Women Career: ಈ ಕಂಪನಿ ನೀಡುತ್ತೆ ಮಹಿಳೆಯರಿಗೆ ಸೆಕೆಂಡ್ ಚಾನ್ಸ್, ಮತ್ತೆ ಶುರು ಮಾಡ್ಕೊಳ್ಳಿ !

Women Career: ಮಹಿಳೆಯರಿಗೆ ವೃತ್ತಿ ಜೀವನಕ್ಕೆ (Women Career) ಬ್ರೇಕ್ ನೀಡಬೇಕಾದ ಸಂದರ್ಭ ಬಂದೇ ಬರುತ್ತದೆ. ವಿವಾಹವಾದ ನಂತರ ಇರುವ ಉದ್ಯೋಗವನ್ನು ತ್ಯಜಿಸಬೇಕಾಗುತ್ತದೆ. ಹೊರಗಡೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಕೆಲವು ತಿಂಗಳು, ವರ್ಷಗಳ ನಂತರ ಉದ್ಯೋಗ ಮಾಡಬೇಕೆನಿಸುತ್ತದೆ ಆದರೆ, ಮತ್ತೆ ಉದ್ಯೋಗಕ್ಕೆ ಎಲ್ಲಿ ಹುಡುಕುವುದು. ಚಿಂತೆ ಬೇಡ!. ಎರಡನೇ ಬಾರಿ ವೃತ್ತಿ ಶುರುಮಾಡುವ ಮಹಿಳೆಯರಿಗೆ ಈ ಕಂಪನಿಗಳು ಅವಕಾಶ ನೀಡುತ್ತದೆ.

 

ಜಾಬ್ ಫಾರ್ ಹರ್ (Job for Her): ಜಾಬ್ ಫಾರ್ ಹರ್ ಸಂಸ್ಥೆ ಬೆಂಗಳೂರಿನಲ್ಲಿದೆ. 2015 ರಲ್ಲಿ ನೇಹಾ ಬಗಾರಿಯಾ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ ಎರಡು ವರ್ಷಗಳಿಂದ ಸಾಕಷ್ಟು ಮಹಿಳೆಯರಿಗೆ ಕೆಲಸ ಕೊಡಿಸಿದ್ದು ಸುಮಾರು 25ಕ್ಕೂ ಹೆಚ್ಚು ಮಂದಿ ಈ ಜಾಬ್​ಫಾರ್ ಹರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಫುಲ್ ಟೈಮ್ ಜಾಬ್ ಜೊತೆಗೆ ಪಾರ್ಟ್ ಟೈಂ, ವರ್ಕ್ ಫ್ರಂ ಹೋಮ್, ಸ್ವ ಉದ್ಯೋಗ, ಸ್ಟಾರ್ಟ್ ಅಪ್ (Start up) ಸೇರಿದಂತೆ ಎಲ್ಲ ರೀತಿಯ ಅವಕಾಶಗಳನ್ನು ಈ ಸಂಸ್ಥೆ ನೀಡುತ್ತದೆ.

 

ಹರ್ ಸೆಕೆಂಡ್ ಇನ್ನಿಂಗ್ಸ್ (Her Second Innings) : ಹೆಸರಿನಲ್ಲೇ ಇದೆ ಎರಡನೇ ಬಾರಿ ವೃತ್ತಿ ಜೀವನ ಎಂದು. ಹಾಗಾಗಿ ಈ ಸಂಸ್ಥೆ ಎರಡನೇ ಬಾರಿ ವೃತ್ತಿ ಜೀವನಕ್ಕೆ ಎಂಟ್ರಿ ಕೊಡುವ ಮಹಿಳೆಯರಿಗೆ ಸಹಾಯ ಮಾಡಲಿದೆ. ಮನೆಯಿಂದಲೇ ಕೆಲಸ, ಪೂರ್ಣ ಕೆಲಸ, ಪಾರ್ಟ್ ಟೈಂ ಕೆಲಸ ಸೇರಿದಂತೆ ಉದ್ಯೋಗದ ಜೊತೆ ಮಹಿಳೆಯರ ಕೌಶಲ್ಯ ವೃದ್ಧಿಸುವ ತರಬೇತಿಗಳನ್ನು ಈ ಕಂಪನಿ ನಡೆಸುತ್ತದೆ.

 

ಶಿರೋಜ್ (Shiroz) : ಶಿರೋಜ್ ಕಂಪನಿಯ ಸಂಸ್ಥಾಪಕ ನೋಯ್ಡಾ ನಿವಾಸಿ ಸೈರ್ ಚಾಹಲ್. ಈ ಕಂಪನಿ ಮಹಿಳೆಯರಿಗೆ ಸಹಾಯ ಮಾಡಲು ಮುಂದಾಗಿದೆ. ಈ ಸಂಸ್ಥೆಯು ವಿಶೇಷವಾಗಿ ಮನೆಯಿಂದ ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಸಹಾಯ ಮಾಡುತ್ತದೆ. ಮಹಿಳೆಯರು ಉದ್ಯೊಗ ಮಾಡಲಾರದೆ ಮನೆಯಲ್ಲೇ ಇರಬಾರದು ಎಂಬುದು ಈ ಸಂಸ್ಥೆಯ ಉದ್ದೇಶ.

 

ಅವತಾರ್ ಐ ವಿನ್ : ಈ ಕಂಪೆನಿಯನ್ನು 2005ರಲ್ಲಿ ಡಾಕ್ಟರ್ ಸೌಂದರ್ಯ ರಾಜೇಶ್ ಪ್ರಾರಂಭಿಸಿದ್ದಾರೆ. ಈ ಕಂಪನಿ ಎರಡನೇ ಬಾರಿ ವೃತ್ತಿ ಜೀವನ ಶುರು ಮಾಡಲು ಬಯಸುವ ಮಹಿಳೆಯರಿಗೆ ಸಹಾಯ ಮಾಡುತ್ತದೆ. ಈವರೆಗೆ 8 ಸಾವಿರಕ್ಕೂ ಹೆಚ್ಚು ಕಂಪನಿಗಳಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವ ಕೆಲಸವನ್ನು ಅವತಾರ್ ಐ ವಿನ್ ಮಾಡಿದೆ.

ಇದನ್ನೂ ಓದಿ : ಅವಧಿ ಮೊದಲೇ ಪದವಿ ಪಡೆಯಲು ವಿಶ್ವವಿದ್ಯಾಲಯದಿಂದ ಅವಕಾಶ ಬೇಗ ಓದಿದ್ರೆ ಬೇಗ ಕೆಲಸಕ್ಕೆ ಸೇರ್ಬೋದು

 

Leave A Reply

Your email address will not be published.