Viral news: ಅಯ್ಯೋ ಇವ್ರಿಗೆ ಫ್ರೀ ಟಿಕೆಟ್ ಯಾಕ್ರಪ್ಪ…? ನಮ್ಗೆ ಎಣ್ಣೆ ರೇಟ್ ಇಳಿಸ್ರಪ್ಪಾ…!!
alcohol rate We don't want free tickets please reduce alcohol rates
Free Bus Ticket: ಕಾಂಗ್ರೆಸ್ ಸರ್ಕಾರವು(Congress Government) ಮಹಿಳೆಯರಿಗೆ ಉಚಿತ ಬಸ್(Free bus) ಪ್ರಯಾಣವನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯದ್ಯಂತ ನಾರಿಮಣಿಯರು ಉಚಿತವಾಗಿ ಸಂಚಾರ ಮಾಡಿ ಸಂಭ್ರಮಿಸುತ್ತಿದ್ದಾರೆ. ಕೆಲವರ ಆನಂದಕ್ಕೆ ಪಾರವೇ ಇಲ್ಲವಾಗಿದೆ. ಈ ನಡುವೆ ಪುರುಷರಂತೂ ನಮ್ಮ ಕಥೆ ಮುಗಿಯಿತು, ಇನ್ನು ನಾವೇ ಬೇಯಿಸಿಕೊಂಡು ತಿನ್ನಬೇಕು ಎಂದು ತಲೆಬಿಸಿಮಾಡಿಕೊಳ್ಳತ್ತಿದ್ದಾರೆ. ಆದರೆ ಈ ನಡುವೆ ಇಲ್ಲೊಬ್ಬ ಯುವಕ ಸಿಎಂ ಸಿದ್ದರಾಮಯ್ಯನಿಗೆ(CM Siddaramaiah) ವಿಶೇಷವಾದ ಮನವಿಯೊಂದನ್ನು ಮಾಡಿ ಭಾರೀ ಸುದ್ಧಿಯಾಗ್ತಿದ್ದಾನೆ.
ಹೌದು, ರಾಜ್ಯಾದ್ಯಂತ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ನಿನ್ನೆಯೇ ಚಾಲನೆ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಯುವಕನೊಬ್ಬ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಲ್ಲಿ ಮನವಿಯೊಂದನ್ನು ಮಾಡಿದ್ದು, ಮಹಿಳೆಯರಿಗೆ ಫ್ರೀ ಬಸ್ (Free Bus Ticket) ಓಕೆ. ನಮಗೆ ಫ್ರೀ ಟಿಕೆಟ್ ಬೇಡ್ವೇ ಬೇಡ ಗೂರೂ. ಆದರೆ ನಮಗೂ ನ್ಯಾಯ ಬೇಕಲ್ವಾ ಸಿಎಂ ಸಾಹೇಬ್ರೆ?.. ನಮ್ಮ ಕಡೆಗೂ ಚೂರು ಗಮನ ಕೊಡಿ. ನೀವು ಎಣ್ಣೆ(Drinks)ರೇಟು ಹೆಚ್ಚು ಮಾಡಿದ್ದು ಸರಿಯಲ್ಲ. ಹೀಗಾಗಿ ದಯವಿಟ್ಟು ಎಣ್ಣೆ ರೇಟು ಇಳಿಸಿ ಪುರುಷರಿಗೂ ನ್ಯಾಯತೋರಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.
ಅಂದಹಾಗೆ ಇತ್ತೀಚೆಗಷ್ಟೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅಬಕಾರಿ ಇಲಾಖೆ (Excise Department) ಸದ್ದಿಲ್ಲದೆ ಮದ್ಯ ಬೆಲೆ ಏರಿಕೆ ಮಾಡಿತ್ತು. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಮಧ್ಯಪ್ರಿಯರಿಗೆ ಶಾಕ್ ನೀಡಿತ್ತು. ದರವನ್ನು ಸ್ಲಾಬ್‍ಗಳಲ್ಲಿ ಏರಿಕೆ ಮಾಡಲಾಗಿದ್ದು, ಬಿಯರ್‍ಗೆ 10 ರೂ. ಏರಿಕೆ ಮಾಡಿ, ಹಾಟ್ ಡ್ರಿಂಕ್ಸ್ ಗಳ ವಿವಿಧ ಬ್ರ್ಯಾಂಡ್‍ಗಳಿಗೆ ಬೇರೆ ಬೇರೆ ರೀತಿಯಾಗಿ ಬೆಲೆ ಏರಿಕೆ ಮಾಡಲಾಗಿದೆ.
ಯಾವೆಲ್ಲಾ ಬ್ರ್ಯಾಂಡ್ ಎಷ್ಟು ಬೆಲೆ ಏರಿಕೆ?: 650 ಎಂಎಲ್‍ನ ಬಿಯರ್ 160 ರಿಂದ 170 ರೂ. ಏರಿಕೆ ಮಾಡಲಾಗಿದೆ. ಮ್ಯಾಕ್ ಡ್ಯಾವೆಲ್ಸ್ 180 ಎಂಎಲ್ 198 ರಿಂದ 220 ರೂ.ಗೆ ಏರಿಕೆ, ಕಿಂಗ್ ಫಿಷರ್ 650 ಎಂಎಲ್‍ಗೆ 160 ರಿಂದ 170 ರೂ. ಏರಿಕೆ, ಟ್ಯೂಬರ್ಗ್ 160 ರಿಂದ 170 ರೂ.ಗೆ ಹೆಚ್ಚಳ, ಬಡ್ವೈಸರ್ 200 ರಿಂದ 220 ರೂ. ಹೆಚ್ಚಳ, ಪವರ್ ಕೂಲ್ 100 ರಿಂದ 110 ರೂ. ಏರಿಕೆ, ಬಕಾಡಿ 275 ಎಂಎಲ್‍ಗೆ 90 ರಿಂದ 105 ರೂ. ಏರಿಕೆ ಮಾಡಲಾಗಿದೆ.