Third child: ಮೂರನೇ ಮಗುವಾದರೆ 5 ಲಕ್ಷ ರೂ. ಉಚಿತದ ಗ್ಯಾರಂಟಿ: ಜತೆಗೆ ಶಿಕ್ಷಣ, ಚಿಕಿತ್ಸೆ, ಮದ್ವೆ ಖರ್ಚಿಯೂ ಉಚಿತ – ಇದು ಕರ್ನಾಟಕದ್ದೇ ಸುದ್ದಿ !

Government scheme national news 5 lakh rupees to couple who gave birth to third child

Third child : ಭಾರತ ಸದ್ಯಕ್ಕೆ ಜಗತ್ತಿನ ಎರಡನೇ ಅತ್ಯಧಿಕ ಜನಸಂಖ್ಯೆಯ ದೇಶ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಮೊದಲ ಸ್ಥಾನಕ್ಕೆ ಬಂದು ನಿಲ್ಲಲಿದ್ದೇವೆ. ದೇಶದಲ್ಲಿ ಸಂಪನ್ಮೂಲ ಮತ್ತು ಪ್ರತಿ ವ್ಯಕ್ತಿಗೆ ಸಿಗುವ ಚದರ ಅಡಿ ಜಾಗದ ತೀವ್ರ ಕುಸಿತ ಕಂಡುಬರುತ್ತಿದೆ. ಆದರೂ ಕುಟುಂಬದಲ್ಲಿ ಮೂರನೇ ಮಗುವನ್ನು(Third child) ಹೊಂದುವ ದಂಪತಿಗೆ 5 ಲಕ್ಷ ರೂಪಾಯಿ ಕ್ಯಾಷ್ ನೀಡುವ ಬಂಪರ್ ಯೋಜನೆಯೊಂದು ಘೋಷಣೆಯಾಗಿದೆ. ಅಷ್ಟೇ ಅಲ್ಲ ಈ ಉಚಿತ ಯೋಜನೆ ಈಗ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾದ ಪಂಚ ಗ್ಯಾರಂಟಿಗಳಿಗಿಂತಲೂ ಭರ್ಜರಿಯಾಗಿದೆ. ಈ ಯೋಜನೆ ಮುಂದೆ ನಮ್ಮ ಸರ್ಕಾರ ಘೋಷಿಸಿದ ಯೋಜನೆಗಳೆಲ್ಲ ಜುಜುಬಿ ಎನ್ನುವಂತಿದೆ.

ಈಗ ಇಬ್ಬರು ಮಕ್ಕಳಿರುವ, ಇಷ್ಟಕ್ಕೇ ಸಾಕು ಎಂದು ಕೂತ ದಂಪತಿಗೆ ಮೂರನೇ ಮಗುವಾದರೆ 5 ಲಕ್ಷ ರೂಪಾಯಿ ನಗದು ನೀಡಲಾಗುವುದು. ಮಗು ಗಂಡಾಗಲಿ, ಹೆಣ್ಣಾಗಲಿ. ಎರಡೂ ಅದೃಷ್ಟ ಲಕ್ಷ್ಮಿಯೇ. ಅಷ್ಟೇ ಅಲ್ಲ, ಆ ಮಗುವಿಗೆ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಅಲ್ಲದೆ 16 ನೇ ವರ್ಷದವರೆಗಿನ ಆರೋಗ್ಯ ನಿರ್ವಹಣೆಯ ಖರ್ಚನ್ನೂ ನಾವೇ ಭರಿಸುತ್ತೇವೆ. ಅಲ್ಲದೆ, ಆ ನಂತರ ಬೇಕಾಗುವ ಮದುವೆಯ ವೆಚ್ಚವನ್ನೂ ನಾವೇ ಭರಿಸುತ್ತೇವೆ ಎಂಬ ಬೃಹತ್ ಘೋಷಣೆಯನ್ನೂ ಮಾಡಲಾಗಿದೆ.

ಇಂತಹಾ ಯೋಜನೆ ಘೋಷಣೆ ಆಗಿರೋದು ಅದೆಲ್ಲೋ ಚೀನಾದಲ್ಲಿ, ಅಥವಾ ತೀವ್ರ ಜನಸಂಖ್ಯಾ ಕುಸಿತದ ಪಾಶ್ಚತ್ಯ ರಾಷ್ಟ್ರಗಳಲ್ಲಿ ಎಂದುಕೊಳ್ಳಬೇಡಿ. ಇದು ಜಾರಿಯಾಗಲಿರುವುದು ನಮ್ಮದೇ ದೇಶದ, ಇದೇ ಕರ್ನಾಟಕದ ನೆಲದಲ್ಲಿ. ಅದು ಕೂಡಾ ಬೆಂಗಳೂರಿನಲ್ಲಿ ಇಂತಹದೊಂದು ಘೋಷಣೆಯನ್ನು ಮಾಡಲಾಗಿದೆ.

ಇಲ್ಲೇ ಬೆಂಗಳೂರಿನ ಜೈನ್ ಸಮಾಜದ ವ್ಯಕ್ತಿಯೊಬ್ಬರು ಇಂತಹಾ ಘೋಷಣೆ ಮಾಡಿದ್ದಾರೆ. ಜೈನ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈನ ಮುಖಂಡರೊಬ್ಬರು ಈ ಘೋಷಣೆಯನ್ನು ಮಾಡಿದ್ದು, ಈಗ ಅವರ ಹೇಳಿಕೆಯ ವಿಡಿಯೋ ಎಲ್ಲೆಡೆ ಹರಿದಾಡಲಾರಂಭಿಸಿದೆ.

” ನಮ್ಮಸಮುದಾಯದಲ್ಲಿ ಎಲ್ಲವೂ ಇದೆ. ಆದರೆ ಅದರ ರಕ್ಷಣೆಗೆ ಸಮುದಾಯದವರೇ ಇಲ್ಲದಂತಾದರೆ ಹೇಗೆ? ಎಂದು ಈ ವ್ಯಕ್ತಿ ಆತಂಕ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಜೈನ ಸಮುದಾಯದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಮ್ಮವರು ಮಕ್ಕಳಾದರೆ ಅವರ ಖರ್ಚು ನಿಭಾಯಿಸುವುದು ಕಷ್ಟ ಎಂಬ ಕಾರಣಕ್ಕೇ ಮಕ್ಕಳಾಗುವುದನ್ನು ತಪ್ಪಿಸುತ್ತಿದ್ದಾರೆ. ಹೀಗಾಗಿ ನಮ್ಮ ಜೈನ ಸಮುದಾಯದಲ್ಲಿ ಇಬ್ಬರು ಮಕ್ಕಳಿರುವ ಯಾವುದೇ ದಂಪತಿ ಮೂರನೇ ಮಗುವನ್ನು ಹೊಂದಿದರೆ ಅವರಿಗೆ 5 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ನೀಡಲಾಗುವುದು. ಅಲ್ಲದೆ ಅವರ ಆರೋಗ್ಯ, ಶಿಕ್ಷಣ, ಮದುವೆ ವೆಚ್ಚ ನೀಡುವ ಜತೆಗೆ, ಮುಂದೆ ಅಂಥ ಮಗು ಜೈನ ದೀಕ್ಷೆಯನ್ನು ಪಡೆದರೆ ಅದರ ಖರ್ಚನ್ನೂ ಕೂಡ ನೀಡುವುದಾಗಿ ಮುಖಂಡರೊಬ್ಬರು ಘೋಷಿಸಿದ್ದಾರೆ.

ಭಾರತ ಅತ್ಯಧಿಕ ಜನಸಂಖ್ಯೆಯ ದೇಶವಾಗಿದೆ ನಿಜ. ಆದರೆ ಏರುತ್ತಿರುವ ಈ ಜನಸಂಖ್ಯೆ ಕೆಲವೇ ಧರ್ಮ – ಮತ – ಪಂಗಡಗಳಲ್ಲಿ ಕಂಡುಬರುತ್ತಿದೆ. ಕೆಲವು ಸಮುದಾಯಗಳಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿರುವುವುದು ಗಮನಕ್ಕೆ ಬಂದಿದೆ. ಇದು ಕೂಡ ಆತಂಕಕಾರಿಯಾಗಿದೆ. ಹೀಗಾಗಿ ಆಯಾ ಸಮುದಾಯದ ಮಕ್ಕಳ ಸಂಖ್ಯೆ ಹೆಚ್ಚಿಸಲು ಕೆಲವು ಸಮುದಾಯದ ದುಡ್ಡಿರುವ ಹಿತೈಷಿಗಳು ಇಂಥ ಯೋಜನೆ, ನಗದು ಬಹುಮಾನಗಳನ್ನು ಘೋಷಣೆ ಮಾಡುತ್ತಿದ್ದಾರೆ. ಈಗ ಕರ್ನಾಟಕದಲ್ಲಿ ಅಂತಹದೊಂದು ಘೋಷಣೆ ಮಾಡಲಾಗಿದೆ. ಹುಟ್ಟಿದ ಮಗುವಿನ ಎಲ್ಲಾ ಖರ್ಚುಗಳನ್ನು ಆ ಸಮುದಾಯವೇ ನೋಡಿಕೊಳ್ಳಲಿದೆ.

ಇದನ್ನೂ ಓದಿ: Hasina Madina mamadaliva: ಡೊಳ್ಳು ಹೊಟ್ಟೆಯ, ಹೊಟ್ಟೆ ಬಾಕನೇ ನನ್ನ ಗಂಡನಾಗಬೇಕೆಂದ ಸುರ ಸುಂದರಾಂಗಿ!! ಯಾಕಂತೆ ಗೊತ್ತಾ?

Leave A Reply

Your email address will not be published.