Shakti scheme: ಕಾಂಗ್ರೆಸ್‌ ಸರಕಾರದ ಶಕ್ತಿ ಯೋಜನೆಗೆ ಇಂದು ಚಾಲನೆ; ವಾಹನ ಸವಾರರೇ ಸಂಚಾರ ಮಾರ್ಗದಲ್ಲಿ ಬದಲಾವಣೆ, ಇಲ್ಲಿದೆ ವಿವರ

Congress guarantee launched Bengaluru traffic Shakti scheme to be launched in Bengaluru today changes in traffic route

Shakti scheme : ಇಂದು (ಜೂನ್‌ 11) ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶವನ್ನು ನೀಡುವ ಶಕ್ತಿ ಯೋಜನೆ (Shakti Scheme) ನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧದ ಮುಂದೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮಕ್ಕೆ ಜನಸೇರುವ ಸಾಧ್ಯತೆ ಹೆಚ್ಚಿದ್ದು ಸಂಚಾರ ಅಸ್ತವ್ಯಸ್ತಗೊಳ್ಳಬಹುದು. ಹೀಗಾಗಿ ವಾಹನ ಸವಾರರಿಗೋಸ್ಕರ ಸುಗಮ ಸಂಚಾರ ಪ್ರಯಾಣಕ್ಕೆ ಪೊಲೀಸ್‌ ಇಲಾಖೆ ಸೂಚಿಸಿದೆ.

ಅಂದ ಹಾಗೆ ಈ ಕಾರ್ಯಕ್ರಮ ಬೆಳಗ್ಗೆ 11ಗಂಟೆಗೆ ಪ್ರಾರಂಭವಾಗುವುದರಿಂದ, ಈ ಕಾರ್ಯಕ್ರಮದಿಂದಾಗಿ ಅಂಬೇಡ್ಕರ್‌ ರಸ್ತೆಯಲ್ಲಿ ಸಂಚಾರ ಹೆಚ್ಚಾದರೆ ಕೆ.ಆರ್.ಸರ್ಕಲ್‌ ಕಡೆಯಿಂದ ಬಾಳೆಕುಂದ್ರಿ ಸರ್ಕಲ್‌ ಕಡೆಗೆ ತೆರಳುವ ವಾಹನ ನೃಪತುಂಗ ರಸ್ತೆ ಮೂಲಕ ಹೋಗಲು ಅನುವು ಮಾಡಲಾಗಿದೆ. ಬಾಳೇಕುಂದ್ರಿ ಸರ್ಕಲ್‌ನಿಂದ ಕೆ.ಆರ್.ಸರ್ಕಲ್‌ ರಸ್ತೆ ಕಡೆಗೆ ಹೋಗುವವರು ಕ್ವೀನ್ಸ್‌ ರಸ್ತೆ ಸಿದ್ದಲಿಂಗಯ್ಯ ರಸ್ತೆ ಮೂಲಕ ಹೋಗಬಹುದು. ಸಿಟಿಓ ವೃತ್ತದಿಂದ ಬರುವ ಸವಾರರಿಗೆ ಪೊಲೀಸ್‌ ತಿಮ್ಮಯ್ಯ ಸರ್ಕಲ್‌ನಲ್ಲಿ ಎಡ ತಿರುವು ಮೂಲಕ ಹೋಗಲು ಅನುವು ಇಲ್ಲ, ಹಾಗಾಗಿ ರಾಜಭವನ ರಸ್ತೆ ಮೂಲಕ ಹೋಗಬಹುದು.

ನಾಡ ಗೀತೆ ಹಾಡುವ ಮೂಲಕ ಈ ಕಾರ್ಯಕ್ರಮ ಇಂದು ಚಾಲನೆಗೊಳ್ಳಲಿದೆ. ವಿಧಾನ ಸೌಧದ ಮುಂಭಾಗ ನಾಲ್ಕು ನಿಮಗದ ಬಸ್‌ ಗಳಾದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, NWKRTC, KKRTC, ಸಾಮಾನ್ಯ ಬಸ್‌ ನಿಲ್ಲಿಸಲಾಗುವ ಯೋಜನೆ ಇದೆ. ನಂತರ ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ ಲೋಗೋ ಅನಾವರಣ ಮಾಡಲಿದ್ದಾರೆ. ಸಿಟಿ ಬಸ್‌ನಲ್ಲೇ ಸಿದ್ದರಾಮಯ್ಯ ಅವರು ವಿಧಾನಸೌಧ, ಮೆಜೆಸ್ಟಿಕ್‌ ಅಥವಾ ಮೈಸೂರು ಬ್ಯಾಂಕ್‌ ಸರ್ಕಲ್‌ ವರೆಗೆ ಒಂದು ರೌಂಡ್‌ ಬಿಎಂಟಿಸಿ ಬಸ್‌ನಲ್ಲಿ ಹೋಗಲಿದ್ದಾರೆ.

ಈ ಯೋಜನೆಗೆ ಚಾಲನೆ ಆಗುತ್ತಿದ್ದಂತೆ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ. ಆಯಾ ಜಿಲ್ಲೆಯ, ತಾಲೂಕಿನ ಸ್ಥಳೀಯ ಶಾಸಕರು ಅಥವಾ ಜನಪ್ರತಿನಿಧಿಗಳು ಈ ಯೋಜನೆಗೆ ಚಾಲನೆ ನೀಡುತ್ತಾರೆ. ಮಧ್ಯಾಹ್ನ 1ಗಂಟೆಗೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ ಡಬ್ಲ್ಯೂಆರ್ಟಿಸಿ, ಕೆಕೆಆರ್ಟಿಸಿ ಬಸ್‌ನಲ್ಲಿ ಮಹಿಳೆಯರು ಫ್ರೀಯಾಗಿ ಪ್ರಯಾಣ ಮಾಡಲು ಅವಕಾಶವಿದೆ.

ಇದನ್ನೂ ಓದಿ: Siddaramaiah : 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡ್ಬೇಕು..? ಉಚಿತ ವಿದ್ಯುತ್ ಯೋಜನೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ!!

Leave A Reply

Your email address will not be published.