Kum veerabhadrappa: ರಾಷ್ಟ್ರಪತಿಯನ್ನು ‘ ವಿಧವೆ ‘ ಎಂದು ನಾಲಿಗೆ ಹರಿಬಿಟ್ಟು ಅವಮಾನಿಸಿದ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ !

National latest news politics news Kum veerabhadrappa insults president Droupadi murmu

Kum veerabhadrappa: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಧವೆ ಎಂಬ ಕಾರಣಕ್ಕೆ ಅವರನ್ನು ನೂತನ ಸಂಸತ್ ಭವನ ಉದ್ಘಾಟನೆಗೆ ಕರೆದಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರು ಶುಕ್ರವಾರ ಹೇಳಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ರಾಷ್ಟ್ರಪತಿಯನ್ನು ‘ ವಿಧವೆ ‘ ಎಂದಿದ್ದಾರೆ ಕುಂ.ವೀರಭದ್ರಪ್ಪ(Kum veerabhadrappa).

ಅವರು ಚಾಮರಾಜನಗರದ ಡಾ.ರಾಜ್‍ಕುಮಾರ್ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀದರ್ ಅವರ ಅವಳಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಪುಸ್ತಕ ಬಿಡುಗಡೆ, ಸಾಹಿತ್ಯದ ಬಗ್ಗೆ ಮಾತಾಡುವ ಬದಲು ರಾಜಕೀಯ ಮಾತಾಡಿದ್ದಾರೆ ಕುಂ. ವೀ. ರಾಷ್ಟ್ರಪತಿ ದ್ರೌಪದಿ ಮೂರ್ಮು ಅವರು ಬುಡಕಟ್ಟು ವರ್ಗಕ್ಕೆ ಸೇರಿದವರು. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದವರು. ಹಾಗಿದ್ದರೂ ಆಕೆಯನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿದ್ದು ಭಾರತೀಯ ಜನತಾ ಪಕ್ಷ. ಅಪ್ರತಿಮ ಸಾಹಿತಿ ಕುಂ. ವೀರಭದ್ರಪ್ಪ ನವರಿಗೆ ಈ ಸತ್ಯ ಕಾಣಿಸಿಲ್ಲ ಅನ್ನಿಸುತ್ತದೆ. ಇದೀಗ ರಾಷ್ಟ್ರಪತಿ ದ್ರೌಪದಿ ಮುರುಮು ಅವರನ್ನು ಸಂಸತ್ ಭವನದ ಉದ್ಘಾಟನೆಗೆ ಆಹ್ವಾನಿಸದ ಏಕೈಕ ಕಾರಣಕ್ಕೆ ಆಕೆಯನ್ನು ವಿಧವೆ ಪಟ್ಟಕೊಟ್ಟು ಕೂರಿಸುತ್ತಿದ್ದಾರೆ ವೀರಭದ್ರಪ್ಪ. ಇದು ಎಷ್ಟರಮಟ್ಟಿಗೆ ಸರಿ ? ರಾಷ್ಟ್ರಪತಿಯನ್ನು ವಿಧವೆ ಎಂದು ಕರೆದ ಕುಂ. ವೀರಭದ್ರಪ್ಪನವರ ಹೇಳಿಕೆಗೆ ನಾವು ಪ್ರತಿಭಟಿಸಲೇಬೇಕು. ರಾಷ್ಟ್ರಪತಿ ಅನ್ನುವುದು ಒಂದು ಪ್ರಧಾನ ಹುದ್ದೆ. ಅದಕ್ಕೆ ಜಾತಿ ಮತ ಧರ್ಮ ಮತ್ತು ವಿಧವೆ ವಿದುರ ಎಂಬ ಭೇದವಿಲ್ಲ. ಇಂತಹ ಸಾಮಾನ್ಯ ಜ್ಞಾನ ಕೂಡ ಮಾಜಿ ಮೇಷ್ಟ್ರು ವೀರಭದ್ರಪ್ಪ ನವರಿಗೆ ಇಲ್ಲವೇ? ಅಥವಾ ಇದ್ದೂ, ಅದು ಕಾಂಗ್ರೆಸ್ ಪ್ರೇಮದ ಮಧ್ಯೆ ಕುರುಡಾಗಿದೆಯೇ ?

ಬಹುಶ: ಕುo. ವೀರಭದ್ರಪ್ಪ ನವರಿಗೆ ಮರೆವು ಉಂಟಾಗಿರಬಹುದು. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಕೇವಲ ಸಿನಿಮಾ ನಟ ನಟಿಯರಿಗೆ ಮಾತ್ರ ಪದ್ಮಭೂಷಣ, ಪದ್ಮವಿಭೂಷಣ ಇತ್ಯಾದಿ ಬಿರುದುಗಳು ದೊರೆಯುತ್ತಿದ್ದವು. ಅದನ್ನು ಅತ್ಯಂತ ಬಡ ಸಾಧಕರಿಗೆ, ನಮ್ಮ ಸಾಲು ಮರದ ತಿಮ್ಮಕ್ಕರಿಗೆ, ಕಿತ್ತಲೆ ಹಾಜಬ್ಬರಿಗೆ ತಲುಪಿಸಿದ ಕೀರ್ತಿ ನರೇಂದ್ರ ಮೋದಿ ಸರ್ಕಾರಕ್ಕೆ ಕೊಡಲೇಬೇಕು.

ಒಟ್ಟಾರೆ ಭಾಷಣದಲ್ಲಿ ಕುಂ ವೀರಭದ್ರಪ್ಪನವರು ಏನೆಂದರು ?:

” ನಮ್ಮ ದೇಶದ ಶಕ್ತಿ ಕೇಂದ್ರ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿ ಹಿಂದುಳಿದ ಜಾತಿಯವರಾದ್ದರಿಂದ ಮತ್ತು ಅವರು ವಿಧವೆ ಆದ ಕಾರಣ ಶುಭಕಾರ್ಯಕ್ಕೆ ಅಮಂಗಲವೆಂದು ಅವರನ್ನು ಕಾರ್ಯಕ್ರಮದಿಂದ ಪ್ರಧಾನಿ ಮೋದಿ ಹೊರಗಿಟ್ಟರು. ಆದರೆ ಇದನ್ನು ಯಾರೂ ಪ್ರಶ್ನೆ ಮಾಡಲಿಲ್ಲ” ಎಂದು ಅವರು ಹೇಳಿದ್ದಾರೆ.

” ಸಂಸತ್ ಈ ದೇಶದ 135 ಕೋಟಿ ಜನರ ಪ್ರತಿನಿಧಿ. ಅದು ಕೇವಲ ಶೇಕಡಾ 2 ರಷ್ಟು ಇರುವ ಜನರದ್ದಲ್ಲ. ಅದು ದೇಶದ ಸಂಸತ್ತು. ಆದರೆ ಅದರ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಕರೆಯಲಿಲ್ಲ. ಇದನ್ನು ನಾವು ಪ್ರಶ್ನಿಸಲೂ ಇಲ್ಲ ” ಎಂದಿದ್ದಾರೆ ಕುಮ್. ವೀರಭದ್ರಪ್ಪ.

” ನಮ್ಮ ಕನ್ನಡ ಸಾಹಿತ್ಯವು ಯಾವಾಗ್ಲೂ ಪ್ರಶ್ನಿಸುವ ಗುಣವನ್ನು ಹೊಂದಿದೆ. ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ: ಒಬ್ಬರು ಉಪದ್ರವಿ ಲೇಖಕರು, ಮತ್ತೊಬ್ಬರು ನಿರುಪದ್ರವಿ ಲೇಖಕರು ಎಂದು. ಸರ್ಕಾರವನ್ನು ಟೀಕಿಸುವರು, ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರು ಉಪದ್ರವಿ ಸಾಹಿತಿಗಳು, ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ. ಆದರೆ ಕೆಲವರು ಇರುತ್ತಾರೆ 500 ಕೊಟ್ಟರೆ ಇತ್ತ ಕಡೆ, ಜಾಸ್ತಿ ಕೊಟ್ಟರೇ ಅತ್ತಕಡೆ ಎಂಬಂಥವರು ” ಎಂದಿದ್ದಾರೆ ಭದ್ರಪ್ಪನವರು.

” ಕರ್ನಾಟಕ ರಾಜ್ಯದಲ್ಲಿ ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾರನ್ನೂ ಸೋಲಿಸಬೇಕೆಂದುಕೊಂಡಿದ್ದೆವೋ ಅವರು ಈಗ ಸೋತಿದ್ದಾರೆ. ಯಾರು ಗೆಲ್ಲಬೇಕಿತ್ತೋ ಅವರಿಗೆ 130 ಕ್ಕೂ ಅಧಿಕ ಸ್ಥಾನ ಕೊಟ್ಟು ಜನ ಗೆಲ್ಲಿಸಿದ್ದಾರೆ. ಆಗ ದೆಹಲಿಯಿಂದ ಬಂದರು, ನಟನಟಿಯರನ್ನೂ ಜತೆ ಕರೆತಂದರೂ ಏನೂ ಪ್ರಯೋಜನ ಆಗಲಿಲ್ಲ. ಜನರು ಯಾವುದೇ ಮೋಡಿಗೆ ಒಳಗಾಗಲಿಲ್ಲ, ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜತೆಗೆ ತಮ್ಮ ಕಾಂಗ್ರೆಸ್ ಪ್ರೇಮವನ್ನು ಸಭೆಯಲ್ಲಿ ತೋರಿಸಿದರು.

ಇದನ್ನೂ ಓದಿ: Sanju Basayya wedding: ಈ ಚೆಂದುಳ್ಳಿ ಚೆಲುವೆಯನ್ನು ಮದುವೆಯಾದ ‘ ಕುಳ್ ಮಿಂಡ್ರೀ ‘ಖ್ಯಾತಿಯ ಕಾಮಿಡಿ ಕಿಲಾಡಿ ಸಂಜು ಬಸಯ್ಯ !

Leave A Reply

Your email address will not be published.