Bizarre Village: ಇಲ್ಲಿದೆ ಒಂದು ಶಾಪಗ್ರಸ್ತ ವಿಚಿತ್ರ ಗ್ರಾಮ; ಬೆಳೀತಾ ಬೆಳೀತಾ ಹುಡುಗೀರು ಇಲ್ಲಿ ಹುಡುಗ್ರಾಗಿ ಬದ್ಲಾಗ್ತಾರೆ !

Interesting news in kannada Bizzare village fact The mysterious village where girls turn in to boy at the age of 12

Bizarre Village: ಇಲ್ಲೊಂದು ಗ್ರಾಮದ ವಿಚಿತ್ರ ಲಕ್ಷಣವನ್ನು ನೀವು ಗಮನಿಸಿದಾಗ ನಿಮಗೂ ಆಶ್ಚರ್ಯ ಅನಿಸದೇ ಇರಲು ಸಾಧ್ಯವಿಲ್ಲ. ಈ ವಿಚಿತ್ರ ಗ್ರಾಮದಲ್ಲಿ ಹುಡುಗಿಯರು ಇದ್ದಕ್ಕಿಂದಂತೆಯೇ ಹುಡುಗರಾಗುತ್ತಾರೆ (Girls turn into Boys) . ಮತ್ತು ಹುಡುಗರಂತೆಯೇ ವರ್ತಿಸುತ್ತಾರೆ. ಅಲ್ಲದೆ ಈ ಗ್ರಾಮವನ್ನು ಶಾಪಗ್ರಸ್ತ ಗ್ರಾಮವೆಂದು ಕರೆಯಲಾಗುತ್ತಿದೆ. ಹಾಗಿದ್ದರೆ ಏನಿದು ವಿಚಿತ್ರವಾದ ಹಳ್ಳಿ ತಿಳಿಯೋಣ ಬನ್ನಿ.

ಡೊಮಿನಿಕನ್​ ರಿಪಬ್ಲಿಕ್​ನ (Dominican Republic) ಲಾ ಸಲಿನಾಸ್​ ವಿಲೇಜ್​ ಎಂಬ ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ ಗ್ರಾಮ ತನ್ನೀ ವಿಶೇಷತೆಗಾಗಿ ವಿಶ್ವಾದ್ಯಂತದ ಸಂಶೋಧಕರಿಗೆ ಸಂಶೋಧನೆಯ ವಿಷಯವಾಗಿ ಮಾರ್ಪಟ್ಟಿದೆ. ಪ್ರಪಂಚದ ನಕಾಶೆಯಲ್ಲಿ ಈ ಊರಿನ ಗುರುತು ಒಂದು ನಿಗೂಢ ಗ್ರಾಮವಾಗಿ ಮಾರ್ಪಟ್ಟಿದೆ.

ಆದರೆ ಈ ಗ್ರಾಮದಲ್ಲಿ ಹೆಣ್ಣುಮಕ್ಕಳು ಗಂಡಾಗಿ ಬದಲಾಗುವುದಕ್ಕೆ ಅಲ್ಲಿನ ಸ್ಥಳೀಯ ಜನರು ಹೇಳುವ ಪ್ರಕಾರ ಆ ಗ್ರಾಮದ ಮೇಲೆ ಒಂದು ಅದೃಷ್ಟ ಶಕ್ತಿಯ ನೆರಳು ಬಿದ್ದಿದೆ ಎನ್ನಲಾಗುತ್ತದೆ. ಇನ್ನೊಂದೆಡೆ ಆ ಗ್ರಾಮ ಶಾಪಗ್ರಸ್ತ ಗ್ರಾಮವಾಗಿದೆ ಎಂದು ಹೇಳುತ್ತಾರೆ. ಈ ಗ್ರಾಮದ ದೊಡ್ಡ ಸಮಸ್ಯೆ ಎಂದರೆ ಇಲ್ಲಿನ ಮಕ್ಕಳು ಹುಟ್ಟುವಾಗ ಹೆಣ್ಣು ಮಗುವಾಗಿ ಹುಟ್ಟುತ್ತಾರಂತೆ. ಆದರೆ, ಅವರು 12ನೆ ವಯಸ್ಸಿಗೆ ತಲುಪುತ್ತಿದ್ದಂತೆ ಅವರು ಗಂಡು ಮಗುವಾಗುತ್ತಾರಂತೆ. ಅಂತಹ ಮಕ್ಕಳನ್ನು ‘ಗುಡೋಚೆ’ ಎಂದು ಕರೆಯಲಾಗುತ್ತದೆ. ಸ್ಥಳೀಯ ಭಾಷೆಯಲ್ಲಿ ಈ ಪದದ ಅರ್ಥ ನಪುಂಸಕ ಎನ್ನಲಾಗುತ್ತದೆ.

ಅಲ್ಲದೆ ಈ ಗ್ರಾಮದವರು ಹೆಣ್ಣುಮಗು ಹುಟ್ಟಿದರೆ ಭಯಪಡುತ್ತಿದ್ದಾರೆ. ಹೆಣ್ಣು ಮಗು ಜನಿಸಿದಾಗ ಹೆತ್ತವರ ರೋದನ ಮುಗಿಲು ಮುಟ್ಟುವಂತಿರುತ್ತದೆ. ಈ ವಿಚಿತ್ರ ಘಟನೆಗಳಿಂದ ಹೆಣ್ಣು ಮಕ್ಕಳ ಸಂಖ್ಯೆ ಆ ಗ್ರಾಮದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಈ ರೀತಿ ಹೆಣ್ಣುಮಕ್ಕಳು ಗಂಡಾಗಿ ಬದಲಾಗುವುದಕ್ಕೆ ಕಾರಣ ಕೆಲವು ರೀತಿಯ ಆನುವಂಶಿಕ ಕಾಯಿಲೆ ಅನ್ನೋದು ವೈದ್ಯರ ಅಭಿಪ್ರಾಯ. ಇದನ್ನು ‘ನ್ಯೂಡೋಹೆರ್ಮಾಫೋಡೈಟ್’ ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಿದ್ದರೆ ಹುಡುಗಿ ಗರ್ಭಾವಸ್ಥೆಗೆ ಬರುವ ಸಮಯದಲ್ಲಿ ಹುಡುಗನಾಗಿ ಬದಲಾಗುತ್ತಾಳೆ. ಧ್ವನಿಯು ಬದಲಾಗಲು ಪ್ರಾರಂಭಿಸುತ್ತದೆ. ಅನೇಕ ಸಂಶೋಧಕರು ಈ ಕಾಯಿಲೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ, ಆದರೆ ಇಲ್ಲಿಯವರೆಗೆ ಯಾವುದೇ ಯಶಸ್ಸನ್ನು ಸಾಧಿಸಲಾಗಿಲ್ಲ.

ಇನ್ನು ಸಂಶೋಧಕರು ಈ ಗ್ರಾಮದ ವಿಚಿತ್ರ (Bizarre Village) ಕಾಯಿಲೆಯ ಕುರಿತು ಸಂಶೋಧನೆ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ, ಈ ಗ್ರಾಮದ 90 ರಲ್ಲಿ ಓರ್ವ ಬಾಲಕಿ ಈ ಕಾಯಿಲೆಗೆ ತುತ್ತಾಗಿದ್ದಾಳಂತೆ. ಆದರೆ ಇದುವರೆಗೂ ಇನ್ನುಳಿದ ಮಕ್ಕಳ ಈ ವಿಚಿತ್ರ ಬದಲಾವಣೆಯ ರಹಸ್ಯ ಮಾತ್ರ ಭೇದಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಗಂಡಿಲ್ಲದೆ ಗರ್ಭ ಧರಿಸಿದ ಹೆಣ್ಣು!

Leave A Reply

Your email address will not be published.