D.K Shivakumar: ಡಿ.ಕೆ ಶಿವಕುಮಾರ್ ಕಿಡ್ನಾಪ್, ಯಾವಾಗ ಯಾಕೆ ?!

Karnataka zee kannada entertainment show Weekend with ramesh season 5 ends karnataka deputy chief minister DK Shivakumar guest

D K Shivakumar: ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ (Weekend with ramesh) ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಯಲ್ಲಿ ರಾಜಕಾರಣಿ, ಕಾಂಗ್ರೆಸ್‌ನ ಪ್ರಭಾವಿ ನಾಯಕ, ಟ್ರಬಲ್‌ ಶೂಟರ್‌, ಕನಕಪುರ ಬಂಡೆ ಎಂದೇ ಕರೆಸಿಕೊಳ್ಳುವ ಡಿ ಕೆ ಶಿವಕುಮಾರ್‌ (D K Shivakumar) ಅವರು ಸಾಧಕರಾಗಿ ಕುರ್ಚಿ ಅಲಂಕರಿಸಿದ್ದಾರೆ. ಸಾಧಕರ ಕುರ್ಚಿಯಲ್ಲಿ ಕುಳಿತು ಬಾಲ್ಯ, ಯೌವನ, ಜೀವನದ ಸಿಹಿ-ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಎಲೆಕ್ಷನ್‌ನಲ್ಲಿ ಗೆದ್ದಾಗ ಡಿಕೆಶಿ ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು ಎಂಬ ವಿಚಾರ ಭಾರೀ ವೈರಲ್ ಆಗಿದೆ. ಹಾಗಿದ್ದಾರೆ ರಾಜ್ಯದ ಉಪಮುಖ್ಯಮಂತ್ರಿಯನ್ನು ಯಾಕೆ ಕಿಡ್ನ್ಯಾಪ್ ಮಾಡಲಾಗಿತ್ತು? ತಿಳಿಯೋಣ.

ಇಂದು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಆಗಿರುವ ಡಿಕೆ ಶಿವಕುಮಾರ್, ದಶಕಗಳ ಹಿಂದೆ ಸ್ಟೂಡೆಂಟ್ ಲೀಡರ್‌ ಆಗಿದ್ದರು. ಡಿಕೆಶಿಯ ಚುನಾವಣೆಯ ಭವಿಷ್ಯ ಬಾಲ್ಯದಲ್ಲೇ ಬರೆದಿತ್ತು. ಚುನಾವಣೆಗೆ ಸ್ಪರ್ಧಿಸಲು ಅಡಿಪಾಯ ಎಂಬಂತೆ ಡಿಕೆಶಿ ಆರನೇ ತರಗತಿಯಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಹಾಗೇ ಕಾಲೇಜ್ ಎಲೆಕ್ಷನ್‌ನಲ್ಲಿ ಗೆದ್ದು ಬೀಗಿದ್ದರು. ಎಲೆಕ್ಷನ್‌ನಲ್ಲಿ ಗೆದ್ಮೇಲೆ ಡಿಕೆ ಶಿವಕುಮಾರ್ ಕಿಡ್ನ್ಯಾಪ್ ಆಗಿದ್ದರಂತೆ. ಈ ಬಗ್ಗೆ ಡಿಕೆಶಿ ಹೇಳಿಕೊಂಡಿದ್ದಾರೆ.

ಕನಕಪುರದಲ್ಲಿ ಜನಿಸಿದ ಡಿಕೆ ಶಿವಕುಮಾರ್‌ ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿದರು. ಆದರೆ ಡಿಕೆಶಿ ಡಿಗ್ರಿ ಕಂಪ್ಲೀಟ್ ಮಾಡಲಿಲ್ಲ. ಫೈನಲ್ ಇಯರ್ ಓದುವಾಗಲೇ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಕ್ಕಿತ್ತು. ನಂತರ ನಗರಾಭಿವೃದ್ಧಿ ಸಚಿವನಾದ ಮೇಲೆ ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದು ಓಪನ್ ಯೂನಿವರ್ಸಿಟಿಯಲ್ಲಿ ಎಕ್ಸಾಂ ಬರೆದು, ಗ್ರ್ಯಾಜುಯೆಟ್ ಆಗಿದ್ದು ಎಂದು ಡಿಕೆಶಿ ಹೇಳಿದರು.

‘’ಆಗಿನ ಕಾಲದಲ್ಲಿ ಮುಖ್ಯಮಂತ್ರಿಗಳು ಕಾಲೇಜು ಎಲೆಕ್ಷನ್‌ಗಳನ್ನು ನಡೆಸುತ್ತಿದ್ದರು. ದೇವರಾಜ ಅರಸು ಹಾಗೂ ಗುಂಡೂರಾವ್ ಎಲೆಕ್ಷನ್‌ಗಳನ್ನು ಮಾನಿಟರ್ ಮಾಡುತ್ತಿದ್ದರು. ನಾನು ಕಾಲೇಜು ದಿನಗಳಲ್ಲಿ ಸ್ಟೂಡೆಂಟ್ ಲೀಡರ್ ಆಗಿದ್ದೆ. ಯೂತ್ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿದ್ದೆ. ಕಾಲೇಜು ದಿನಗಳಲ್ಲಿ ನಾನು ಎಲೆಕ್ಷನ್ ನಲ್ಲಿ ಗೆದ್ದ ಮೇಲೆ ನನ್ನನ್ನು ಕಿಡ್ನ್ಯಾಪ್ ಮಾಡಿದ್ದರು. ನಂತರ ಎಂ ಡಿ ನಟರಾಜ್ ಮನೆಗೆ ಕರೆದುಕೊಂಡು ಹೋದರು. ಲೀಡರ್‌ಶಿಪ್ ಬೆಳೆಯುತ್ತಿದ್ದದ್ದೇ ಕಾಲೇಜು ಎಲೆಕ್ಷನ್‌ಗಳಲ್ಲಿ’’ ಎಂದು ಡಿಕೆ ಶಿವಕುಮಾರ್ ಹೇಳಿದರು. ಅಲ್ಲದೆ, ಡಿಕೆಶಿ ಎಸ್‌ಜೆಆರ್‌ಸಿ ಕಾಲೇಜಿನಲ್ಲಿ ಓದುತ್ತಿದ್ದಾಗ ಚಾಲುಕ್ಯ ಹೋಟೆಲ್‌ನಲ್ಲಿ ಕನ್ಸೆಶನ್ ಇತ್ತು. ಇವರು ಎಲೆಕ್ಷನ್‌ನಲ್ಲಿ ಗೆದ್ದಾಗ ಗಲಾಟೆ ಆದರೆ ಎಂಬ ಕಾರಣದಿಂದ ಇಡೀ ಮೆಜೆಸ್ಟಿಕ್ ಬಂದ್ ಮಾಡಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: Bengaluru: ಮುಸ್ಲಿಂ ಹುಡುಗ ಮತ್ತು ಇಡೀ ತಂಡದಿಂದ ಲವ್ ಜಿಹಾದ್ ಗೆ ಒತ್ತಾಯ ; ಆಕೆ ಕೆಲಸ ಮಾಡುವ ಸಂಸ್ಥೆಯಿಂದಲೇ ಹುನ್ನಾರ!

Leave A Reply

Your email address will not be published.