Miss World pageant: 27ವರ್ಷಗಳ ನಂತರ ಭಾರತದಲ್ಲಿ ನಡೆಯಲಿದೆ ಮಿಸ್‌ವರ್ಲ್ಡ್ ಕಾಂಪಿಟೇಶನ್!
Missworld competition show Miss World Competition will be held in India after 27 years
Miss World pageant: ಭಾರತೀಯರಿಗೆ ಒಂದು ಖುಷಿಯ ಸುದ್ದಿ. ಸೌಂದರ್ಯಪ್ರಿಯರಿಗೆ ಮಿಸ್‌ವರ್ಲ್ಡ್ ಸ್ಪರ್ಧೆಯ (Miss World pageant) ಕುರಿತು ಗೊತ್ತೇ ಇದೆ. ಈ ಬಾರಿ 71ನೇ ಮಿಸ್‌ವರ್ಲ್ಡ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.
ಅಂದ ಹಾಗೆ 27ವರ್ಷಗಳ ನಂತರ ಅವಕಾಶ ಭಾರತಕ್ಕೆ ದೊರಕಿದೆ. ಈ ಬಾರಿಯ ಮಿಸ್‌ವರ್ಲ್ಡ್ ಸ್ಪರ್ಧೆಯ ಫಿನಾಲೆ ಭಾರತದಲ್ಲಿ ನಡೆಯಲಿದೆ. ಮಿಸ್‌ವರ್ಲ್ಡ್ ಆರ್ಗನೈಸೇಶನ್‌ನ ಮುಖ್ಯಸ್ಥೆ ಸಿಇಒ ಜುಲಿಯಾ ಮೊರ್ಲೇ ಅವರು ಹೇಳಿರುವ ಹಾಗೆ, ಈ ಬಾರಿ 71ನೇ ಮಿಸ್‌ವರ್ಲ್ಡ್ ಫಿನಾಲೆಗೆ ಭಾರತ ಆಯ್ಕೆ ಆಗಿದ್ದು ನಿಜಕ್ಕೂ ಸಂತೋಷದ ವಿಷಯ. ಭಾರತದ ಸಂಸ್ಕೃತಿ, ವಿಶ್ವಪ್ರಸಿದ್ಧ ತಾಣಗಳನ್ನು ಭೇಟಿಯಾಗಲು ನಾನು ಉತ್ಸುಕಳಾಗಿದ್ದೇನೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಮಿಸ್‌ವರ್ಲ್ಡ್ ಸ್ಪರ್ಧೆಯನ್ನು ಆಯೋಜಿಸುವ ಅವಕಾಶ 1996ರಲ್ಲಿ ಭಾರತಕ್ಕೆ ಲಭಿಸಿತ್ತು. 130ದೇಶಗಳಿಂದ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಒಂದು ತಿಂಗಳುಗಳ ಕಾಲ ನಡೆಯುವ ಈ ಸ್ಪರ್ಧೆಯಲಿದ್ದು, ಗ್ರಾಂಡ್ ಫಿನಾಲೆಯು 2023 ನವೆಂಬರ್, ಡಿಸೆಂಬರ್‌ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.