Bangalore-Mysore Toll: ಜೂನ್ 1ರಿಂದಲೇ ʻಬೆಂ-ಮೈ ದಶಪಥ ರಸ್ತೆʼಯ ಟೋಲ್ ದರ ಏರಿಕೆ..!
karnataka news politics toll rate Bangalore-Mysore road toll rate hike from 1st June
ಹೊಸಗನ್ನಡ : ಜೂನ್ 1ರಿಂದಲೇ ಬೆಂಗಳೂರು-ಮೈಸೂರು ದಶಪಥ ರಸ್ತೆಯ ಟೋಲ್ ದರ ಮತ್ತೆ ಹೆಚ್ಚಳ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಆದೇಶ ನೀಡಲಾಗಿದೆ. ಭಾರತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ವಾಹನ ಸವಾರರು ಫಾಸ್ಟ್ಟ್ಯಾಗ್ ಮೂಲಕ ಟೋಲ್ ಶುಲ್ಕವನ್ನು ಪಾವತಿಸಬಹುದಾಗಿರೋದ್ರಿಂದ ಅದೇಷ್ಟು ವಾಹನ ಸವಾರರ ಗಮನಕ್ಕೆ ತಿಳಿದು ಬಂದಿಲ್ಲ. ಆದ್ರೆ ಜೂನ್ 1ರಿಂದಲೇ ಶೇ.22ರಷ್ಟು ದುಬಾರಿ ಶುಲ್ಕ ಅನ್ವಯವಾಗುತ್ತಿದೆ.
ದುಬಾರಿ ಟೋಲ್ ದರ ಇಲ್ಲಿದೆ ಓದಿ :
ಏಕಮುಖ ಸಂಚಾರವಾಗಿ ಕಾರು, ವ್ಯಾನ್, ಜೀಪ್ ದರ 135-165ಕ್ಕೆ ಏರಿಕೆ ಮಾಡಿದ್ದು 30 ರೂ. ಹೆಚ್ಚಳ
ಲಘು ವಾಹನಗಳು, ಮಿನಿ ಬಸ್ಗಳ ಏಕಮುಖ ಟೋಲ್ ದರ 220-270ಕ್ಕೆ ಏರಿಕೆ (50 ರೂ. ಹೆಚ್ಚಳ)
ಟ್ರಕ್, ಬಸ್, 2 ಆ್ಯಕ್ಸೆಲ್ ವಾಹನ ಏಕಮುಖ ಸಂಚಾರ ಟೋಲ್ ದರ ₹460-565ಕ್ಕೆ ಏರಿಕೆ (105 ಹೆಚ್ಚಳ)
3 ಆ್ಯಕ್ಸೆಲ್ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹500-615ಕ್ಕೆ ಏರಿಕೆ (115 ರೂ. ಹೆಚ್ಚಳ)
ಭಾರಿ ವಾಹನಗಳ ಏಕಮುಖ ಸಂಚಾರ ಟೋಲ್ ದರ ₹720ರಿಂದ ₹885ಕ್ಕೇರಿಕೆ (165 ರೂ.ಗೆ ಹೆಚ್ಚಳ)
7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸೆಲ್ ವಾಹನಗಳ ಟೋಲ್ ₹880-1,080ಕ್ಕೇರಿಕೆ (200 ಹೆಚ್ಚಳ)
ಕಳೆದ ಹಲವು ದಿನಗಳ ಹಿಂದೆ ಟೋಲ್ ದರವನ್ನು ಹೆಚ್ಚಳ ಮಾಡಿದಕ್ಕೆ ರಾಜ್ಯಾದ್ಯಂತ ಆಕ್ರೋಶಗೊಂಡವರಿಗೆ ಮತ್ತೊಮ್ಮೆಟೋಲ್ ದರ ಏರಿಕೆಯ ಬಿಗ್ ಶಾಕಿಂಗ್ ಎದುರಾಗಿದ್ದಂತೂ ನಿಜ.