Ramalinga Reddy: ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ ಮತ್ತೆ ಹೊಸ ರೂಲ್ಸ್: ಸಚಿವ ರಾಮಲಿಂಗಾ ರೆಡ್ಡಿ ಹೇಳಿದ ಹೊಸ ಷರತ್ತು ಬಗ್ಗೆ ತಿಳ್ಕೊಳ್ಳಿ!
karnataka news political news Congress Guarantee Minister Ramalinga Reddy statement on new rules for women free bus travel
Ramalinga Reddy: ನಾಳೆಯಿಂದ ರಾಜ್ಯಾದ್ಯಂತ ಕರ್ನಾಟಕದ ಮಹಿಳೆಯರಿಗೆ ಸಾರಿಗೆ ಬಸ್ ಉಚಿತ ಪ್ರಯಾಣ ಸೌಲಭ್ಯ ಆರಂಭಗೊಳ್ಳಲಿದೆ. ಈಗಾಗಲೇ ಹಲವು ಷರತ್ತು ವಿಧಿಸಿರುವಂತ ರಾಜ್ಯ ಸರ್ಕಾರ, ಈಗ ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದೆ. ನಾಳೆ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಸಿದ್ಧತೆ ನಡೆಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿ ಹೊಸ ರೂಲ್ಸ್ ಬಗ್ಗೆ ಹೇಳಿದ್ದಾರೆ.
ನಾಳೆ ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆಗೊಳಿಸಲಿದ್ದಾರೆ. 11 ಗಂಟೆಗೆ ಖುದ್ದು ಸಿದ್ದು ಚೀಟಿ ಹರಿಯಲಿದ್ದಾರೆ. ನಾಳೆ ಮಧ್ಯಾಹ್ನ1 ರ ನಂತರ ರಾಜ್ಯದ ಉದ್ದಗಲಕ್ಕೆ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಉಚಿತವಾಗಿ ಪ್ರಯಾಣಿಸಲು ಬಯಸುವ ಮಹಿಳೆಯರು ಐಡಿ ಕಾರ್ಡ್ ಅನ್ನು ಕಡ್ಡಾಯವಾಗಿ ಒಯ್ಯಲೇ ಬೇಕಾಗಿದೆ. ಇನ್ನು ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಓಡಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಆದರೆ ಇವತ್ತು ರಾಮಲಿಂಗಾರೆಡ್ಡಿ (Ramalinga Reddy) ಅವರು ಹೊಸ ರೂಲ್ಸ್ ಬಗ್ಗೆ ಹೇಳಿದ್ದಾರೆ. ನಾಳೆ ಉಚಿತವಾಗಿ ಪ್ರಯಾಣ ಬೆಳೆಸಲು ಇಚ್ಛಿಸುವ ಮಹಿಳೆಯರು ನಗಾಯಿಸಿದ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಎಂದು ಸಾರಿಗೆ ಮಂತ್ರಿಗಳು ಹೇಳಿದ್ದಾರೆ.
ರಾಜಹಂಸ, ಎಸಿ, ನಾನ್ ಎಸಿ ಸ್ಲೀಪರ್ ಸೇರಿದಂತೆ ಐಷಾರಾಮಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿಲ್ಲ ಎಂಬುದಾಗಿ ಮಾತ್ರ ಷರತ್ತು ವಿಧಿಸಲಾಗಿತ್ತು. ಈಗ ಮತ್ತೊಂದು ಹೊಸ ರೂಲ್ಸ್ ಬಗ್ಗೆಯೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದು, ಸರ್ಕಾರ ಉಚಿತವೆಂದು ಹೇಳಿರುವ ವಸ್ತುಗಳಿಗೆ ವಿಶೇಷವಾದ ಸ್ಟಿಕ್ಕರ್ ಅಳವಡಿಸಲಾಗುತ್ತದೆ. ಅದೇ ಸ್ಟಿಕ್ಕರ್ ಇರುವಂತ ಸಾರಿಗೆ ಬಸ್ ಗಳಲ್ಲಿ ಮಾತ್ರವೇ ಮಹಿಳೆಯರು ಪ್ರಯಾಣಿಸಲು ಅವಕಾಶ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಇದನ್ನು ಓದಿ: Uttar Pradesh: ಪತ್ನಿಯೊಂದಿಗಿನ ಜಗಳ ಬೀದಿಗೆ, ಆಕೆಯ ಅಶ್ಲೀಲ ಫೋಟೋಗೆ ಫೋನ್ ನಂಬರ್ ಹಾಕಿ ಬೀದಿಯಲ್ಲಿ ಪೋಸ್ಟರ್ ಹಚ್ಚಿದ ಪತಿರಾಯ