Odisha train accident: ಒಡಿಶಾ ರೈಲು ದುರಂತ – 14 ನ್ಯಾಯಮೂರ್ತಿಗಳು ಸೇರಿ 270 ನಿವೃತ್ತ ಹಿರಿಯ ಅಧಿಕಾರಿಗಳಿಂದ ಪ್ರಧಾನಿ ಮೋದಿಗೆ ಪತ್ರ!
Odisha Balasore train accident latest national news Total 270 signatories consisting of 14 judges wrote letter to PM Modi
Odisha train accident: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಒಡಿಶಾದ(Odisha) ಆಘಾತಕಾರಿ ರೈಲು ದುರಂತದಿಂದಾಗಿ(Odisha Train accident) ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಈ ದುರಂತದಲ್ಲಿ ಮಡಿದ ಹಲವಾರು ಜನರ ನೋವಿನ ಕತೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈ ನಡುವೆ ಈ ಭೀಕರವಾದ ಅಪಘಾತದ ಕುರಿತು ಹಲವು ಅನುಮಾನಗಳು ಸೃಷ್ಟಿಯಾಗಿದ್ದು, ಕೇಂದ್ರವು ಈ ಕುರಿತು ತನಿಖೆಗಾಗಿ ಪ್ರಕರಣವನ್ನು CBI ಗೆ ವಹಿಸಿದೆ. ಈ ನಡುವೆ, ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ 14 ನ್ಯಾಯಮೂರ್ತಿಗಳು(14 judge’s) ಸೇರಿದಂತೆ 270 ನಿವೃತ್ತ ಹಿರಿಯ ಅಧಿಕಾರಿಗಳು(270 Retaired Officer’s) ಪ್ರಧಾನಿ ಮೋದಿಗೆ(PM Modi) ಪತ್ರ ಬರೆದಿದ್ದಾರೆ.
ಹೌದು, ಹದಿನಾಲ್ಕು ನ್ಯಾಯಮೂರ್ತಿಗಳು, 11 ಮಾಜಿ ರಾಯಭಾರಿಗಳು, 104 ನಿವೃತ್ತ ಹಿರಿಯ ಅಧಿಕಾರಿಗಳು, ಸಶಸ್ತ್ರ ಪಡೆಯ 141 ನಿವೃತ್ತ ಅಧಿಕಾರಿಗಳು ಸೇರಿದಂತೆ ಒಟ್ಟು 270 ಮಂದಿ ತಮ್ಮ ಸಹಿ ಸಹಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿದ್ದು, “ಒಡಿಶಾದ(Odisha) ಬಾಲಸೋರ್ನಲ್ಲಿ(Balsore) ಸಂಭವಿಸಿದ ರೈಲು ದುರಂತದಿಂದ ನಾವು ತುಂಬಾ ವಿಚಲಿತರಾಗಿದ್ದೇವೆ. ತನಿಖೆ ಇನ್ನೂ ನಡೆಯುತ್ತಿದ್ದರೂ, ಆರಂಭಿಕ ಮಾಧ್ಯಮ ವರದಿಗಳ ಪ್ರಕಾರ, ಹಳಿ ತಪ್ಪಲು ಉದ್ದೇಶಪೂರ್ವಕ ಮಾನವ ಹಸ್ತಕ್ಷೇಪ ಕಾರಣವಾಗಿರಬಹುದು ಎಂದು ಶಂಕಿಸಲು ಕಾರಣಗಳಿವೆ. ಇದು ಭಯೋತ್ಪಾದಕ ಸಂಘಟನೆಗಳ(Terrorist organized) ಆಜ್ಞೆಯ ಮೇರೆಗೆ ನಡೆದ ವಿಧ್ವಂಸಕ ಕೃತ್ಯದ ಸ್ಪಷ್ಟ ಪ್ರಕರಣವಾಗಿದೆ” ಎಂದು ಈ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಭಾರತೀಯ ರೈಲ್ವೆಯು(Indian railway) ಸರಕು ಸಾಗಣೆ ಮತ್ತು ಪ್ರಯಾಣದ ಜೀವನಾಡಿಯಾಗಿದೆ. ಆದರೆ ದೇಶದ ಪ್ರಗತಿಯನ್ನು ಸಹಿಸದ ವಿರುದ್ಧವಾದ ಶಕ್ತಿಗಳು ಈ ಜಾಲವನ್ನು ಅಡ್ಡಿಪಡಿಸಲು ಮತ್ತು ದೊಡ್ಡ ಮಟ್ಟದಲ್ಲಿ ಮಾನವರ ಜೀವವನ್ನು ತೆಗೆಯಲು ಬಯಸುತ್ತಿವೆ. ವಿಶೇಷವಾಗಿ ‘ಚಿಕನ್ಸ್ ನೆಕ್’ ಎಂದು ಕರೆಯಲ್ಪಡುವ ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಮ್ಮ ಸಂಪೂರ್ಣ ರೈಲ್ವೆ ಜಾಲವು ದುರ್ಬಲವಾಗಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.
ಇದರೊಂದಿಗೆ ಹಿಂದಿನ ಕೆಲವು ಘಟನೆಗಳನ್ನು ಉಲ್ಲೇಖಿಸಿದ ಅವರು 1990 ಮತ್ತು 2000ರ ದಶಕದ ಆರಂಭದಲ್ಲಿ ಪಠಾಣ್ ಕೋಟ್ನಿಂದ ಜಮ್ಮುವರೆಗಿನ ರೈಲ್ವೆ ಮಾರ್ಗಗಳೂ ಇಂಥ ಅನೇಕ ದಾಳಿಗಳಿಗೆ ಸಾಕ್ಷಿಯಾದವು. ಅಲ್ಲಿ ಹಳಿಗಳು ತೀವ್ರವಾಗಿ ಹಾನಿಗೊಳಗಾದವು. ಸರಿಯಾದ ನಿಯೋಜನೆಯನ್ನು ಮಾಡಿದ ನಂತರವೇ ದುರಂತ ಅಪಘಾತಗಳು ನಿಂತವು. ಈ ಮಾರ್ಗವನ್ನು ಕೂಡ ಸರ್ಕಾರ ಹಾಗೆಯೇ ಮಾಡುತ್ತದೆ ಎಂದು ನಾವು ನಂಬಿದ್ದೇವೆ ಎಂಬುದಾಗಿ ಈ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಉಪ್ಪಿನಂಗಡಿ : ಮಂತ್ರವಾದಿಯಾದ ಕಡಬದ ಗುಜರಿ ವ್ಯಾಪಾರಿ , ನೂಲು ನೀಡಲು ಹೋದಾತನ ಶನಿ ಬಿಡಿಸಿದ ಸ್ಥಳೀಯರು