ʻಗೃಹಲಕ್ಷ್ಮೀ ಯೋಜನೆʼಗೆ ಲಕ್ಷ್ಮಿ ಹೆಬ್ಬಾಳ್ಕರ್ ತವರೂರು ಬೆಳಗಾವಿಯಲ್ಲಿ ಚಾಲನೆ ..!
Belgaum : ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ʻಗೃಹಲಕ್ಷ್ಮೀ ಯೋಜನೆʼಗೆ ಲಕ್ಷ್ಮಿ ಹೆಬ್ಬಾಳ್ಕರ್ ತವರೂರು ಬೆಳಗಾವಿಯಲ್ಲಿ (Belgaum)ಚಾಲನೆ ನೀಡಲು ತೀರ್ಮಾನಿಸಲಾಗಿದೆ.
ಕರ್ನಾಟಕ ವಿಧಾನ ಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಮಾನದಂಡಗಳ ಆಧಾರದಲ್ಲಿ ಜಾರಿಗೆ ತರಲಾಗಿದೆ. ಈ ಬೆನ್ನಲ್ಲೆ ಬಹುನೀರಿಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಸಾರಿಗೆ ಬಸ್ ಪ್ರಯಾಣ ಯೋಜನೆಗೂ ಸದ್ಯದಲ್ಲಿ ಚಾಲನೆ ನೀಡಲು ಭಾರೀ ಸಿದ್ದತೆ ನಡೆಸಲಾಗುತ್ತಿದೆ. ಐದು ಕಾಂಗ್ರೆಸ್ ಗ್ಯಾರಂಟಿಗಳ ಜಾರಿಗೊಳಿಸುವ ಬಗ್ಗೆ ಚರ್ಚೆ ಬೆನ್ನಲ್ಲೆ ಇದೀಗ ʻಗೃಹಲಕ್ಷ್ಮೀ ಯೋಜನೆʼ ಯಾವ ಜಿಲ್ಲೆಯಲ್ಲಿ ಚಾಲನೆ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ.
ಜೂ.11ರಂದು ಮೆಜೆಸ್ಟಿಕ್‌ನಿಂದ ನಾಡಿನ ಶಕ್ತಿಕೇಂದ್ರವಾದ ವಿಧಾನಸೌಧಕ್ಕೆ ತೆರಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷವಾಗಿ ಚಾಲನೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣವಾದ ಬೆಳಗಾವಿ ಜಿಲ್ಲೆಯಿಂದಲೇ ಈ ಮಹತ್ವದ ಯೋಜನೆ ಚಾಲನೆ ನೀಡಲು ಚಿಂತನೆ ನಡೆಸಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರವನ್ನು ಬೆಳಗಾವಿಯಿಂದಲೇ ಶುರು ಮಾಡಿದ್ದು, ಈ ಬಾರಿ ಬಹುಮತದೊಂದಿಗೆ ಗೆಲುವನ್ನು ಸಾಧಿಸಿ ಕಾಂಗ್ರೆಸ್ ಆಡಳಿತ ಪಟ್ಟವೇರಿದೆ. ಈ ಕಾರಣದಿಂದಾಗಿ ಗೃಹ ಲಕ್ಷ್ಮೀ ಯೋಜನೆಗೆ ಬೆಳಗಾವಿ ಜಿಲ್ಲೆಯಿಂದಲೇ ಚಾಲನೆ ನೀಡುವ ಬಗೆ ಮಹತ್ವದ ಚರ್ಚೆ ನಡೆಸಲಾಗುತ್ತಿದೆ . ಈಗಾಗಲೇ ಆಗಸ್ಟ್ 17 ಅಥವಾ 18 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲೇ ಚಾಲನೆ ನೀಡುವ ಬಗ್ಗೆ ಭಾರೀ ಚರ್ಚೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ :ಉಚಿತ ಪ್ರಯಾಣದ ಖುಷಿಯಲ್ಲಿರೋ ಮಹಿಳೆಯರಿಗೆ ಇನ್ನೊಂದು ಬಿಗ್ ಗಿಫ್ಟ್