Home Interesting Hasina Madina mamadaliva: ಡೊಳ್ಳು ಹೊಟ್ಟೆಯ, ಹೊಟ್ಟೆ ಬಾಕನೇ ನನ್ನ ಗಂಡನಾಗಬೇಕೆಂದ ಸುರ ಸುಂದರಾಂಗಿ!! ಯಾಕಂತೆ...

Hasina Madina mamadaliva: ಡೊಳ್ಳು ಹೊಟ್ಟೆಯ, ಹೊಟ್ಟೆ ಬಾಕನೇ ನನ್ನ ಗಂಡನಾಗಬೇಕೆಂದ ಸುರ ಸುಂದರಾಂಗಿ!! ಯಾಕಂತೆ ಗೊತ್ತಾ?

Madina mamadaliva
Image source- Kannada news

Hindu neighbor gifts plot of land

Hindu neighbour gifts land to Muslim journalist

Madina mamadaliva: ಹುಡುಗಿಯರು ತಮ್ಮ ಮದುವೆಯ(Marriage) ಬಗ್ಗೆ ತುಂಬಾ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ತಾನು ಮದುವೆಯಾಗೋ ಹುಡುಗ ಸ್ಮಾರ್ಟ್(Smart) ಆಗಿ, ಫಿಟ್ ಆಗಿ ಇರೋದ್ರೊಂದಿಗೆ ಹೇಗೆಲ್ಲಾ ಇರಬೇಕೆಂದು ಅವರಲ್ಲಿ ಉದ್ದುದ್ದ ಲಿಸ್ಟೇ ಇರುತ್ತದೆ. ಆದ್ರೆ ಇಲ್ಲೊಬ್ಬಾಕೆ ಮಾತ್ರ ನಂಗೆ ಮದುವೆಯಾಗೋಕೆ ಡೊಳ್ಳು ಹೊಟ್ಟೆಯ, ಹೊಟ್ಟೆಬಾಕನೇ ಬೇಕೆಂದು ಹಟ ಹಿಡಿದು ಕುಳಿತಿದ್ದಾಳೆ.

ಹೌದು, ಸಾಮಾನ್ಯವಾಗಿ ಸಿಕ್ಸ್​​ಪ್ಯಾಕ್​​​(Sixpack), ​​ ಫಿಟ್ ಆ್ಯಂಡ್​​​​​​​​​ ಹ್ಯಾಂಡ್​ಸಮ್​​​(Fit and handsome) ಹುಡುಗ ತನ್ನ ಸಂಗಾತಿಯಾಗಬೇಕು ಎಂದು ಸಾಕಷ್ಟು ಹುಡುಗಿಯರ ಕನಸಾಗಿರುತ್ತದೆ. ಆದರೆ ಇಲ್ಲೊಂದೆಡೆ, ತೆಳ್ಳಗೆ, ಬೆಳ್ಳಗೆ ಇರೋ ಸುಂದರ ಯುವತಿಯೊಬ್ಬಳು ನಾನು ಮದುವೆಯಾಗುವುದಾದರೆ ದೊಡ್ಡ ಹೊಟ್ಟೆಯ ಹುಡುಗನನ್ನೇ ಎಂದು ಪಟ್ಟು ಹಿಡಿದು ಕುಳಿತಿದ್ದಾಳೆ.

ಬಳಕುವ ಬಳ್ಳಿಯಂತಿರುವ ಈಕೆಯ ಹೆಸರು ಹಸೀನಾ ಮದೀನಾ ಮಮದಲೀವಾ(Madina mamadaliva). ಕಜಕಿಸ್ತಾನ್‌ ಮೂಲದವಳಾದ ಮದೀನಾ ಸದ್ಯ ಸಂಗಾತಿಯ ಹುಡುಕಾಟದಲ್ಲಿದ್ದಾಳೆ. ಅಂದಹಾಗೆ ಕಜಕಿಸ್ತಾನದ ಈ ಸುಂದರಿಗೆ ಸಾಮಾಜಿಕ ಜಾಲತಾಣದಲ್ಲಿ (Social media) ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆಕೆ ಒಪ್ಪಿದರೆ ಆಕೆಯನ್ನು ಮದುವೆಯಾಗಲು ಜನರು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಈ ಚೆಲುವೆ ನಿಜವಾದ ಪ್ರೇಮ ಸಂಗಾತಿಯನ್ನು ಹುಡುಕುತ್ತಿದ್ದಾಳೆ. ಅದೂ ಕೂಡ ಡೊಳ್ಳು ಹೊಟ್ಟೆಯ ವರ ಎಂಬುದು ವಿಶೇಷ. ಆದರೆ ಯಾಕೆ ಆ ಹುಡುಗನೇ ಬೇಕೆಂದು ಆಕೆ ಹಟ ಹಿಡಿದಿದ್ದಾಳೆ ಎಂದು ನೀವು ತಿಳಿದರೆ ಖಂಡಿತಾ ಶಾಕ್ ಆಗ್ತೀರಾ.

‘ಡೈಲಿ ಸ್ಟಾರ್’ (Daily star)ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಜಕಿಸ್ತಾನ್‌ನ ಮದೀನಾ ಮಮದಲೀವಾ ಸೋಶಿಯಲ್​ ಮೀಡಿಯಾದಿಂದಲೇ ಪ್ರತಿ ತಿಂಗಳು ಸುಮಾರು 40 ರಿಂದ 50 ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಾರೆ. ಆದ್ದರಿಂದ ತಾನು ಬಯಸುವ ಸಂಗಾತಿಯೂ ಕೂಡ ಶ್ರೀಮಂತನಾಗಿರಬೇಕು ಜೊತೆಗೆ ಕಾಳಜಿಯುಳ್ಳವನಾಗಿರಬೇಕು, ಆದರೆ ಅವನು ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿರಬಾರದು ಎಂದು ಹೇಳಿಕೊಂಡಿದ್ದಾರೆ. ಅವಳಿಗೆ ಬೇಕಾಗಿರುವುದು ಅವಳ ಅದ್ದೂರಿ ಜೀವನಶೈಲಿಯನ್ನು ನಿಭಾಯಿಸಬಲ್ಲ ಗಂಡ. ಪತಿ ದಪ್ಪಗಾದರೂ ಪರವಾಗಿಲ್ಲ ಎಂದು ಮದೀನಾ ಸ್ಪಷ್ಟಪಡಿಸಿದ್ದಾರೆ.

ಇಷ್ಟೇ ಅಲ್ಲದೆ ಮದೀನಾ ಮಮದಲೀವಾ ಸೋಶಿಯಲ್​ ಮೀಡಿಯಾದ ಮುಖಾಂತರವೇ ಸ್ಟಾರ್​​ ಆದ ಬೆಡಗಿ. ಆದರೆ ತನ್ನ ಸಂಗಾತಿಯಾಗಲು ಬಯಸುವಾತ ಇನ್‌ಸ್ಟಾಗ್ರಾಮ್(Instagram) ಖಾತೆಯನ್ನು ಹೊಂದಿರಬಾರದು. ಯಾಕೆಂದರೆ ತನ್ನ ಗಂಡನ ಕುರಿತಾದ ಮಾಹಿತಿಯು ಅವಳು ಬಯಸಿದಷ್ಟು ಕಾಲ ರಹಸ್ಯವಾಗಿ ಉಳಿಯಬೇಕು. ಇದು ಅವನ ಹೊರತು ಜಗತ್ತಿನಲ್ಲಿ ಯಾರಿಗೂ ತಿಳಿಯಬಾರದು ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Netherland: ದಯವಿಟ್ಟು ಬೀಚ್ ಗಳಲ್ಲಿ ಸಂಭೋಗಿಸಬೇಡಿ ಎಂದು ಪ್ರವಾಸಿಗರಿಗೆ ಮನವಿ ಮಾಡಿದ ನೆದರ್ಲ್ಯಾಂಡ್!! ಕಾರಣವೇನು?