Honesty Story: ಆಟೋ ಹತ್ತಿ ಅಂದು ದುಡ್ಡು ಕೊಡದೇ ಹೋಗಿದ್ದ: 30 ವರ್ಷಗಳ ನಂತ್ರ ಹುಡುಕ್ಕೊಂಡು ಬಂದು ಅದರ 100 ಪಟ್ಟು ನೀಡಿದ !
Honesty story: ಉಂಡು ಹೋದ, ಕೊಂಡು ಹೋದ ಕೇಳಿದ್ದೇವೆ, ಉಂಡ ಮನೆಗೆ ದ್ರೋಹ ಬಗೆಯೋರು ಕೇಳಿದ್ದೇವೆ. ಆದರೆ ಇಲ್ಲೊಬ್ಬನ ಕಥೆ (Honesty story) ಕೇಳಿದಾಗ ನೀವು ಭಾವುಕಾರಾಗುವುದರಲ್ಲಿ ಸಂಶಯವಿಲ್ಲ. ಇಲ್ಲಿ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಮಾಡಿದ್ದ ಸಾಲವನ್ನು 30 ವರ್ಷಗಳ ನಂತರ ಹಿಂದಿರುಗಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, 1993ರಲ್ಲಿ ಮೂವಾಟುಪುಳದಲ್ಲಿ ಆಟೋ ಓಡಿಸುತ್ತಿದ್ದ ಕೋಳಂಚೇರಿಯ ವಲ್ಯಾತುಟೇಲ್ ಬಾಬು ಎಂಬುವರ ಆಟೋ ಎಸ್.ಆರ್.ಅಜಿತ್ ಅವರು ಹತ್ತಿದ್ದಾರೆ. ಗಮ್ಯಸ್ಥಾನ ತಲುಪಿದ ನಂತರ ತಮ್ಮ ಬಳಿ ಹಣವಿಲ್ಲ, ಮತ್ತೊಂದು ದಿನ 100 ರೂಪಾಯಿ ಕೊಡುವುದಾಗಿ ಭರವಸೆ ನೀಡಿ ಹೋಗಿದ್ದರಂತೆ.
ಸಾಲ ಪಡೆದ ಅದೇ ಬಾಲಕ ಇಂದು ಕೇರಳದ (Kerala) ತಿರುವನಂತಪುರದ ಶಿಕ್ಷಕರೊಬ್ಬರು 30 ವರ್ಷಗಳ ನಂತರ ತಾವೂ ಆಟೋ ಚಾಲಕನಿಗೆ (Auto Driver) ನೀಡಬೇಕಾದ ಹಣವನ್ನು ನೂರು ಪಟ್ಟು ಪಾವತಿಸಿ ಮಾದರಿಯಾಗಿದ್ದಾರೆ.
ವಿಶೇಷವೆಂದರೆ ಆಟೋ ಚಾಲಕನಿಗೆ ದುಡ್ಡು ಕೊಟ್ಟ ಪ್ರಯಾಣಿಕನ ಬಗ್ಗೆ ಯಾವುದೇ ನೆನಪಿಲ್ಲ. 30 ವರ್ಷಗಳ ಹಿಂದೆ ಕೊಳಂಚೇರಿಯ ವಿ ಬಾಬು ಎಂಬುವವರ ಆಟೋವನ್ನು ಅಂದು ವಿದ್ಯಾರ್ಥಿಯಾಗಿದ್ದ ಎಸ್.ಆರ್.ಅಜಿತ್ ಎಂಬುವವರು ಆಟೋ ಹತ್ತಿದ್ದರು. ಆದರೆ ಆಟೋಗೆ ನೀಡಬೇಕಾದ ಹಣ ಅವರ ಬಳಿ ಇರಲಿಲ್ಲ, ನಂತರ ಕೊಡುವುದಾಗಿ ಹೇಳಿ ಹೋಗಿದ್ದರಂತೆ. ಇದೀಗ 3 ದಶಕಗಳ ಬಳಿಕ ಆಟೋ ಚಾಲನಕನನ್ನು ಹುಡುಕಿ ಆತನ ಮನೆಗೆ ಬಂದು ದೊಡ್ಡ ಮೊತ್ತವನ್ನು ಕೊಟ್ಟು ಹೋಗಿದ್ದಾರೆ.
ಆದರೆ ಈ ಘಟನೆಯನ್ನು ಆಟೋ ಚಾಲಕ ಬಾಬು ಮರೆತಿದ್ದಾನೆ. ಆದರೆ ಇಂದು ಶಿಕ್ಷಕರಾಗಿರುವ ಅಜಿತ್ ಮರೆತಿಲ್ಲ. ಸರಿಯಾಗಿ 30 ವರ್ಷಗಳ ನಂತರ ಬುಧವಾರ ಅಜಿತ್ ಕೊಳಂಚೇರಿಯಲ್ಲಿರುವ ಬಾಬು ಮನೆಗೆ ತೆರಳಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ. 1993ರಲ್ಲಿ ಆಟೋ ಚಾರ್ಜ್ ಕೊಡಲು ದುಡ್ಡಿರಲಿಲ್ಲ, ಸಾಲ ಹೇಳಿ ಹೋಗಿದ್ದೆ ಎಂದು ನೆನಪಿಸಿದ್ದಾರೆ. ನಂತರ ಆ ಹಣಕ್ಕೆ ನೂರು ಪಟ್ಟು ಹಣವನ್ನು ನೀಡಿ ಧನ್ಯವಾದ ಹೇಳಿದ್ದಾರೆ.
ಅದಲ್ಲದೆ ಅಜಿತ್ ತಮಗೆ ಹಣವಿಲ್ಲದಿದ್ದಾಗ ಸಹಾಯ ಮಾಡಿದ ಆಟೋ ಡ್ರೈವರ್ನನ್ನು ತುಂಬಾ ವರ್ಷಗಳಿಂದಲೂ ಹುಡುಕುತ್ತಿದ್ದರಂತೆ. ತಮ್ಮ ಪರಿಷಯಸ್ಥರು, ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದರಂತೆ. ಕೊನೆಗೆ ಸ್ನೇಹಿತರೊಬ್ಬರಿಂದ ಚಾಲಕನ ವಿಳಾಸ ಸಿಕ್ಕಿದೆ.
ಸದ್ಯ ಕೆಲವು ದಿನಗಳಲ್ಲಿ ಆಟೋ ಚಾಲಕನ ಮಗಳ ಮದುವೆಗೆ ಇದೆ ಎಂದು ತಿಳಿದುಕೊಂಡ ಅಜಿತ್, ಒಂದು ಕವರ್ನಲ್ಲಿ ಹಣವನ್ನಿಟ್ಟು ಆಟೋ ಚಾಲಕನಿಗೆ ಕೊಟ್ಟಿದ್ದಾರೆ. ತಾನು ಹೋದ ನಂತರ ಅದನ್ನು ತೆಗೆಯಿರಿ ಎಂಬ ಷರತ್ತಿನೊಂದಿಗೆ ಹಣ ಪಾವತಿಸಿದ್ದಾರೆ. ಆತನ ಹೋದ ನಂತರ ಕವರ್ ತೆರೆದ ಆಟೋ ಚಾಲಕರಿನಿಗೆ ಶಾಕ್ ಆಗಿದೆ. ಏಕೆಂದರೆ ಆ ಕವರ್ನಲ್ಲಿ 100 ರೂ ಬದಲಾಗಿ ಅದಕ್ಕೆ 100 ಪಟ್ಟು ಹೆಚ್ಚು ಹಣ ಇತ್ತು ಎಂಬುದು ಬೆಳಕಿಗೆ ಬಂದಿದೆ.
ಒಟ್ಟಿನಲ್ಲಿ ಇಂತಹ ಪ್ರಾಮಾಣಿಕ ವ್ಯಕ್ತಿತ್ವ ಇದ್ದಲ್ಲಿ ಸಮಾಜದಲ್ಲಿ ನಂಬಿಕೆ, ವಿಶ್ವಾಸ ಗಳಿಗೆ ಕೊರತೆ ಇರುವುದಿಲ್ಲ ಅನಿಸುತ್ತದೆ.
ಇದನ್ನೂ ಓದಿ : ಬೆಂಗಳೂರು-ತಿರುಪತಿ ಹೆಲಿಕಾಪ್ಟರ್ ಸೇವೆ ಆರಂಭ