ಜಗತ್ತಿನಲ್ಲಿ ನ್ಯಾಯಯುತವಾಗಿದೆ? ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ಸೇನಾ ಸೈನಿಕನೊಬ್ಬ ತಮಿಳುನಾಡಿನಲ್ಲಿ ತನ್ನ ಹೆಂಡತಿಯನ್ನು ಉಳಿಸಲು ಮಂಡಿಯೂರಿ ನಮಸ್ಕರಿಸುವ ಕರುಣಾಜನಕ ಸ್ಥಿತಿ ಇದು. ಎಂದು ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: Amith sha: ದೇಶದ ಮುಂದಿನ ಪ್ರಧಾನಿಯಾಗಿ ತಮಿಳು ನಾಯಕ ಆಯ್ಕೆ- ಅಚ್ಚರಿ ಹೇಳಿಕೆ ನೀಡಿದ ಅಮಿತ್ ಶಾ

Leave A Reply

Your email address will not be published.