” ಸಾರೂ…ಪ್ಲೀಸೂ..ಮದ್ಯದ ರೇಟ್ ಹೆಚ್ಚು ಮಾಡಬೇಡಿ ಬಾಸೂ….” ಸಿಎಂ ಸಿದ್ದುಗೆ ಎಣ್ಣೆ ಪ್ರಿಯ ಕುಡುಕರ ಸಂಘದಿಂದ ವಿಶಿಷ್ಟ ಪತ್ರ !

CM Siddaramaiah :”ಸಾರೂ….ಪ್ಲೀಸ್… ಬಾಸೂ.. ಮದ್ಯದ ರೇಟ್​ ಹೆಚ್ಚಳ ಮಾಡಬೇಡಿ ಬಾಸೂ…, ಮದ್ಯದ ರೇಟ್ ಹೆಚ್ಚು ಮಾಡಿದ್ರೆ ಬಡವರಿಗೇ ಬರೆ ಬಿದ್ದಂತೆ. ಈಗಿರುವ ಸುಂಕವನ್ನು ಕಡಿಮೆ ಮಾಡಿ ಮದ್ಯಪ್ರಿಯರ ಆರ್ಥಿಕ ಹೊರೆ ಇಳಿಸಿ ಬಾಸೂ…” ಎಂದು ಸಿಎಂ ಸಿದ್ದರಾಮಯ್ಯ(CM Siddaramaiah)ಹಾಗೂ ಅಬಕಾರಿ ಸಚಿವರಿಗೆ ಕುಡುಕರ ಸಂಘ ಅಲಿಯಾಸ್ ಮದ್ಯ ಪ್ರಿಯರ ಸಂಘ ಪತ್ರ ಬರೆದಿದೆ. ಅವರು ಬರೆದ ಪತ್ರ ಆಕರ್ಷಕವಾಗಿದ್ದು ಅದನ್ನು ಯಥಾ ಸ್ಥಿತಿಯಲ್ಲಿ ನಿಮಗೆ ಕೊಡುತ್ತಿದ್ದೇವೆ.

 

“ಮಾನ್ಯರೇ, ಮಾನ್ಯ ಮುಖ್ಯಮಂತ್ರಿ ಮತ್ತು ಮದ್ಯ ಪ್ರೀಯರ ಇಲಾಖೆ ಅಂದರೆ ಅಬಕಾರಿ ಇಲಾಖೆಯ ಸಚಿವರಲ್ಲಿ ವಿನಂತಿಸುವುದೇನೆಂದರೆ, ರಾಜ್ಯದಲ್ಲಿ ಜಾತಿ, ಧರ್ಮ, ಬಡವ, ಬಲ್ಲಿದ, ರಾಜಕಾರಣಿ, ಡಾಕ್ಟರ್, ಪತ್ರಕರ್ತ,ಸರಕಾರಿ ನೌಕರರು,ವಕೀಲರು, ಎಂಬ ತಾರತಮ್ಯ ಇಲ್ಲದೆ ಎಲ್ಲಾ ವರ್ಗದವರು ಮದ್ಯ ಪ್ರೀಯರು ಅಹಾರ ಸಂಸ್ಕೃತಿಯ ಭಾಗವಾಗಿ ಮದ್ಯ ಸೇವನೆ ಮಾಡುತ್ತಿದ್ದಾರೆ. ಮದುವೆ, ಹಬ್ಬ ಹರಿದಿನಗಳಲ್ಲಿ ನಮ್ಮ ಅರಾಧನೆ ಪದ್ದತಿಯಲ್ಲಿ ಮತ್ತು ಸಂತೋಷ ಕೂಟದಲ್ಲಿ ಮದ್ಯ ಪ್ರೀಯರು ಮದ್ಯ ಸೇವನೆ ಮಾಡುತ್ತಿದ್ದಾರೆ.” ಎಂದು ಪತ್ರ ಬರೆದಿದೆ ಕುಡುಕರ ಯಾನೆ ಮದ್ಯ ಪ್ರಿಯರ ಸಂಘ.

ಮುಂದುವರಿದು, ‘ ಮದ್ಯ ಪ್ರೇಮಿ ದಿನಕೂಲಿ ನೌಕರ ನಿತ್ಯ ಸರಾಸರಿ 180 Ml ( ಒಂದು ಕ್ವಾರ್ಟರ್) ಕುಡಿತಾನೆ, 180 MLಗೆ 200 ರಿಂದ 250 ರೂಪಾಯಿ ಖರ್ಚಾಗುತ್ತೆ. ಈ ಲೆಕ್ಕದಲ್ಲಿ ತಿಂಗಳಿಗೆ 7,500 ರೂಪಾಯಿ ಆದರೆ ಆತನಿಗೆ ವರ್ಷಕ್ಕೆ 90,000 ರೂಪಾಯಿ ಕುಡಿಯಲು ಬೇಕೇ ಬೇಕು. ಮದ್ಯದ ದರ ಮತ್ತೆ ಹೆಚ್ಚು ಮಾಡಿದ್ರೆ ಮಧ್ಯಮ ವರ್ಗ ಮತ್ತು ಬಡವರಿಗೆ ಇನ್ನಷ್ಟು ಹೊರೆಯಾಗಲಿದೆ. ಹೀಗಾಗಿ ಮದ್ಯದ ಮೇಲಿನ ಸುಂಕ ಹೆಚ್ಚಳ ಮಾಡಬೇಡಿ. ಕಡಿಮೆ ಮಾಡುವ ಬಗ್ಗೆ ಪರಿಶೀಲನೆ ಮಾಡಿ. ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ , ಬಿಯರ್ ಮೇಲಿನ ಸುಂಕ ಹೆಚ್ಚಿಸಬೇಡಿ, ಸುಂಕವನ್ನು ಕಡಿಮೆ ಮಾಡಿ ಮದ್ಯಪ್ರಿಯರ ಆರ್ಥಿಕ ಹೊರೆ ಇಳಿಸಿ” ಎಂದು ಪತ್ರದಲ್ಲಿ ವಿನಂತಿಸಲಾಗಿದೆ.

ನಮ್ಮ ಜನರು ಮದುವೆ, ಹಬ್ಬ, ಆರಾದನೆ, ಸಂತೋಷ ಕೂಟದಲ್ಲಿ ಮದ್ಯ ಸೇವನೆ ಮಾಡ್ತಿದ್ದಾರೆ. ನಮ್ಮ ಸಂಸ್ಕೃತಿಯಲ್ಲಿ ಸುರಪಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಸರ್ಕಾರಕ್ಕೆ ಇದರಿಂದ ಸಾವಿರಾರು ಕೋಟಿ ಆದಾಯ ಕೂಡಾ ಬರ್ತಿದೆ. ಇಷ್ಟೆಲ್ಲಾ ಆದಾಯ ನಮ್ಮಿಂದ ಬರ್ತಿದ್ರೂ ಮದ್ಯ ಪ್ರೇಮಿಗಳ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ದಯವಿಟ್ಟು ಮದ್ಯದ ರೇಟ್​ ಹೆಚ್ಚಳ ಮಾಡಬೇಡಿ ಬಾಸ್ ‘ ಎಂದು ಪತ್ರದಲ್ಲಿ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ. ಕುಡುಕರ ಸಂಘ ಸರ್ಕಾರಕ್ಕೆ ಬರೆದ ಈ ವಿಶಿಷ್ಟ ಪತ್ರ ಇದೀಗ ವೈರಲ್ ಆಗಿದೆ.

Leave A Reply

Your email address will not be published.